ಹಣ, ಉಡುಗೊರೆ ಮತ್ತು ಹೆಂಡದ ಹೊಳೆಯಲ್ಲಿ ಕೊಚ್ಚಿಹೋದ ಚಾಮುಂಡೇಶ್ವರಿ

ಹಣ, ಉಡುಗೊರೆ ಮತ್ತು ಹೆಂಡದ ಹೊಳೆಯಲ್ಲಿ ಕೊಚ್ಚಿಹೋದ ಚಾಮುಂಡೇಶ್ವರಿ

ಹಲೋ, ರಾಘಣ್ಣ, ಹೇಗಿದ್ದೀಯಾ? (ಸ್ನೇಹಿತನ ಯೋಗಕ್ಷೇಮ ವಿಚಾರಿಸುತ್ತಾ)

ಅಂದ್ಕೋತೀನಿ, ನೀನ್ ಚೆನ್ನಾಗಿದ್ದೀಯಾ ಅಂತ.

ನಮ್ಮೆಲ್ಲಾ ಆಪ್ತಮಿತ್ರರೆಲ್ಲರನ್ನೂ ಪ್ರೀತಿಯಿಂದ ಕೇಳ್ದೆ ಅಂತಾ ಹೇಳಣ್ಣ,, ಮರಿಬ್ಯಾಡ ಕಾಣಣ್ಣೋ?

ಆಮೇಲೆ, ಅದೇ By-poll, ಚಾಮುಂಡೇಶ್ವರಿ ಕ್ಷೇತ್ರದ್ದು, Result ಏನಾಗಬಹುದಣ್ಣ!!! ನಿನ್ನಾಣೆ ನಂಗೆ ಬಹಳ ಆಸಕ್ತಿ ಕಾಣಣ್ಣ.

ಯಾಕೆಂದರೆ, ಸಿದ್ರಾಮಣ್ಣಾನೂ ಬೇಕು - ಜೆ.ಡಿ (ಎಸ್) ಗೆಲ್ಲಬೇಕು. ಹಿಂಗಾದ್ರೆ ಹೆಂಗಣ್ಣ?

ಅಯ್ಯೋ ನಿನ್ನೆ, (In Mysore) ಹಣದ್ ಸೂಟ್‍ಕೇಸ್ ಏನ್ ಕೇಳ್ತೀರಾ? ಹಂಚೋದ್ ಏನ್ ಕೇಳ್ತೀರಾ? ರಾಮ್ ರಾಮ... ದೇವರೇ ಕಾಪಾಡ್‍ಬೇಕು ನಮ್ಮನ್ನ... ನಮ್ಮ ಜನಾನ... ಮಿಗಿಲಾಗಿ ದೇಶಾನ...

ಅಲ್ಲಾ ನಿಮ್ಮವರು ಏನ್ ಹಿಂದೆ ಬಿದ್ದಿಲ್ಲಾ ಬಿಡಣ್ಣ... (All Politicians) ಬಹಳ ದಾನ-ಧರ್ಮ ಮಾಡಿದ್ರು ಅಲ್ವೇನಣ್ಣಾ?

ನಂಗತ್ತೂ ಬಹಳ ಬೇಜಾರಾಗಿದೆ ಕಣಣ್ಣ ಯಾಕೆಂತೀಯಾ... ಅದೇ ಆಯೋಗದವರೂ (EC) ಬಾಳನೇ ಕಷ್ಟಪಡ್ಬೇಕಾಯ್ತಲ್ಲಾ ಅಂತಾ ಕಾಣಣ್ಣ.

ಅಣ್ಣಯ್ಯಾ ನಂಗೆ ಇವತ್ತೇ ಹೇಳ್ಬುಡು ಯಾರ್ ಗೆಲ್ಲೋರು ಅಂತವಾ?

ನಿಜ ಹೇಳ್ತೀನಿ ಕಾಣಣ್ಣ... ಓಟಿನ್ ದಿನ ಏನ್ ಹೆಚ್ಚು-ಕಡಿಮೆ ಆಗ್ಬುಟ್ಟೋತೋಂತ ಒಂದೇ ಭಯ ಇತ್ತಣ್ಣ ಆದರೆ ದೇವರು ದೊಡ್ಡೋನಣ್ಣ, ಹಂಗೇನೂ ಆಗ್ಲಿಲ್ಲಾ... ಚಾಮುಂಡೇಶ್ವರಿ ಮಹಿಮೆನೇ ಸರಿ ಬಿಡಣ್ಣ...

ಮನಸ್ಸಿಲ್ಲದೇ ಮುಗಿಸ್ತಾ ಇದ್ದೀನಿ ಕಾಣಣ್ಣ...

ನಿಮ್ಮವನಾದ,
ಶಿವಣ್ಣ

Rating
No votes yet

Comments