ಆಹ ಎಂತ ಮಧುರ ಯಾತನೆ ....

ಆಹ ಎಂತ ಮಧುರ ಯಾತನೆ ....

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು..  ಮಾಯದಾ ಲೋಕದಿಂದ, ನನಗಾಗೆ ಬಂದವಳೆಂದು...

ಆಹ ಎಂತ ಮಧುರ ಯಾತನೆ SS....ಕೊಲ್ಲು ಹುಡುಗಿ ಒಮ್ಮೆ ನನ್ನಾ sss... ಹಾಗೆ ಸುಮ್ಮನೆ ..ಎss

ಮುಂಗಾರು ಮಳೆ ಚಿತ್ರದ ಈ ಹಾಡು ನನ್ನಲ್ಲೂ ಅದೇ ಮಧುರವಾದ ಯಾತನೆನ ಹಾಡು ಕೇಳ್ದಾಗ್ಲೆಲ್ಲಾ ತರಿಸ್ತಾ ಇದೆ. ಆ ತರ ಭಾವನೆಗಳು ಟೀನೇಜ್ ಹೋಗ್ತಾ ಹೋಗ್ತಾ ಸತ್ತೋಗತ್ತೆ ಅಂತ ತಿಳ್ದಿದ್ದೆ. ಬಹಳ ವರ್ಷದಿಂದ ತುಂಬಾ Practical ಆಗಿದ್ದಿನಿ, ಈ ರೀತಿಯ Sentiments ಎಲ್ಲಾ ಬರೋಕೆ ಸಾದ್ಯನೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆದ್ರೆ ಈ ಚಿತ್ರ ಅದೇಗೋ ಅದೇ ಭಾವನೆಗಳನ್ನ ಬರೋ ಹಾಗೆ ಮಾಡ್ತಾ ಇದೆ. ಏಷ್ಟೋ ಪ್ರೇಮ ಕಥೆ ಇರೋ ಚಿತ್ರ ನೋಡಿದ್ದೀನಿ - ಹಿಂದಿ, ಇಂಗ್ಲೀಷ್ - ಯಾವ್ದೂ ಇಷ್ಟು ಮನಸ್ಸಿಗೆ ಅತ್ರ ಆಗಿರ್ಲಿಲ್ಲ. "ದಿಲ್ವಾಲೆ ದುಲ್ಹನಿಯ ಲೇ ಜಾಯೆಂಗೆ" ಚಿತ್ರದಿಂದ ಬಹಳಷ್ಟು ಜನ ಹುಡುಗಿರು ತಮ್ಮ ತಮ್ಮನ್ನೇ ಆ ಚಿತ್ರದಲ್ಲಿ ಕಂಡುಕೊಂಡಿದ್ರು..  ಹುಡುಗಿಯರಿಗೆ ಆ ಚಿತ್ರ ಹೇಗೋ 'ಮುಂಗಾರು ಮಳೆ" ಹುಡುಗರಿಗೆ ಅನ್ಸುತ್ತೆ. ಹುಡುಗಿರು ಬರಿ ಚೆನ್ನಾಗಿದೆ ಅಂದಷ್ಟೇ ಹೇಳ್ತಾರೆ ಈ ಚಿತ್ರದ ಬಗ್ಗೆ. ಹುಡುಗರನ್ನ ಕೇಳಿದ್ರೆ - ಅವರ ಮುಖದ Expressionನೇ ಬದಲಾಗೊದನ್ನ ನೋಡಿದ್ದಿನಿ.

ಮಳೆಗೂ , ನೋವಿಗೂ , ಪ್ರೇಮಕ್ಕೂ ಅದೇನು ನಂಟೋ ?  ಪ್ರೇಮ ಮಳೆಯಲ್ಲಿ ನೆಂದಾಗ ಇನ್ನೂ ಪ್ರೇಮಮಯವಾಗಿ ಕಾಣುತ್ತೆ, ನೋವು ಮಳೆಯಲ್ಲಿ  ನೆಂದಾಗ ಇನ್ನೂ ಹೆಚ್ಚ್ಹು ನೋವಾಗಿರೋ ಹಾಗೆ ಕಾಣುತ್ತೆ. ಒಟ್ನಲ್ಲಿ ಈ ಮೂವರನ್ನೂ ಸೇರ್ಸಿ ಇಷ್ಟು ಒಳ್ಳೆ ಚಿತ್ರ ಕೊಟ್ಟಿದ್ದಕ್ಕೆ ಇಡೀ ಚಿತ್ರ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು.

Rating
No votes yet

Comments