ಎಲ್ಲಾ ಕನ್ನಡದಲ್ಲಿ ಬರೆಯಲು...
ಸುಮಾರು ಮೂರು ತಿಂಗಳ ಹಿಂದೆ ಕನ್ನಡದ ವಿಕಿಪೀಡಿಯಾವನ್ನು ನಾನು ಮೊದಲನೇ ಸರಿ ನೋಡಿದೆ. ಆದರೆ ಅಲ್ಲಿನ ಅಕ್ಷರಗಳು ಸರಿಯಾಗಿ ಮೂಡದೇ ಇದ್ದಿದ್ದರಿಂದ ನಿರಾಸೆಯಾಯಿತು. ಗೂಗಲ್‌ನಲ್ಲಿ ಸುಮಾರು ಹೊತ್ತು ಸರ್ಚ್ ಮಾಡಿದ ಮೇಲೆ ಯೂನಿಕೋಡಿನ ಕೆಲವು ಪಾಂಟ್‌ಗಳು ಸಿಕ್ಕಿದವು. ಅದರಲ್ಲಿ ಒಂದನ್ನು ಅಚ್ಚುಇಳಿಸಿದ ಮೇಲೆ ವಿಕಿಪೀಡಿಯಾ ಸರಿಯಾಗಿ ಮೂಡಿತು! ಸುಮಾರು ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಲೇಖನಗಳು ಅಲ್ಲಿ ಇದ್ದದ್ದು ನನಗೆ ಆಶ್ಚರ್ಯ ಉಂಟು ಮಾಡಿತು. ಏಕೆಂದರೆ ಯೂನಿಕೋಡ್ ಕನ್ನಡದಲ್ಲಿ ಈಗಾಗಲೇ ಇಷ್ಟೊಂದು ಮುನ್ನಡೆಯಾಗಿದ್ದು ನೋಡಿ. ವಿಕಿಪೀಡಿಯಾದಲ್ಲಿ ನನಗೂ ಏನಾದರೂ ಬರೀಬೇಕು ಅನ್ನಿಸಿತಾದರೂ ಹೇಗೆ ಬರೆಯುವುದು ಎಂದು ತಿಳಿಯಲಿಲ್ಲ. ಮತ್ತೆ ಗೂಗಲ್‌ನಲ್ಲಿ ಸರ್ಚ್ ಮಾಡತೊಡಗಿದೆ. ವಿಂಡೋಸ್ ಎಕ್ಸ್.ಪಿಯಲ್ಲಿ ಯೂನಿಕೋಡ್‌ನಲ್ಲಿ ಬರೆಯುವುದು ಹೇಗೆ ಅನ್ನೋದರ ಬಗ್ಗೆ ಹಲವಾರು ಪುಟಗಳು ಸಿಕ್ಕವು ಆದರೆ ವಿಂಡೋಸ್ ೯೮ ಮತ್ತು ಎಮ್.ಇಯಲ್ಲಿ ಹೇಗೆ ಬರೆಯುವುದು ಅಂತ ಎಲ್ಲೂ ಸಿಕ್ಕಲಿಲ್ಲ. ಸುಮಾರು ದಿನಗಳ ಹುಡುಕಾಡಿದ ಮೇಲೆ ಐ.ಬಿ.ಎಮ್‌ನವರ ಐ.ಎಮ್.ಇ ಸಿಕ್ಕಿತು. ಸುಮಾರು ಆರೋ-ಏಳೋ ಎಮ್‌ಬಿ ಇದ್ದ ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿದೆ. --- ದೇವರೇ ಬರಬೇಕು ಇನ್ಕ್ರಿಪ್ಟ್ ಕಲಿಸೋಕ್ಕೆ!!! ಮತ್ತೆ ನಿರಾಸೆಯಾಯಿತು. ಬೈಕೋತಾ ಅದನ್ನ ಅನ್-ಇನ್ಸ್ಟಾಲ್ ಮಾಡಿದೆ... ಬ್ಯಾಂಡ್‌ವಿಡ್ತೆಲ್ಲಾ ವೇಸ್ಟಾಯಿತಲ್ಲ ಅಂತ. ಇದಲ್ಲದೇ ಇನ್ನೆಷ್ಟು ತಂತ್ರಾಂಶಗಳನ್ನ ಡೌನ್ಲೋಡ್ ಮಾಡ್ಕೊಂಡಿದಿನೋ, ಗೂಗಲ್‌ನಲ್ಲಿ ಅದೆಷ್ಟು ಬಾರಿ ಸರ್ಚ್ ಮಾಡಿದಿನೋ, ದೇವರಿಗೇ ಗೊತ್ತು! ಸುಮಾರು ಒಂದೂವರೆ ತಿಂಗಳಷ್ಟು ಹುಡುಕಿದರೂ ಏನೂ ಸಿಗಲಿಲ್ಲ. ಅಷ್ಟರಲ್ಲಿ ಒಂದು ದಾರಿ ಗೊತ್ತಾಯಿತು! ಬರಹ ೬ರಲ್ಲಿ ಬರೆದು ಅದನ್ನ ಯೂನಿಕೋಡ್ ಆಗಿ ಕಾಪಿ ಮಾಡಿ, ಯಾವುದಾದರೋ ಯೂನಿಕೋಡ್ ಟೆಕ್ಸ್ಟ್ ಎಡಿಟರ್‌ನಲ್ಲಿ ಅಂಟಿಸಿ, ಮತ್ತೆ ಅಲ್ಲಿಂದ ಕಾಪಿ ಮಾಡಿ ವಿಕಿಪೀಡಿಯಾದಲ್ಲಿ ಅಂಟಿಸಬಹುದು ಅಂತ!
- Read more about ಎಲ್ಲಾ ಕನ್ನಡದಲ್ಲಿ ಬರೆಯಲು...
- Log in or register to post comments