ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ

ಸಂಪದ ನಿರ್ವಾಹಣ ಸಮೂಹಕ್ಕೆ ವಂದನೆಗಳು.

ಸಂಪದದ ಹೊಸ ವಿನ್ಯಾಸ ಚೆನ್ನಾಗಿದೆ, ಶುಭಾಷಯಗಳು!!. ಆದರೆ ಈ ವಿನ್ಯಾಸ ಸಧ್ಯಕ್ಕೆ ಅತ್ಯಂತ ಜನಪ್ರಿಯ ಜಾಲದರ್ಶಕವೆಂದೆನಿಸಿಕೊಂಡಿರುವ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸರಿಯಾಗಿ ಮೂಡಿ ಬರುತ್ತಿಲ್ಲ. ಸಂಪದದ ಹೊಸ ಆವೃತ್ತಿ ಇನ್ನೂ ನಿರ್ಮಾಣ ಹಂತದಲ್ಲಿರುವುದು ನನಗೆ ತಿಳಿದಿದೆ ಆದರೂ ಈ ವಿಷಯ ನಿಮ್ಮ ಗಮನಕ್ಕೆ ತರುವುದು ಸೂಕ್ತವೆಂದೆನಿಸಿತು. ಸಧ್ಯದಲ್ಲಿಯೆ ಈ ಬಗ್ಗೆ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇನೆ.

ಬೇಸಿಗೆ

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ!

ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು.

ತಂತ್ರಾಂಶಿಗಳು ಎದುರಿಸುತ್ತಿರುವ ತೊಂದರೆಗಳು

ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು.

ಅಂತರಜಾಲದಲ್ಲಿ ಯು.ಆರ್. ಅನಂತಮೂರ್ತಿ

ಡಾ.ಯು.ಆರ್. ಅನಂತಮೂರ್ತಿಯವರ ಇತ್ತೀಚಿನ ಬರೆಹಗಳಿರುವ ಬ್ಲಾಗ್ ಋಜುವಾತು ಈಗ ಅಂತರಜಾಲದಲ್ಲಿ ಲಭ್ಯವಿವೆ. ಇಲ್ಲಿರುವ ಲೇಖನಗಳು ಅವರು ಪ್ರತೀ ವಾರ ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ ಬರೆಹಗಳು.

ಹೊಸ ಸಂಪದ ಚೆನ್ನಾಗಿದೆ

ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ?

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
 

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.

ಬೆಳ್ದಿಂಗಳು ಮತ್ತು ಕರ್ದಿಂಗಳು

ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ?
ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ !

ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ

ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ.

ತರಂಗ ಯುಗಾದಿ (೨೦೦೬) ವಿಶೇಷಾಂಕ

ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ.

ಕವನ ಬರೆವ ಹವ್ಯಾಸವುಳ್ಳವರಿಗಾಗಿ

ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ .

ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು
ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ .