“ಚಾಮಯ್ಯ” ಮೇಷ್ಟ್ರಿಗೆ ಗುರುದಕ್ಷಿಣೆ ಸಲ್ಲಿಸಿದಿರಾ?
(ಬರಹ ಡಾಟ್ ಕಾಮ್ ನಿಂದ)
ಈ ಬಗ್ಗೆ ದಟ್ಸ್ ಕನ್ನಡ ಪುಟ ನೋಡಿ.
ಇದ್ದಕ್ಕಿದ್ದಂತೆ ಅಶ್ವಥ್ ಅವರು ಸುದ್ದಿ ಬಾಯಿಗೆ ಬೀಳುವುದಕ್ಕೆ ಕಾರಣವಾದವರು ಕರ್ನಾಟಕ ಸರಕಾರದವರು. ಮಂತ್ರಿ ಮಹದೇವಪ್ರಸಾದ್ ಅವರು ಇತ್ತೀಚೆಗೆ ಅಶ್ವಥ್ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿ ಅವರಿಗೆ ಮಾಸಾಶನ ಕೊಡುವ ಭರವಸೆ ವ್ಯಕ್ತಪಡಿಸಿದರು. ಹಿರಿಯನಟನ ಪರಿಸ್ಥಿಯನ್ನು ಓದಿ ಅರಿತ ನಮ್ಮ ಓದುಗರು ಅಕ್ಕರೆಯ ಚಾಮಯ್ಯ ಮೇಷ್ಟರಿಗೆ ಆರೋಗ್ಯ ಸುಧಾರಿಸಲೆಂದು ಹಾರೈಸತೊಡಗಿದರು.
ಗುರು ದಕ್ಷಿಣೆ ಸಲ್ಲಿಸುವವರು ನೇರವಾಗಿ ಅಶ್ವಥ್ ಅವರ ಮನೆಗೇ ತಲುಪಿಸಲಿ ಎನ್ನುವುದು ನನ್ನ ಅಭಿಲಾಷೆ. ಹಾಗಾಗಿ, ಓದುಗರ ಕೋರಿಕೆಯನ್ನು ನಾನು ಅವರ ಮಗ ಶಂಕರ್ ಅಶ್ವಥ್ ಅವರ ಬಳಿ ನಿವೇದಿಸಿಕೊಂಡೆ. ಸ್ವಾಭಿಮಾನಿ ತಂದೆಯ ಮನವೊಲಿಸಿ ಶಂಕರ್ ಅವರು ತಂದೆಯ ಬ್ಯಾಂಕ್ ಅಕೌಂಟ್ ವಿವರಗಳನ್ನು ಕೊಟ್ಟರು. ಗುರು ದಕ್ಷಿಣೆ ಸಲ್ಲಿಸಲು ಉತ್ಸುಕರಾಗಿರುವವರು ಈ ಕೆಳಕಂಡ ವಿವರಗಳನ್ನು ಗುರುತುಹಾಕಿಕೊಳ್ಳಬಹುದು.
ಮನೆ ವಿಳಾಸ :
ಕೆ. ಎಸ್. ಅಶ್ವಥ್,
ಮನೆ ನಂ. ೯೨, ಕಲಾಶ್ರೀ,
೪ನೇ ಮುಖ್ಯರಸ್ತೆ, ಸರಸ್ವತೀಪುರಂ,
ಮೈಸೂರು ೫೭೦೦೦೯
ದೂರವಾಣಿ : ೦೮೨೧೨೫೪೩೭೮೭ಅಕೌಂಟ್ ವಿವರ :
K S Aswath
Canara Bank, Saraswathipuram, Mysore
A/c. No: 000000375
Branch Code No: CNRP0000876
MICR Code: 570015012
For more information:
Contact : Mr. Samshudhin ( Branch Manager)
Ph: +91-821-254 3118 or +91-821-254 3247