ಕನ್ನಡಿಗರಲ್ಲಿ ಜಾತಿ-ಭೂತ !
ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ಕನ್ನಡಿಗರಿರುವ Area ಗಳಲ್ಲಿ ಮನೆ ಮಾಡೋಣ ಅಂತ, ಜಯನಗರ, ಗಿರಿನಗರ ಇಂತ ಕಡೆ ಮನೆ ಹುಡುಕ್ತಾ ಇದ್ದೆ. Non-Veg ಅಂದ್ರೆ ಸಾಕು "ಬಾಡಿಗೆ ಇಲ್ಲ". ಒಂದು ಕಡೆ ಸ್ವಲ್ಪ compromise ಮಾಡ್ಕೊಂಡು ಹೇಳ್ದೆ - "ಮನೆಯಲ್ಲಿ Non-Veg ಮಡೊಲ್ಲಪ್ಪ ಅಂತ".. ಆದ್ರೂ ಒಪ್ಪಲಿಲ್ಲ.. "My consience doesn't permit" ಅಂತ ಹೇಳ್ದ. ಕೇಳಿ ಸುಸ್ತಾಗಿ ಹೋದೆ. ಈ ವಿಷಯದಲ್ಲೂ Consienceಏ ಅಂತ !!
ಅದಿರ್ಲಿ ಬಿಡಿ. ಜಯನಗರದ ಒಂದು ಕಡೆ - ಇದೆ ತರ ಒಂದು Vegetarian ಬಾಡಿಗೆದಾರನ ಮನಗೆ, ನನ್ನ ಸಹೋದ್ಯೋಗಿಗಳು ಬಾಡಿಗೆ ತಗೋಂಡ್ರು. ಅದರಲ್ಲಿ ಮೂವರು ಒರಿಸ್ಸಾ, ಒಬ್ಬ ಆಂದ್ರ. ಎಲ್ರೂ ಹೇಳ್ಕೊಳ್ಳೊಕೆ vegetarian. ಅದೇ ಬಾಡಿಗೆದಾರ ಇನ್ನೂ ನಾಲ್ಕು ಮನೆ ಬಾಡಿಗೆ ಕೊಟ್ಟಿದ್ದ. ಎಲ್ಲದರಲ್ಲೂ ಹೊರಗಿನವ್ರೇ .. ಕನ್ನಡಿಗರಿಗೆ ಒಂದು ಮನೆನೂ ಇಲ್ಲ.. ನನ್ನ ಸಹೋದ್ಯೋಗಿಗಳು ಇದ್ದ್ರಲ್ಲ , ಹೇಳ್ಕೊಳ್ಳೋಕೆ ಎಲ್ಲಾ vegetarian.. ತಿನ್ನೋದ್ ಮಾತ್ರ ವಾರಕ್ಕೆ ಮೂರ್ ಸಲ ಚಿಕನ್ನು, ಮಟನ್ನು. ತಿಂದರೆ ತಪ್ಪೇನು ಇಲ್ಲ ಬಿಡಿ, ನನಗೂ ಇಷ್ಟ, ಆದ್ರೆ ಕೊಪ ಬಂದಿದ್ದು ಆ ಮನೆ ಮಾಲಿಕನ್ ಮೇಲೆ.. ಎಲ್ಲಾ ಗೊತ್ತಿದ್ರೂ ಅವರತ್ರ ಅರ್ದಂಬರ್ದ ಹಿಂದಿ ಮಾತಾಡ್ತಾ ತನ್ನ Consienceಗೆ ತನ್ತಾನೆ ಮನವರಿಕೆ ಮಾಡ್ಕೊತಾ ಇರ್ತಾನೆ..
ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..