ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಂಥ ಜೋಡಿ

ಆ ಜೋಡಿ ಕಿಟಕಿಯ ಪಕ್ಕದ ಸೀಟಿನಲಿ ಬಿದ್ದು ಬಿದ್ದು ನಗುತಿಹರು ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ ಬೆನ್ನ ಮೇಲೆ ಹರಡಿಹ ನೀಳ ಗಾಢ ಕಪ್ಪು ಕೇಶ ನೋಡುಗರೆಲ್ಲರನೂ ಹಿಡಿದಿಡುವಂತಹ ಪಾಶ ಮಲ್ಲಿಗೆಯ ಚಿಗುರೆಲೆಯಂತಹ ಮೋಹಕ ಮುಂಗುರುಳು ಅಗಲವಾದ ಹಣೆಯ ಮೇಲೆ ಮುತ್ತಿಕ್ಕುತಿರಲು

ಏನಿದೆ ಬದುಕಿನಲಿ

ಅಲೆದಾಟ ಹುಡುಕಾಟ ಮುಗಿಯದ ಪರಿಪಾಟ ಆಸ್ವಾದಿಸುವ ಮನಸಿಲ್ಲದಿರೆ ಏನಿದೆ ಬದುಕಿನಲಿ... ಮನಸಿನಾಳದಲಿ ಕನಸ ಲೋಕದಲಿ ಮೈಮರೆಯದಿರೆ ಏನಿದೆ ಬದುಕಿನಲಿ... ಜೊತೆ ನಡೆವವರಾ ಹಿತವನು ಕಂಡು ಖುಶಿಪಡದಿದ್ದರೆ ಏನಿದೆ ಬದುಕಿನಲಿ... ಭಯದ ಕತ್ತಲಲಿ ಜೀವವ ತುಂಬುವ ಬೆಳಕಿಲ್ಲದಿರೆ ಏನಿದೆ ಬದುಕಿನಲಿ... ಕಣ್ಗಳರಳುವ ಪ್ರೇಮದ ಮಿಂಚನು ಅಳೆಯಲಾಗದಿರೆ ಏನಿದೆ ಬದುಕಿನಲಿ... ಇಟ್ಟ ಹೆಜ್ಜೆಯನು

ಪತ್ರ ಬರೆಯುವ ಬಗೆ

ನನ್ನ ಸ್ನೇಹಿತರೊಬ್ಬರಿಗೆ ನಾನು ಇ-ಅಂಚೆ ಕಳುಹಿಸಿದ್ದೆ. ಅದರಲ್ಲಿ ಮಾಮೂಲಾಗಿ ಇಂತಿ ನಮಸ್ಕಾರಗಳು ಅಂತ ಕೊನೆಯಲ್ಲಿ ಬರೆದಿದ್ದೆ. ಅದಕ್ಕೆ ಅವರು ಇದೇನು ಹೀಗೆ ಬರೆದಿದ್ದೀರಿ. ಹೀಗೆ ಬರೆಯುವ ವಾಡಿಕೆ ಇದೆಯಾ ಅಂತ ಕೇಳಿದರು. ಆಗ ನನಗನ್ನಿಸಿದ್ದು, ಇ-ಮೈಲ್ ಉಪಯೋಗಿಸುವ ಮೂಲಕ ಮೊದಲಿನ ಹಾಗೆ ಪತ್ರ ಬರೆಯುವುದನ್ನು ಸಾರಾಸಗಟಾಗಿ ಈಗೀಗ ಮರೆಯುತ್ತಿದ್ದೇವೆ. ಅದರ ಬಗ್ಗೆ ಸ್ವಲ್ಪ ನೆನಪು ಮಾಡಿಕೊಳ್ಲೋಣ ಅಂದುಕೊಂಡೆ. ಹಾಗೇ ಇದನ್ನೇ ಇಂದಿನ ನನ್ನ ಡೈರಿಯಲ್ಲಿ ಬರೆಯೋಣ ಅಂತಲೂ ನಿರ್ಧರಿಸಿದೆ. ನೀವೂ ಒಮ್ಮೆ ನೋಡಿ. ನಾನು ಎಡವಿರುವ ಕಡೆ ತಿದ್ದಿ.

ಝೆನ್: ೩: ಒಂದು ಹನಿ

ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ಟೆಕಿಸುಇ ಎಂದು ಬದಲಾಯಿಸಿಕೊಂಡ. ನೀರಿನ ಹನಿ ಎಂಬುದು ಈ ಮಾತಿನ ಅರ್ಥ. ಏನನ್ನೂ ವ್ಯರ್ಥ ಮಾಡದಿರುವುದು ಕೂಡ ಝೆನ್.

ವಚನ ಚಿಂತನ:೧೦: ದೇವರ ಹಂಗೇಕೆ?

ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗ), ಪ್ರಜ್ಞಾವಂತರಾದವರಿಗೆ (ಜಂಗಮ) ಅರ್ಪಿಸಬೇಕು. ಉಳಿದದ್ದನ್ನು ನಮ್ಮದೆಂದು ಪಡೆದುಕೊಳ್ಳಬೇಕು. ಮಾಡಬೇಕಾದದ್ದು ಇಷ್ಟೇ. ಇದರಾಚೆಗೆ ರೋಗ ಬಂದರೆ ನರಳಬೇಕು, ನೋವಾದರೆ ಒರಲಬೇಕು, ಜೀವ ಹೋದರೆ ಸಾಯಬೇಕು. ಬದುಕು ಇಷ್ಟು. ಇದರಲ್ಲಿ ದೇವರ ಹಂಗು ಯಾಕೆ ಬೇಕು?

ಮುಂಬೈ ಕನ್ನಡಿಗನ ದಿನಚರಿ

ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು. ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ. ಆದರೆ ಹೊಸಬರಿಗೆ ಇಲ್ಲಿಯವರೆವಿಗೆ ಇದ್ದ ಧೈರ್ಯವೆಲ್ಲಾ ಕಳೆದು ತಮ್ಮ ತಮ್ಮ ಊರುಗಳಿಗೆ ಮರಳೋಣ ಅಥವಾ ಕೆಲಸವೇ ಬಿಟ್ಟುಬಿಡೋಣ ಅಥವಾ ಆತ್ಮಹತ್ಯೆ (!) ಮಾಡಿಕೊಳ್ಳೋಣ ಎನ್ನುವಷ್ಟು ಬೇಸರವಾಗುತ್ತದೆ. ಅದೇ ಕೆಲವರಿಗೆ ಹಾಗೇನೂ ಅನ್ನಿಸುವುದಿಲ್ಲ. ಅವರು ವಿ.ಐ.ಪಿ. ಏನೋ ಅನ್ನುವಂತೆ ಅವರಿಗೆ ಕುಳಿತುಕೊಳ್ಳಲು ಸ್ಥಾನ ಸಿಕ್ಕುವುದು, ಒಳಗೆ ಹೋಗಲು ಅನುವಾಗುವುದು. ಅದು ಹೇಗೆ ಎನ್ನುವುದು ನನಗೆ ಚಿದಂಬರ ರಹಸ್ಯದಂತಾಗಿತ್ತು. ಇಂದು ಅದನ್ನು ಹತ್ತಿರದಿಂದ ಅನುಭವಿಸಿದೆ. ಅವರು ಅನುಸರಿಸುವ 3 ಅತ್ಯಂತ ಮುಖ್ಯ ಅಂಶವನ್ನು ಅನುಸರಿಸುವರು. ಒಂದು - ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿರುವರು. ಆದೂ ಜಿಗುಟು ಜಿಗುಟಾಗಿರುವ ಹರಳೆಣ್ಣೆ. ಅವರು ಹತ್ತಿರ ಬಂದರೇ ಎಲ್ಲರೂ ದೂರ ಸರಿಯುವರು.

ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ

ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ

ಹಿಂದೊಮ್ಮೆ ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ ಮಾಹಿತಿ ಹುಡುಕಲು ಗ್ರಂಥಾಲಯವೇ ಬೀಡು. ಅಲ್ಲಿರುವ ಪುಸ್ತಕಗಳನ್ನೆಲ್ಲಾ ಹೆಕ್ಕಿ ತೆಗೆದು, ಮಾಹಿತಿ ಹುಡುಕಬೇಕಿತ್ತು. ಮಾಹಿತಿ ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ, ಅಂತರಜಾಲ ಮನೆಮನೆಗಳನ್ನು ಪ್ರವೇಶಿಸಿದಂತೆ ಮಾಹಿತಿ ಹುಡುಕುವುದು ಈಗಾದರೋ ಅತಿ ಸುಲಭವಾಗಿದೆ. ಈಗ ಮಾಡಬೇಕಾದದ್ದು ಇಷ್ಟೆ: ಗಣಕದಲ್ಲಿ ತಮ್ಮ ನೆಚ್ಚಿನ ಬ್ರೌಸರ್ ತೆರೆದು ನೆಚ್ಚಿನ Search engineನಲ್ಲಿ ಟೈಪ್ ಮಾಡಿ ಬಟ್ಟನ್ ಕ್ಲಿಕ್ ಮಾಡುವುದು!

ಝೆನ್: ಕಿರು ಪರಿಚಯ

ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು.

'ಸಂಪದ' wish list

ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂವ್ ಮಾಡುವ ಬಗ್ಗೆಯಾಗಲೀ ಅಥವಾ ಹೊಸ ವಿಭಾಗಗಳನ್ನು ತೆರೆಯುವ ಬಗ್ಗೆಯಾಗಲೀ ನಿಮ್ಮಲ್ಲಿ ಸಲಹೆಗಳಿದ್ದರೆ ಇಲ್ಲಿ ಕಾಮೆಂಟ್ ಮೂಲಕ ಸೇರಿಸಿ.

ಝೆನ್ ೨: ಶೌನ್ ಮತ್ತು ಅವನ ತಾಯಿ

ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು. ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.