ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ - ಅಮೆರಿಕನ್ನಡಿಗರಿಂದ ಭಾರಿ ಬೆಂಬಲ
ಕೆ.ಎಸ್.ಸಿ.ಯ ಮನವಿಗೆ ಅನಿವಾಸಿ ಕನ್ನಡಿಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅದರ ಮೊದಲ ಭಾಗವಾಗಿ, ಜಾರ್ಜಿಯ ನೃಪತುಂಗ ಕೂಟದ ಸದಸ್ಯರು ೭೦ ಸಹಿಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ.
ಅನಿವಾಸಿ ಕನ್ನಡಿಗರ ೭೫ ಸಹಿಗಳನ್ನು 'ವಿಚಿತ್ರಾನ್ನ' ಅಂಕಣ ಖ್ಯಾತಿಯ ಶ್ರೀವತ್ಸ ಜೋಷಿಯವರು ಸಂಗ್ರಹಿಸಿದ್ದು ಅಂಚೆ ಮೂಲಕ ಕಳಿಸುವುದಾಗಿ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಅಕ್ಕ' ಬಳಗದ ಪದಾಧಿಕಾರಿಗಳ ಸಹಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಅವರ ಕನ್ನಡ ಪ್ರೀತಿ ದೊಡ್ಡದು. ಅವರೆಲ್ಲರಿಗೂ ಕನ್ನಡಸಾಹಿತ್ಯಡಾಟ್‌ಕಾಂ ಪರವಾಗಿ ಧನ್ಯವಾದಗಳು.
ಸದ್ಯಕ್ಕೆ ಅಮೆರಿಕನ್ನಡಿಗರ ಒಟ್ಟು ೧೫೦ ಸಹಿಗಳು ಸಂಗ್ರಹವಾದಂತಾಗಿದೆ. ಸಂಖ್ಯೆ ಇನ್ನೂ ಹೆಚ್ಚಾಗಲಿದೆ..
ಹಾಗೆಯೇ ಅಮೆರಿಕದಲ್ಲಿ ಸಹಿ ಸಂಗ್ರಹ ಕಾರ್ಯ ಕೈಗೆತ್ತಿಕೊಂಡಿರುವ ಕೃಪೇಶ್ ಮುಂತಾದ ಗೆಳೆಯರಿಗೆ ನಮ್ಮ ಶುಭ ಹಾರೈಕೆಗಳು.
Rating