ವಚನ ಚಿಂತನ ೪ : ಮನಸ್ಸು ಹೀಗೆ..
ಕರಿ ಘನ ಅಂಕುಶ ಕಿರಿದೆನ್ನಬಹುದೆ
ಬಾರದಯ್ಯಾ
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ
ಬಾರದಯ್ಯಾ
ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ
ಬಾರದಯ್ಯಾ
ಕೂಡಲಸಂಗಮದೇವಾ
ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿಸುವಷ್ಟು ಸುಲಭವಾಗಿ ಸೂಕ್ಷ್ಮವನ್ನು ಗಮನಿಸಲಾರದು. ದೊಡ್ಡ ಆನೆ ಕಣ್ಣಿಗೆ ಕಾಣುತ್ತದೆ, ಅದನ್ನು ನಿಯಂತ್ರಿಸುವ ಅಂಕುಶ ಕಾಣುವುದಿಲ್ಲ. ದಟ್ಟವಾದ ಕತ್ತಲು ಮಾತ್ರವೇ ಮುಖ್ಯವಾಗುತ್ತ ಸ್ವಲ್ಪವಾದರೂ ಬೆಳಕು ನೀಡುವ ಹಣತೆ ಗಮನಕ್ಕೇ ಬರುವುದಿಲ್ಲ. ಆಯಾ ಕ್ಷಣದ ಬದುಕಿನ ಜಂಜಡವೇ ಘನವಾಗಿ ಕಾಣುತ್ತ, ಅಂಥ ಜಂಜಡದ ನಡುವೆಯೂ ಉದಾತ್ತವಾದದ್ದನ್ನು ನೆನೆಯ ಬಲ್ಲ ಮನಸ್ಸು ಗಮನಕ್ಕೇ ಬರುವುದಿಲ್ಲ.
- Read more about ವಚನ ಚಿಂತನ ೪ : ಮನಸ್ಸು ಹೀಗೆ..
- Log in or register to post comments