ಆಹ ಎಂತ ಮಧುರ ಯಾತನೆ ....
ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು.. ಮಾಯದಾ ಲೋಕದಿಂದ, ನನಗಾಗೆ ಬಂದವಳೆಂದು...
ಆಹ ಎಂತ ಮಧುರ ಯಾತನೆ SS....ಕೊಲ್ಲು ಹುಡುಗಿ ಒಮ್ಮೆ ನನ್ನಾ sss... ಹಾಗೆ ಸುಮ್ಮನೆ ..ಎss
ಮುಂಗಾರು ಮಳೆ ಚಿತ್ರದ ಈ ಹಾಡು ನನ್ನಲ್ಲೂ ಅದೇ ಮಧುರವಾದ ಯಾತನೆನ ಹಾಡು ಕೇಳ್ದಾಗ್ಲೆಲ್ಲಾ ತರಿಸ್ತಾ ಇದೆ. ಆ ತರ ಭಾವನೆಗಳು ಟೀನೇಜ್ ಹೋಗ್ತಾ ಹೋಗ್ತಾ ಸತ್ತೋಗತ್ತೆ ಅಂತ ತಿಳ್ದಿದ್ದೆ. ಬಹಳ ವರ್ಷದಿಂದ ತುಂಬಾ Practical ಆಗಿದ್ದಿನಿ, ಈ ರೀತಿಯ Sentiments ಎಲ್ಲಾ ಬರೋಕೆ ಸಾದ್ಯನೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆದ್ರೆ ಈ ಚಿತ್ರ ಅದೇಗೋ ಅದೇ ಭಾವನೆಗಳನ್ನ ಬರೋ ಹಾಗೆ ಮಾಡ್ತಾ ಇದೆ. ಏಷ್ಟೋ ಪ್ರೇಮ ಕಥೆ ಇರೋ ಚಿತ್ರ ನೋಡಿದ್ದೀನಿ - ಹಿಂದಿ, ಇಂಗ್ಲೀಷ್ - ಯಾವ್ದೂ ಇಷ್ಟು ಮನಸ್ಸಿಗೆ ಅತ್ರ ಆಗಿರ್ಲಿಲ್ಲ. "ದಿಲ್ವಾಲೆ ದುಲ್ಹನಿಯ ಲೇ ಜಾಯೆಂಗೆ" ಚಿತ್ರದಿಂದ ಬಹಳಷ್ಟು ಜನ ಹುಡುಗಿರು ತಮ್ಮ ತಮ್ಮನ್ನೇ ಆ ಚಿತ್ರದಲ್ಲಿ ಕಂಡುಕೊಂಡಿದ್ರು.. ಹುಡುಗಿಯರಿಗೆ ಆ ಚಿತ್ರ ಹೇಗೋ 'ಮುಂಗಾರು ಮಳೆ" ಹುಡುಗರಿಗೆ ಅನ್ಸುತ್ತೆ. ಹುಡುಗಿರು ಬರಿ ಚೆನ್ನಾಗಿದೆ ಅಂದಷ್ಟೇ ಹೇಳ್ತಾರೆ ಈ ಚಿತ್ರದ ಬಗ್ಗೆ. ಹುಡುಗರನ್ನ ಕೇಳಿದ್ರೆ - ಅವರ ಮುಖದ Expressionನೇ ಬದಲಾಗೊದನ್ನ ನೋಡಿದ್ದಿನಿ.
ಮಳೆಗೂ , ನೋವಿಗೂ , ಪ್ರೇಮಕ್ಕೂ ಅದೇನು ನಂಟೋ ? ಪ್ರೇಮ ಮಳೆಯಲ್ಲಿ ನೆಂದಾಗ ಇನ್ನೂ ಪ್ರೇಮಮಯವಾಗಿ ಕಾಣುತ್ತೆ, ನೋವು ಮಳೆಯಲ್ಲಿ ನೆಂದಾಗ ಇನ್ನೂ ಹೆಚ್ಚ್ಹು ನೋವಾಗಿರೋ ಹಾಗೆ ಕಾಣುತ್ತೆ. ಒಟ್ನಲ್ಲಿ ಈ ಮೂವರನ್ನೂ ಸೇರ್ಸಿ ಇಷ್ಟು ಒಳ್ಳೆ ಚಿತ್ರ ಕೊಟ್ಟಿದ್ದಕ್ಕೆ ಇಡೀ ಚಿತ್ರ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು.
Comments
Re: ಆಹ ಎಂತ ಮಧುರ ಯಾತನೆ ....
In reply to Re: ಆಹ ಎಂತ ಮಧುರ ಯಾತನೆ .... by ಸಂಗನಗೌಡ
Re: ಆಹ ಎಂತ ಮಧುರ ಯಾತನೆ ....
In reply to Re: ಆಹ ಎಂತ ಮಧುರ ಯಾತನೆ .... by ಸಂಗನಗೌಡ
Re: ಆಹ ಎಂತ ಮಧುರ ಯಾತನೆ ....
In reply to Re: ಆಹ ಎಂತ ಮಧುರ ಯಾತನೆ .... by ಸಂಗನಗೌಡ
Re: ಆಹ ಎಂತ ಮಧುರ ಯಾತನೆ ....
ತುಂಬಾ ನೋಯುತ್ತೆರೀ, ಆದ್ರೂ ಬಹಳ ಹಿತವಾದ ನೋವಿದು.