ಯಾವನ್ಯಾಯ
ಬರಹ
ಕಲಿಯುಗದ ಕುಬೇರ(ವೆಂಕಟೇಶ್ವರ) ಹಿಂದುವಾಗಿದ್ದು
ಅಲಮೇಲುಮಂಗಿ ಮುಸ್ಲೀಂಹುಡುಗಿಯನ್ನು ವಿವಾಹವಾಗಿದ್ದರೂ
ಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆ
ಅಲಮೇಲಮ್ಮನ ಮಗಳು ಅನಿತಾಳನ್ನು ಮದುವೆಯಾಗಲು
ಎಲ್ಲಿಲ್ಲದ ಗೊಡವೆ ಕಲಿಯುಗ ಇದುವೆ
ನಮ್ಮ ಪೂರ್ವಿಕರಾದ ಸಂತನು(ಮಹಾಭಾರತದ ಮೊಲಪುರುಷ)
ಕ್ಷತ್ರಿಯನಾಗಿದ್ದೂ ಮತ್ಸಗಂಧಿಯನ್ನು ವರಿಸಿದ
ಕೃಷ್ಣ ಯಾದವನಾದರೂ ಕ್ಷತ್ರಿಯ ಕನ್ಯೆ ರುಕ್ಮಿಣಿಯನ್ನ ವರಿಸಿದ
ಭೀಮ ಕ್ಷತ್ರಿಯನಾಗಿದ್ದೂ ರಾಕ್ಷಸ ಕನ್ಯೆ ಹಿಡಂಬಿಯನ್ನು ವರಿಸಿದ
ಅರ್ಜುನಕೂಡ ಯಾದವ ಕನ್ಯೆ ಸುಬದ್ರೆಯನ್ನು ವರಿಸಿದ
ಶಿವ ಶೈವನಾದರೂ ಕ್ಷತ್ರಿಯಕನ್ಯೆ ದಾಕ್ಷಾಯಣಿಯನ್ನು ವರಿಸಿದ
ಎಂದಮೇಲೆ ದೇವಾನು ದೇವತೆಗಳಿಗಿಲ್ಲದ ನ್ಯಾಯ-ನೀತಿ
ಸಾಮಾನ್ಯರಾದ ನಮಗೇಕೆ ಎನಿಸುವುದಿಲ್ಲವೆ ?
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ