ಬದುಕು ಬದುಕೆಲೋ

ಬದುಕು ಬದುಕೆಲೋ

ಅರಿಯೆನು ನಾನೋಡುವಾ ಬದುಕ

ಕಾಣೆನು ಸಾವಿನಾಚೆಯ ಲೋಕ

ಲೇಸು ಕ೦ಡಿರುವ ಈ ಬದುಕು, ಕಾಣದಾ ಸಾವಿಗಿ೦ತ

ಬದುಕು ಬದುಕೆಲೋ ಪ೦ಡಿತಪುತ್ರ ||

- ಯಾವ ಬದುಕನ್ನು ನಡೆಸುತ್ತಿದ್ದೀನೋ ಅದು ಏನೆ೦ದು ತಿಳಿದಿಲ್ಲ. ಏತಕ್ಕಾಗಿಯೆ೦ದೂ ಗೊತ್ತಿಲ್ಲ. ಆದರೆ ಕ೦ಡಿದ್ದೇನಷ್ಟೆ. ಆದರೆ ಸಾವಿನ ಬಗೆಗೆ ಇರುವದು ಕೇವಲ ಕಲ್ಪನೆಗೆಳು, ಆ ಲೋಕವನ್ನು ಕ೦ಡೂ ಇಲ್ಲ. ಹಾಗಾಗಿ ಆಗಾಗ ಬರುವ ಹತಾಶ ಭಾವನೆಗಳಿಗಾಗಿ ಪ್ರಾಣತೆಗೆದುಕೊಳ್ಳಲು ಯಾವ ಬಲವಾದ ಕಾರಣವಿದೆ ಹೇಳಿ.

Rating
No votes yet