ಮತ್ತೊಂದು ಕವನ

ಮತ್ತೊಂದು ಕವನ

ನಿನ್ನ ಮನೆ ಒಡತಿ ಮನ ಒಡತಿ ನಾನಾದರೆ ಗೆಳೆಯ
ನನ್ನ ಮನದೊಡೆಯ ಒಡಲೊಡೆಯ ನೀನಲ್ಲವೇ ಗೆಳೆಯ ?
ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ದಟ್ಟನೆ ಕವಿದು ಹರಿಯುತ್ತದೆ
ಮುಂಜಾವಿನ ಮಂಜಿನಂತೆ, ನದಿಯ ಅಲೆಯಂತ
ಇದು ವಿರಹ ಗೀತೆಯಲ್ಲ ಪ್ರೀತಿಯ ನಿವೇದನೆಯಲ್ಲ
ಸರಸಕ್ಕೆ ಆಹ್ವಾನವಲ್ಲ ,ವಿರಸ ತೋರಿಕೆಯೂಲ್ಲ
ಮನದಾಳದಲ್ಲಿ ಹುದುಗಿದ ಮಾತುಗಳಿವು
ಸ್ವಾತಿಯ ಮಳೆಗೆ ಚಿಪ್ಪು ಬಾಯ್ ಬಿಟ್ಟಂತೆ
ನಿನ್ನ ಪ್ರೀತಿಯ ಹನಿ ಮಳೆಗೆ ಬಾಯ್ ಬಿಟ್ಟಿದೆ.

Rating
No votes yet

Comments