ಕೇಳು ಬದುಕನ್ನು
- Read more about ಕೇಳು ಬದುಕನ್ನು
- 3 comments
- Log in or register to post comments
ಒಂದು ಭಾಷೆಯೆಂದರೆ ಎಷ್ಟು ಶತಮಾನಗಳ ಮನುಷ್ಯ ಶ್ರಮದ ಫಲ. ಆ ಭಾಷೆಯನ್ನು ಬಳಸಿ ಆ ಜನ ಎಷ್ಟೆಲ್ಲ ತಿಳಿವಳಿಕೆ ಸಂಪಾದಿಸಿದ್ದರೋ, ಜ್ಞಾನ ಪಡೆದಿದ್ದರೋ, ಅವೆಲ್ಲ ಈಗ ಇಲ್ಲವಾಗಿದೆ. ಅವರ ಕನಸು, ಬದುಕಿನ ಹೋರಾಟ, ಬದುಕಿನ ಕ್ರಮ ಎಲ್ಲವೂ, ನೆನಪಾಗಿಯೂ ಉಳಿಯದಂತೆ, ಅಳಿಸಿಹೋಗಿಬಿಟ್ಟಿದೆ. ಭಾಷೆಯ ವಿನಾಶ ಸಂಸ್ಕೃತಿಯ ವಿನಾಶವೇ ಸರಿ. ಹೀಗಾಗುವುದಕ್ಕೆ ನಮ್ಮ ಪ್ರಗತಿಯ ಕಲ್ಪನೆ, ಆಧುನಿಕತೆಯ ಕಲ್ಪನೆ, ಸದೃಢ ಭಾಷೆಯನ್ನು ಕುರಿತ ಮೋಹ ಇವೆಲ್ಲ ಕಾರಣಗಳಾಗುತ್ತವೆ. ಕೇವಲ ಇಂಗ್ಲಿಷ್ ಮಾತ್ರವಲ್ಲ, ಆಯಾ ಪ್ರದೇಶದ ಬಲವಂತ ಭಾಷೆಗಳೂ ಕೂಡ ಇಂಥ ಚಿಕ್ಕಪುಟ್ಟ ಭಾಷೆಗಳನ್ನು ಕ್ರಮೇಣ ನುಂಗಿ ಹಾಕುತ್ತವೆ. ಕನ್ನಡವೂ ತನ್ನ ಅನೇಕ ಉಪಭಾಷೆಗಳ ಮಟ್ಟಿಗೆ ಇಂಥ ಕ್ರೌರ್ಯವನ್ನು ತೋರಿದೆ. ಈಗ ತನ್ನ ಉಳಿವಿಗೆ ಅಂಜುತ್ತಿದೆ. ಇಲ್ಲಿ ಸತ್ತು ಹೋಗಿರುವ ಭಾರತೀಯ ಭಾಷೆಗಳ ವಿವರವಿದೆ. ನಮ್ಮ ಎಲ್ಲ ಆಧುನೀಕರಣ ಭಾಷೆಗಳ ಕೊಲೆಗಡುಕತನದ ಇನ್ನೊಂದು ಹೆಸರೇ? ೧. ಎ ಪುಸಿಕ್ಕಿವಾರ್: ೨೦೦೦ನೆಯ ಇಸವಿಯಲ್ಲಿ ಈ ಭಾಷೆಯನ್ನಾಡುವ ೨೪ ಜನ ಬದುಕಿ ಉಳಿದಿದ್ದರು. ಬಳಕೆಯಲ್ಲಿದ್ದ ಪ್ರದೇಶಗಳು: ಅಂಡಮಾನ್ ದ್ವೀಪಗಳು, ಬೊರಟಾಂಗ್ ದ್ವೀಪಗಳು, ಮಧ್ಯ ಅಂಡಮಾನಿನ ದಕ್ಷಿಣ ಕರಾವಳಿ, ದಕ್ಷಿಣ ಅಂಡಮಾನ್ ನ ಈಶಾನ್ಯ ಕರಾವಳಿ. ಈ ಭಾಷೆಯ ಇತರ ಹೆಸರುಗಳು: ಪುಸಿಕ್‌ವಾರ್, ಪುಚಿಕ್‌ವಾರ್ ಈ ಭಾಷೆಯು ಅಂಡಮಾನೀಸ್, ಗ್ರೇಟ್ ಅಂಡಮಾನೀಸ್, ಸೆಂಟ್ರಲ್ ಭಾಷಾವರ್ಗಕ್ಕೆ ಸೇರಿದ್ದು. ಅವಸಾನದ ಕಾರಣ: ಈ ಭಾಷೆಯನ್ನಾಡುವ ಜನ ಹಿಂದಿಯನ್ನು ಬಳಸ ತೊಡಗಿದ್ದಾರೆ. ಪ್ರಥಮಭಾಷೆಯಾಗಿ ಈ ನುಡಿಯ ಅಕ್ಷರಸ್ಥರಾಗಿರುವವರು: ಶೇ ೧%ಗಿಂತ ಕಡಮೆ ಇತರ ವಿವರ: ಸೆಂಟ್ರಲ್ ಅಂದಮಾನೀಸ್ ಭಾಷಾ ವರ್ಗದ ಇತರ ಗುಂಪುಗಳು ಈಗ ನಾಮಾವಶೇಷವಾಗಿವೆ. ಗ್ರೇಟ್ ಅಂಡಮಾನೀಸ್ ಅನ್ನು ಪರಿಶಿಷ್ಟವರ್ಗವೆಂದು ಭಾರತ ಸರ್ಕಾರ ಗುರುತಿಸಿದೆ. ಪುಚಿಕ್‌ವಾರ್ ಈ ವರ್ಗದ ಉಪವರ್ಗ. ಅವಸಾನದ ಅಂಚಿನಲ್ಲಿದೆ. ೨. ಖಮ್ಯಾಂಗ್ : ೨೦೦೩ನೆಯ ಇಸವಿಯಲ್ಲಿ ಈ ಭಾಷೆಯನ್ನಾಡುವ ೫೦ ಜನ ಉಳಿದಿದ್ದರು. ಬಳಕೆಯ ಪ್ರದೇಶ: ಅಸ್ಸಾಮ್‌ನ ತೀನ್‌ಸುಕಿಯಾ ಜಿಲ್ಲೆಯ ಪಾವೈಮುಖ್ ಹಳ್ಳಿ ಈ ಭಾಷೆಯ ಇತರ ಹೆಸರುಗಳು: ಖಮ್ಜಾಂಗ್, ಖಮಿಯಾಂಗ್, ಶ್ಯಾಮ್, ತಾಯ್ ಖಮ್ಯಾಂಗ್ ಇದರ ಉಪಭಾಷೆಗಳು: ಅಸ್ಸಾಮಿನ ಫಾಕೆ ಮತ್ತು ಮಯಾನ್ಮಾರ್‌ನ ಶಾನ್ ಉಪಭಾಷೆಗಳಿಗೆ ಸಮೀಪದ್ದು. ಅವನತಿಯ ಕಾರಣಗಳು: ಈ ಭಾಷಿಕರು ಅಸ್ಸಾಮಿ ಭಾಷೆ ಮತ್ತು ಲಿಪಿಯನ್ನು ಬಳಸತೊಡಗಿದ್ದು. ಹಳೆಯ ಕಾಲದ ಜನ ಈ ಭಾಷೆಯನ್ನು ಆಡಲು, ಓದಲು ಬಲ್ಲವರು. ಮುಖ್ಯವಾಗಿ ಧಾರ್ಮಿಕ ವಿಷಯಗಳ ಮಾಹಿತಿ ಈ ಭಾಷೆಯಲ್ಲಿ ಬರಹದ ರೂಪದಲ್ಲಿದೆ. ಈ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಉಳ್ಳ ಅಕ್ಷರಸ್ಥರು ಶೇ ೫೮, ೧೯೮೧ರ ಸೆನ್ಸಸ್ ಪ್ರಕಾರ. ಇತರ ವಿವರ: ಈ ಭಾಷೆಯನ್ನಾಡುವ ಜನರನ್ನು ಭಾರತ ಸರ್ಕಾರ ಪರಿಶಿಷ್ಟವರ್ಗವೆಂದು ಗುರುತಿಸಿದೆ. ಅರುಣಾಚಲದ ಖಂಪ್ಟಿ ಭಾಷೆಯೊಡನೆ ಹತ್ತಿರದ ಸಂಬಂಧವಿದೆ. ಅನೇಕ ಸಾವಿರ ಅಸ್ಸಾಮಿ ಭಾಷಿಕರು ತಮ್ಮನ್ನು ಈ ಹೆಸರಿನಿಂದಲೂ ಗುರುತಿಸಿಕೊಳ್ಳುತ್ತಾರೆ. ಬೌದ್ಧರು. ಅವಸಾನದ ಅಂಚಿನಲ್ಲಿರುವ ಜನ ವರ್ಗ ಮತ್ತು ಭಾಷೆ. ೩. ಪರೇಂಗ ೨೦೦೨ನೆಯ ಇಸವಿಯಲ್ಲಿ ಈ ಭಾಷೆಯನ್ನಾಡುವ ೭೬೭ ಜನ ಉಳಿದಿದ್ದರು. ಭೌಗೋಳಿಕ ವ್ಯಾಪ್ತಿ: ಒರಿಸ್ಸಾದ ಕೊರಾಪುಟ್ ಜಿಲ್ಲೆ, ಮತ್ತು ಆಂಧ್ರದ ಕೆಲವು ಭಾಗ ಈ ಭಾಷೆಯ ಇತರ ಹೆಸರುಗಳು: ಪರೆನ್ಗಿ, ಪರೆಂಗ್, ಪರೆನ್ಗ ಪರ್ಜ, ಪರೆನ್ಜಿ, ಪೊರೊಜ, ಗೊರುಮ್, ಗೊರುಮ್ ಸಮ ಈ ಭಾಷೆಯನ್ನು ಕುರಿತು ತೆಲುಗು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆದಿದೆ. ತೀರ ಕೆಲವೇ ಜನ ಈ ಭಾಷೆಯನ್ನು ನೆನಪಿಟ್ಟುಕೊಂಡಿದ್ದಾರೆ. ಆಡು ನುಡಿಯನ್ನಾಗಿ ಬಳಸುವವರು ೧೯೭೧ ರಿಂದ ಇಲ್ಲವೇ ಇಲ್ಲ. ಈ ಭಾಷಿಕರು ಆದಿವಾಸಿ ಒರಿಯಾ ಬಳಸತೊಡಗಿದ್ದಾರೆ. ಈ ಭಾಷೆ ಬಹುಶಃ ಈಗ ದಿವಂಗತ. ಭಾರತದ ಪರಿಶಿಷ್ಟವರ್ಗ. ಈ ವರ್ಗಕ್ಕೆ ಸೇರಿದ ಜನವೂ ಈಗ ಉಳಿದಿಲ್ಲ. ೪ ರುಗ ಈ ಭಾಷೆಯನ್ನಾಡುವ ಜನ: ಈಗ ಇದ್ದಾರೋ ಇಲ್ಲವೋ ತಿಳಿದಿಲ್ಲ. ಭೌಗೋಳಿಕ ಪ್ರದೇಶ: ಮೇಘಾಲಯ, ಗಾರೋ ಎಂಬ ಸ್ಥಳದ ಸಮೀಪ ಈ ಭಾಷೆಯನ್ನು ಈಗ ಬಳಸುತ್ತಿರುವವರೆಲ್ಲ ತೀರ ವಯಸ್ಸಾದ ಜನ. ಅವರು ಕೂಡ ಗಾರೊ ಭಾಷೆಯನ್ನೆ ಹೆಚ್ಚು ಬಳಸುತ್ತಾರೆ. ಈಗ ಈ ಭಾಷೆಯೂ ಕಣ್ಮರೆಯಾಗಿದೆ.