ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Sangita Madurya

ಸಂಗೀತದ ಮಾಧುರ್ಯ

ಸಂಗೀತ ಕೇಳಲು ಎಲ್ಲರಿಗೂ ಆಸಕ್ತಿ. ಜಾನಪದ, ಶಾಸ್ತ್ರೀಯ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ ಹೀಗೆ ಹಲವು ಸಂಗೀತ ಕೇಳಲು ಜನರು ಇಷ್ಟ ಪಡುತ್ತಾರೆ. ಈಗಿನ ಕಾಲದ ಯುವಕರು ಧ್ಯಾನ ಮಾಡುವ ವೇಳೆಯಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾರೆ. ಪಂ ಹರಿಪ್ರಸಾದ್ ಚೌರಾಸಿಯಾ, ಪಂ. ಭೀಮಸೇನ ಜೋಶಿ, ಪಂ. ರವಿಶಂಕರ್ ಹಾಗು ಪಂ. ಜಸ್ ರಾಜ್ ಅವರ ಧ್ವನಿ ಮುದ್ರಕೆಗಳನ್ನು ಹೆಚ್ಚಾಗಿ ಕೇಳ ಬಯಸುತ್ತಾರೆ. ಇತ್ತೀಚೆಗೆ ನಾನು ಕೇಳಿ ಆನಂದಿಸಿದ ಧ್ವನಿ ಮುದ್ರಿಕೆ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳು ಬಯಸುತ್ತೇನೆ. ಈ ಧ್ವನಿ ಮುದ್ರಿಕೆಯ ಹೆಸರು ಅಂತರಯಾಮಿ ಸುಪ್ರಸಿಧ್ದವಾದ ಭಾಂಸುರಿ (ಕೊಳಲು) ವಾದಕ ಪಂ. ಪ್ರವಿಣ್ ಘೋಡ್‌ಕಿಂಡಿ ಅವರು ರಾಗ್ ಭೂಪ್ (ಕರ್ನಾಟಕ ಸಂಗೀತ ಪದ್ದತಿಯಲ್ಲಿ ಇದನ್ನು ರಾಗ ಮೋಹನವೆಂದು ಕರೆಯುತ್ತೇವೆ). ಈ ಧ್ವನಿ ಮುದ್ರಿಕೆಯ ವಿಷೇಶ ಏನಂದ್ರೆ ಒಂದು ಗಂಟೆಯ ಕಾಲ ಬರಿ ಆಲಾಪ್ ಮಾಡಿದ್ದಾರೆ. ತಬಲದ ಸಾತೇ ಇಲ್ಲ.ನಿಧಾನ ಗತಿಯಲ್ಲಿ ಭೂಪ್ ರಾಗವನ್ನು ಎಳೆ ಎಳೆಯಾಗೆ ಚಿತ್ರಿಸಿದ್ದಾರೆ. ಈ ಧ್ವನಿ ಮುದ್ರಿಕೆ ಕೇಳುತ್ತಾ ಧನ್ಯ ಮಗ್ನರಾಗಿ ಕುಳಿತರೆ ಯಾರು ಬೇಕಾದರು ಈ ಪ್ರಪಂಚವನ್ನು ಮರೆಯ ಬಹದು. ನಿತ್ಯವು ಇದ್ದನ್ನು ಕೇಳುತ್ತಾ ಧ್ಯಾನ ಮಾಡಿದರು ಮತ್ತೆ ಮತ್ತೆ ಕೇಳ ಬೇಕೆಂಬ ಹಂಬಲ ಹೆಚ್ಚುತ್ತದೆ. ಮನಸ್ಸಿಗೆ ಉಲ್ಲಾಸ, ಹಾಗು ದೇಹದ ಶ್ರಮವನ್ನು ಮರೆಯಬಹುದು. ಕೆಲಸ ಮಾಡುವಾಗ ಈ ಮುದ್ರಿಕೆ ಕೇಳುತ್ತಾ ಕೆಲಸ ಮಾಡಿದರೆ ಕೆಲಸದ ಶ್ರಮ ಗೊತ್ತಾಗುವುದಿಲ್ಲ, ಹಾಗು ಸಮಯ ಕಳೆಯುವುದು ಗೊತ್ತಾಗುವುದಿಲ್ಲ.

ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)

ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು.

ಪ್ಲಾನೆಟ್ ಕನ್ನಡದಲ್ಲಿ ಬದಲಾವಣೆಗಳು

ಬರುವ ಭಾನುವಾರದಿಂದ ಪ್ರಾರಂಭಿಸಿ [:http://planet.sampada.net|ಪ್ಲಾನೆಟ್ ಕನ್ನಡದಲ್ಲಿ] ಅನಾಮಿಕರು ಬರೆಯುವ ಬ್ಲಾಗುಗಳನ್ನು ತೆಗೆದುಹಾಕಲಾಗುವುದು.

ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!

'ಅಯ್ಯೊ ಮತ್ತೆ ಬಂತೆ, ಜುಲೈ, ಮೆರೆಸಿತೆ, ದುರ್ದಶೆಯ ತಾಂಡವ ನೃತ್ಯವ' ! ಇಂದು ೨೬, ನೆಯ ಜುಲೈ, ೨೦೦೬, ಒಂದು ವರ್ಷದ ನಂತರದ ಅನುಭವದ ಮಧ್ಯೆಯೂ ಸ್ವಲ್ಪ ಅಧೀರತೆಯನ್ನು ತರುತ್ತೆ ! ೨೦೦೫ ರಂದು, ಇದೇ ದಿನದ ದಾರುಣ 'ವ್ಯಥೆಯ ಕಥೆ', ಕೆಟ್ಟ 'ಕರಾಳ ರಾತ್ರಿ'ಯ ಕಹಿ ನೆನೆಪಿನ ಅನುಭವ ಗಳನ್ನು ಅನುಭವಿಸಿದವರೆಗೆ ಮಾತ್ರ ಗೊತ್ತು ! 'ದೈವ ಬಗೆದದ್ದೇ ಇದನ್ನ' ಎಂದಾಗ ನಾವು ಹೇಳುವದಾದರೂ ಯಾರಿಗೆ ? ನಮ್ಮ ಕೈಲೇನಿದೆ ? ನಮ್ಮವರೇ ಆದ ಮನುಕುಲದ ದಿಗ್ಗಜರೇ ಹೀಗೆ ಮಾಡಿದ್ದಾರೆ.

Poem scrap

(ಹುಚ್ಚು ಕನಸಿನ ತುಣುಕು) ಕವನದ ಭಾಗ

ಬಿಲ್ಲೆ ಮೇಲಿನ ಮೊಹರು ಕತ್ತಿ ಅಲುಗಿನ ಸೃಷ್ಟಿ

ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ

ನನ್ನ ಸಮಸ್ಯೆಗೆ ಉತ್ತರ ಕೊಡುವಿರಾ?

ಸಾಧಿಸಿದ್ದಾದರೂ ಏನು? ಕಳೆದುಕೊಂಡದ್ದು ಎಷ್ಟೊಂದು? ನಷ್ಟ ಯಾರಿಗೆ? ಇದೆಲ್ಲ ಯಾರ ಒಳಿತಿಗಾಗಿ? ಇವೆಲ್ಲ ಪ್ರಾರಂಭವಾದದ್ದು ಹೇಗೆ ಯಾರಿಂದ?

ಇದೇನಾ ಪತ್ರಿಕೋದ್ಯಮ?

"ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ" - ಎಂದು ಸುದ್ದಿಯ ಅರಿವು (ನ್ಯೂಸ್ ಸೆನ್ಸ್) ಮೂಡಿಸಲು ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರು ಹೇಳುವ ಪಾಠ. ಇದರರ್ಥ ಸಾಮಾನ್ಯವಾಗಿರುವುದಕ್ಕಿಂತ ಅಸಾಮಾನ್ಯವಾಗಿದ್ದೇ ಸುದ್ದಿ.

ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ

ಕಳೆದ ಶನಿವಾರ ನಮ್ಮೂರಿಗೆ ಹೋಗಿದ್ದೆ. ಹಾಗೇ ಬೆಳಗಿನ ಕಾಫಿ ಹೀರುತ್ತಾ ದೂರದರ್ಶನದ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ನನ್ಜೊತೆ ನಮ್ಮಮ್ಮ, ನಮ್ಮಜ್ಜಿ, ನಮ್ಮಣ್ಣ, ನಮ್ಮ ಅಕ್ಕನ ಮಕ್ಕಳು ಹಾಗೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ.. ಎಲ್ರೂ ಇದ್ದರು. ನಾವು ನೋಡುತ್ತಿದ್ದದ್ದು ಒಂದು ಕನ್ನಡ ಚಾನಲ್