ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಪರ ಭಟ್ಟ - ಲಲಿತ ಪ್ರಬಂಧ

ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ ಬಳಿಕ ಸಿಗುವ ಅಸ್ತಿಯನ್ನು (ಬೂದಿ, ಮೂಳೆ) ನದಿಯಲ್ಲೋ ಅಥವಾ ಸಮುದ್ರದಲ್ಲೋ ಬಿಡುವರು. ನಂತರ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗದೇ ಅಲ್ಲೇ ಓಡಾಡುತ್ತಿದೆ ಎನ್ನುವ ನಂಬಿಕೆಯಿಂದ ಆ ಆತ್ಮವನ್ನು ಒಂದು ಕಲ್ಲಿಗೆ ಆವಾಹನೆ (ಆಹ್ವಾನೆ - ಕರೆಯುವುದು) ಮಾಡುವರು. ಆ ಕಲ್ಲನ್ನು ಒಂದು ಕಡೆ ಇಟ್ಟು ಅದೇ ಸ್ಥಳದಲ್ಲಿಯೇ ಐದನೆಯ ಅಥವಾ ಆರನೆಯ ದಿನದಿಂದ ಆ ಪ್ರೇತಾತ್ಮಕ್ಕೆ ಶಾಂತಿ ದೊರಕಿಸಲು, ಮತ್ತು ದೇವ ಸ್ಥಾನಕ್ಕೆ ಕಳುಹಿಸಲು ಪ್ರಾರ್ಥಿಸುವರು. ಅದನ್ನೇ ಅಪರ ಕರ್ಮ ಎನ್ನುವರು. ಹತ್ತನೆಯ ದಿನ ನೆಂಟರುಗಳೆಲ್ಲರೂ ಆ ಕಲ್ಲಿಗೆ ನೀರು ಹಾಕುವರು. ಇದನ್ನು ಧರ್ಮೋದಕೆ ಎನ್ನುವರು. ಈ ಕ್ರಿಯೆಯಿಂದ ತಮಗೂ ಆ ಪ್ರೇತಾತ್ಮಕ್ಕೂ ಸಂಬಂಧ ಕಳೆದುಕೊಳ್ಳುವರು. ಸಮಾಜದಲ್ಲಿ ಈ ಕಾರ್ಯ ನಡೆಯಲೇ ಬೇಕೆಂಬ ಮೂಢ ನಂಬಿಕೆ ಬಂದಿರುವ ಕಾರಣಕ್ಕೋ ಏನೋ ಈ ಕ್ರಿಯೆ ಮಾಡಿಸುವ ಪುರೋಹಿತರು (ಪುರದ ಹಿತ ಬಯಸುವವರು?) ಹೆಚ್ಚಾಗಿ ಹಣ ಸುಲಿಯುವವರು. ಇನ್ನು ಪೂರ್ವ ಪ್ರಯೋಗ ಎಂದರೆ ದೇವತಾ ಕಾರ್ಯ ಮತ್ತು ನಾಮಕರಣ, ಮುಂಜಿ, ಮದುವೆ ಇತ್ಯಾದಿಗಳು. ಇದನ್ನು ಮಾಡಿಸಲು ಬಹಳಷ್ಟು ಪುರೋಹಿತರು ಸಿಗುವರು.

ಏಕೆ ಹೀಗಾಗುವುದು?

ಇಂದು ಬೆಳಗ್ಗೆ ಎಂದಿನಂತೆ ಇಲ್ಲಿಯ ಆನ್‍ಲೈನ್ ಪತ್ರಿಕೆಯಾದ ಮಿಡ್‍ಡೇ ಓದಲು ಹೋದಾಗ ಮೊದಲು ಕಂಡದ್ದೇ ಹೃದಯ ಕಲಕುವಂತಹ ಸುದ್ದಿ. ಅದೇನೆಂದರೆ ಮೊನ್ನೆ ವಿಪರೀತ ಮಳೆಯಾಗುತ್ತಿದ್ದು ಜನರೆಲ್ಲರಲ್ಲೂ ಜುಲೈ ೨೬ರ ಕಹಿ ನೆನಪಾಗಿ ದಾದರ ಸ್ಟೇಷನ್ನಿನಲ್ಲಿ ಲೋಕಲ್ ಟ್ರೈನ್ ಹತ್ತಲು ವಿಪರೀತ ಜನಸಂದಣಿ. ರೈಲ್ವೇ ಹಳಿಗಳ ಮೇಲೆ ನೀರು ನಿಂತು ಟ್ರೈನ್ ಸಂಚಾರ ಬಹಳ ಕಡಿಮೆಯಾಗಿದ್ದಿತ್ತು. ಜನರೆಲ್ಲರಿಗೂ ಎದುರಿಗೆ ಆಗೊಮ್ಮೆ ಈಗೊಮ್ಮೆ ಬರುವ ಲೋಕಲ್ ಟ್ರೈನ್ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಗಾಡಿ ಬಂದಾಗ ಹತ್ತಲು ಹೋಗಿ ಪ್ಲಾಟ್‍ಫಾರ್ಮ್ ಮೇಲೆ ಯಾರಾದರೂ ಬಿದ್ದರೆ, ಅವರನ್ನು ಎತ್ತುವ ವ್ಯವಧಾನವಿರದೇ, ಅದರ ಬದಲು ಅವರನ್ನು ತುಳಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದಿತು. ಹೀಗೆ ಹತ್ತಲು ಹೋದ ಎರಡೂವರೆ ತಿಂಗಳ ಗರ್ಭಿಣಿ ಹೆಂಗಸಿನ ಪರಿಸ್ಥಿತಿ ನೋಡಿ, ನನ್ನ ತಲೆ ತಿರುಗಿತು. ಛೇ!ಇಂತಹ ನಿಷ್ಕರುಣಿ ಜನಗಳೂ ಇರುತ್ತಾರೆಯೇ.

ಮಯೂರ ಸೆಪ್ಟಂಬರ್ 2005ರ ಸಂಚಿಕೆ

ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ ತಿಂಗಳಿನ ಸಂಚಿಕೆ ಹಾಗೆ ಓದಿಸಿಕೊಂಡುಹೋಯಿತು.

ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು

ಒಬ್ಬಾತನ ಹೆಂಡತಿಗೆ ಬಹಳ ಕಾಯಿಲೆಯಾಗಿತ್ತು. ಗಂಡನನ್ನು ಸಮೀಪಕ್ಕೆ ಕರೆದು ಹೇಳಿದಳು-- “ನನಗೆ ನಿನ್ನ ಮೇಲೆ ತುಂಬ ಪ್ರೀತಿ. ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ ಸಾವು ಸಮೀಪವಿದೆ. ನಿನ್ನನ್ನು ಬಿಟ್ಟು ಇರಲಾರೆ. ನನ್ನ ಪ್ರೀತಿಗೆ ನೀನು ಮೋಸ ಮಾಡಲಾರೆಯೆಂಬ ನಂಬಿಕೆ ನನಗಿದೆ. ನಾನು ಸತ್ತ ಮೇಲೆ ನೀನು ಬೇರೆಯ ಹೆಂಗಸರನ್ನು ನೋಡುವುದಿಲ್ಲ, ಮದುವೆಯಾಗುವುದಿಲ್ಲ ಎಂದು ನನಗೆ ಮಾತು ಕೊಡಬೇಕು. ನೀನು ಮಾತಿಗೆ ತಪ್ಪಿದರೆ ಭೂತವಾಗಿ ಬಂದು ಕಾಡುತ್ತೇನೆ”

ಫೆಬ್ರವರಿ ೨೧ -ನಾಶವಾಗುತ್ತಿರುವ ಭಾಷೆಗಳು- ಕನ್ನಡ

http://www.ethnolog… ಎಂಬ ತಾಣದಲ್ಲಿ ಇದೀಗ ಜಗತ್ತಿನ ಭಾಷೆಗಳ ಪೈಕಿ ಯಾವ ಯಾವ ಭಾಷೆಗಳು ವಿನಾಶದ ಅಂಚಿನಲ್ಲಿವೆ ಎಂಬ ಬಹು ವಿಸ್ತೃತ ಮಾಹಿತಿ ಇದೆ. ಆಸಕ್ತರು ನೋಡಿ. ಸದ್ಯದಲ್ಲೆ ಅಲ್ಲಿ ಸಂಗ್ರಹಿಸಿದ ವಿವರಗಳನ್ನು ಈ ಬ್ಲಾಗ್ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ. ಭಾಷೆಗಳು ಕಣ್ಮರೆಯಾಗುವುದೆಂದರೆ ಬದುಕಿನ ವೈವಿಧ್ಯವೇ ಕಳೆದುಹೋದಂತೆ. ನೆನಪಿರಲಿ, ಕನ್ನಡ ಕೂಡ ಈ ಸರ್ವೆ ಪ್ರಾಕಾರ ಅಪಾಯದ ಅಂಚಿನಲ್ಲಿರುವ ಭಾಷೆ. ಈ ಬಗ್ಗೆ ತಿಳಿಯಲು ಕುತೂಹಲವಿದೆಯೇ? ಶ್ರೀ ಸುಗತ ಅವರು ಬರೆದಿರುವ ಎಕುಶೆ ಫೆಬ್ರವರಿ ಪುಸ್ತಕ ನೋಡಿ.

ನಿಮ್ಮಿ (ಕಥೆ)

ಕೆಯ ಹೆಸರು ನಿರ್ಮಲ. ಆದರೆ ಎಲ್ಲರೂ ಕರೆಯುವುದು ನಿಮ್ಮಿ ಎಂದು. ಮನೆ ಎಂದು ಹೇಳುಕೊಳ್ಳುವಂತಹ ಮನೆಯೇನೂ ಆಕೆಗೆ ಇಲ್ಲ. ಕೊಳೆಗೇರಿಯಲ್ಲೊಂದು ಚಿಕ್ಕ ಗುಡಿಸಲು. ಅಲ್ಲಿ ಅಮ್ಮನ ಜೊತೆ ಸಂಸಾರ. ಅಮ್ಮ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಿಮ್ಮಿ ಅಮ್ಮನ ಜೊತೆ ಕೆಲವೊಮ್ಮೆ ಆ ಮನೆಗೆಳಿಗೆ ಹೋಗುವುದೂ ಇದೆ. ಅಮ್ಮ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಬೀದಿಯ ಬದಿಯಲ್ಲಿರುವ ಕಸದ ತೊಟ್ಟಿ ಜಾಲಾಡುತ್ತಿರುತ್ತಾಳೆ. ಪ್ಲಾಸ್ಟಿಕ್, ಡಬ್ಬ, ಕಾಗದ, ಇತ್ಯಾದಿಗಳೆಲ್ಲ ಸಂಗ್ರಹಿಸಿ ಪಕ್ಕದ ಬೀದಿಯ ಖಾನ್ ಸಾಹೇಬನಿಗೆ ಕೊಟ್ಟರೆ ಕೈಗೆ ಸ್ವಲ್ಪ ಚಿಲ್ಲರೆ ಕಾಸು ಬೀಳುವುದು. ಒಂದು ಹೊತ್ತಿನ ಹೊಟ್ಟೆಯ ಸಮಸ್ಯೆ ಪರಿಹಾರವಾದಂತೆ. ಕಸದ ತೊಟ್ಟಿಯಲ್ಲೇ ಅಕೆಗೆ ಕೆಲವೊಮ್ಮೆ ಉಪಯುಕ್ತ ಸಾಮಾನು ಸಿಕಿದ್ದೂ ಇದೆ. ಉದಾಹರಣೆಗೆ ಕಳೆದ ತಿಂಗಳು ಸಿಕ್ಕಿದ ಪೆನ್ನು. ಶಾಲೆಗೆ ಸರಿಯಾಗಿ ಹೋಗದಿದ್ದರೂ ಅಲ್ಪ ಸ್ವಲ್ಪ ಬರೆಯಲು ಆಕೆಗೆ ಗೊತ್ತಿದೆ. ಆ ಪೆನ್ನು ಈಗಲೂ ನಿಮ್ಮಿಯ ಬಳಿ ಇದೆ.