ಆಲ್ಬರ್ಟ್ ಐನ್‍ಸ್ಟೈನ್
ಎಲ್ಲದರಲ್ಲೂ ಪರಿಪೂರ್ಣತೆಯನ್ನು ಕಾಣಲು ಬಯಸುವುದು ಮತ್ತು ಎಲ್ಲದರಲ್ಲೂ ಒಂದು ಅಂತಿಮ ನಿರ್ಧಾರಕ್ಕೆ ಬರಲೇಬೇಕೆಂಬ ಹಂಬಲ - ಇವೆರಡೂ ನಮ್ಮ (ಮನುಷ್ಯ ಕುಲದ) ಮುಖ್ಯ ಸಮಸ್ಯೆಗಳು.
ಎಲ್ಲದರಲ್ಲೂ ಪರಿಪೂರ್ಣತೆಯನ್ನು ಕಾಣಲು ಬಯಸುವುದು ಮತ್ತು ಎಲ್ಲದರಲ್ಲೂ ಒಂದು ಅಂತಿಮ ನಿರ್ಧಾರಕ್ಕೆ ಬರಲೇಬೇಕೆಂಬ ಹಂಬಲ - ಇವೆರಡೂ ನಮ್ಮ (ಮನುಷ್ಯ ಕುಲದ) ಮುಖ್ಯ ಸಮಸ್ಯೆಗಳು.
ನನ್ನ ಬದುಕೇ ನನ್ನ ಸಂದೇಶ.
- ಮಹಾತ್ಮ ಗಾಂಧಿ (ಗಾಂಧೀಜಿಯವರ ಸುಪ್ರಸಿದ್ಧ ನುಡಿಮುತ್ತು)<
ನಾಳೆಯೇ ನಿಮ್ಮ ಕೊನೆಯ ದಿನವೆಂಬಂತೆ ತೀವ್ರವಾಗಿ ಬದುಕಿರಿ. ಆದರೆ ಏನನ್ನಾದರೂ ಕಲಿಯುವಾಗ ಮಾತ್ರ "ನಾನು ಎಂದೆಂದಿಗೂ ಬದುಕಿರುತ್ತೇನೆ" ಎನ್ನುವ ಭಾವನೆಯಿಂದ ಕಲಿಯಿರಿ.
ಪ್ರಾರ್ಥನೆಯಲ್ಲಿ ಬರಿಯ ಮಾತು(ಶಬ್ದ)ಗಳೇ ತುಂಬಿದ್ದು ಹೃದಯವಿಲ್ಲದೆ ಇರುವುದಕ್ಕಿಂತ, ಬರಿಯ ಹೃದಯವೇ ತುಂಬಿದ್ದು ಮಾತುಗಳಿಲ್ಲದೆ ಇರುವುದೇ ಮೇಲು!
ದೇವರು ಯಾರನ್ನು ಹರಸಬೇಕೆಂದು ತೀರ್ಮಾನಿಸುತ್ತಾನೋ, ಅವರನ್ನೇ ಅತ್ಯಂತ ಕಠಿಣ ಪರೀಕ್ಷೆಗಳಿಗೆ ಗುರಿಪಡಿಸುತ್ತಾನೆ.
ಇದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದೆ. ಯಾವುದು ಸರಿ ಅನ್ನುವ ಚರ್ಚೆ ನಮಗೇಕೆ ಅಲ್ಲವೇ? ಏಕೆಂದರೆ ಎರಡು ವಾದಗಳಿಗೂ ಖಚಿತ ಪುರಾವೆಗಳಿಲ್ಲ. ಹಾಗೆ ನೋಡಿದರೆ ಬುದ್ಧನ ಕಾಲದ ಬಗೆಗೇ ಇನ್ನೂ ಇತಿಹಾಸಕಾರರು ಚರ್ಚೆ ಮಾಡುತ್ತಾ ಇದ್ದಾರೆ. ಸಾಕು, ನಿನ್ನ ಮಾತೇ ಬಹಳ ಆಯಿತು, ಕಥೆ ಮುಂದುವರೆಸು ಅನ್ನುತ್ತೀರಾ? ಹೌದು, ನನಗೂ ಹಾಗೇ ಅನ್ನಿಸಿತು! ಬನ್ನಿ ಕಥೆಯತ್ತ ಗಮನ ಹರಿಸೋಣ.
ಗೆಳೆಯರೇ,
ನವರಂಗ್ ಸಿನಿಮಾ ಮನೆಗೆ ರಾತ್ರಿ ೧೦ ರ ಆಟಕ್ಕೆ ನಾನು ಮೊದಲ ಸಲ 'ಮುಂಗಾರು ಮಳೆ' ನೋಡೋಕೆ ಹೋದಾಗ, ಬಾಲ್ಕನಿ ಟಿಕೇಟ್, ಕಿಂಡೀಲೇ ಸಿಗುತ್ತಿತ್ತು. ಸಿನಿಮಾ ಚೆನ್ನಾಗಿದೆ ಅಂತ ಎರಡನೇ ಸಲ ಹೋದರೆ, ಇನ್ನೂ ಅರ್ಧ ಗಂಟೆ ಮೊದಲೇ sold out ಅಂತ ಮಾಡ್ಕೊಂಡು theator ನವರೇ ಮೂವತ್ತೈದು ರೂಪಾಯಿ ಟಿಕೇಟ್‍ನಾ ಅರವತ್ತು ರೂಪಾಯಿಗೆ ಬ್ಲಾಕ್‍ನಲ್ಲಿ ಮಾರುತ್ತಿದ್ದರು. ಅವನ್ನೇ ಎಷ್ಟೋ ಜನ ತುಗೋತಿದ್ದರು. ಆದರೆ ಇಂತದಕ್ಕೆ ಮಂದೀನೇ ಹೀಗೆ ಕುಮ್ಮಕ್ಕು ಕೊಡೋದು ಸರೀನಾ? ನನಗಂತೂ ಅದು ಸರಿ ಕಾಣದೇ ಕೆಳಗಡೆ ಇಪ್ಪತ್ತೈದು ರೂಪಾಯಿಯ ಟಿಕೇಟನ್ನು ಕಿಂಡಿ(counter)ಯಲ್ಲೇ ಪಡೆದು ನೋಡಿದೆವು.
ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ.
ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲುಹಾಕಿದ್ದ ಜಾಗದೆಡೆ ಹೋಗತ್ತೆ.
ನಿಮಗೂ ಹೀಗಾಗಿದ್ದಿದೆಯೆ?
ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ. ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ. ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ!
ನಿರಂತರ ನಡೆಯುತ್ತಿರುವ ಈ ಚಲನೆಯಲ್ಲಿಯೆ ಪರಿವರ್ತನೆ ಇರುತ್ತದೆ. ಅದು ಮಾನವ ನಿರ್ಮಿತ ವೆನಿಸಬಹುದು. ಪ್ರಕೃತಿಯ ಕೊಡುಗೆ ಯಾಗ ಬಹುದು. ಅಂತ ಪರಿವರ್ತನೆ ಆಗುವುದು ಆಗ ಬೇಕಾಗುವುದು ನಮ್ಮ ಅಸ್ತಿತ್ವ ಉಳಿಸಿಕೊಳ್ಳ ಲಿಕ್ಕಾಗಿ. ನಮ್ಮ ಬದುಕಿನ ಮಹತ್ವ ಇರಲಿಕ್ಕಾಗಿ.
ವಿಕ್ರಂತ ಕರ್ನಾಟಕದ ಕ್ಯಾಲೆಂಡರ್