ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

ಸಂಪದ ದೊಡ್ಡದಾಗುತ್ತಿದ್ದಂತೆ ಇಲ್ಲಿರುವ ಲೇಖನಗಳನ್ನು ತಲುಪಲು ಕಷ್ಟವಾಗುತ್ತಿದೆ ಎಂದು ಹಲವರಿಂದ ದೂರು ಬಂದಿತ್ತು. ಅಲ್ಲದೇ ಮುಖ್ಯ ಪುಟದಲ್ಲಿ ಲೇಖನಗಳಿಗೆ ಬರಿಯ ಸಂಪರ್ಕಗಳು ಮಾತ್ರ ಇದ್ದರೆ ಚೆನ್ನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ದಿನ ತಪ್ಪದೇ [:http://slashdot.org|ಸ್ಲಾಶ್ ಡಾಟ್] ಓದುವ ನನ್ನಂತಹ web addictಗಳು ಅಂತಹ ಮುಖ್ಯ ಪುಟಗಳಿಗೆ ಹೊಂದಿಕೊಂಡು ಬಿಟ್ಟಿರುತ್ತೇವಾದ್ದರಿಂದ ಬಹುಶಃ ನಮಗೆ ಕಷ್ಟವೆನಿಸದು. ಆದ್ದರಿಂದ ಎಲ್ಲರಿಗೂ ಸರಿಹೊಂದುವ ಬದಲಾವಣೆ ಮಾಡಿದರೆ ಒಳ್ಳೆಯದೆಂದುಕೊಂಡು ಈ ಹೊಸ ರೀತಿಯ main page ನಿಮ್ಮ ಮುಂದಿಡುತ್ತಿದ್ದೇನೆ. ನಿಮಗೆ ಇದು ಎಷ್ಟು ಹಿಡಿಸಿತು ಎಂಬುದನ್ನು ಹಾಗೂ ನಿಮ್ಮ ಸಲಹೆಗಳನ್ನು ತಪ್ಪದೆ ತಿಳಿಸಿ.

'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!

'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :)

೫೦೦ನೇ ಸದಸ್ಯರಾದ [:http://sampada.net/user/500|ಅರುಣ್] ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ ಎಲ್ಲ ಸದಸ್ಯರಿಗೂ‌ ಅಭಿನಂದನೆಗಳು. 'ಸಂಪದ'ವನ್ನು ಅಂತರಜಾಲದ ಅತಿದೊಡ್ಡ ಸಾಹಿತ್ಯ, ಬರವಣಿಗೆಗಳಿಗಾಗಿಯೇ ಮುಡುಪಾಗಿಟ್ಟ ಅಚ್ಚ ಕನ್ನಡದ ಸಮುದಾಯವನ್ನಾಗಿಸಿದ್ದೀರಿ ;)

ಕನ್ನಡಿಗನಾಗಿ ಹೆಮ್ಮೆ...

ಕನ್ನಡ ಭಾಷೆಯ ಬಗ್ಗೆ

ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ)

ದಿನಚರಿ: "ಇಲಿ ಕೈಕೊಡ್ತು - ಹೆಚ್ ಪಿ ಶಾಪಿಂಗ್ ಮಾಡ್ದ"

"ಇಲಿ ಕೈಕೊಡ್ತು"

ಮೊನ್ನೆ ಪವನಜರವರು ಮನೆಗೆ ಬಂದಿದ್ದಾಗ yours truly ಉವಾಚ - "format ಪದವನ್ನ format ಆಗಿಯೇ ಕನ್ನಡದಲ್ಲಿ ಬರೆದಿಟ್ಟು ಅನುವಾದದ ಗೋಜಿಗೆ ಹೋಗದೇ ಇರುವುದೇ ಒಳ್ಳೆಯದಲ್ವೆ? ಕನ್ನಡದ ಈ difficult ಪದವನ್ನ ನೀವು ಉಪಯೋಗಿಸಿ ಬಿಟ್ಟರೆ ನಮಗ್ಯಾರಿಗೂ ಅರ್ಥವಾಗಲ್ಲ".