ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ

ನವೆಂಬರ್ ೧ ಹತ್ತಿರ ಬರುತ್ತಿದೆ.

ಈ ವರುಷ ಸಂಪದದಲ್ಲಿ ಮಾಡಬೇಕು ಎಂದು ನಾವಂದುಕೊಂಡ ಸಾಕಷ್ಟು ಕೆಲಸಗಳು ನೆರವೇರಲಿಲ್ಲ. ಆದರೂ ಸಂಪವನ್ನೋದುವವರು ದಿನೇ ದಿನೇ ಕಡಿಮೆಯಾಗದೇ ಹೆಚ್ಚುತ್ತಿರುವುದು ಸಂತಸದ ಮತ್ತು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸಂಪದದಲ್ಲಿ ಆಗಬೇಕೆಂದುಕೊಂಡ ಹಲವು ಕೆಲಸಗಳನ್ನು ನಾವೆಲ್ಲರೂ ಕೈಗೆತ್ತಿಕೊಂಡು ಮುಂದುಹೋಗುವುದರ ಪ್ರಾರಂಭವೆಂಬಂತೆ ಈ ಸಲದ ರಾಜ್ಯೋತ್ಸವಕ್ಕೆ 'ಸಂಪದ'ದಲ್ಲಿ ಇಲ್ಲಿಯವರೆಗೂ ಸೇರಿಸಲ್ಪಟ್ಟಿರುವ ಉತ್ತಮ ಲೇಖನಗಳ ಒಂದು ಇ-ಪುಸ್ತಕ ಮಾಡಿ ನವೆಂಬರ್ ಒಂದರಂದು ಹಂಚೋಣ ಎಂಬ ಸಲಹೆಗಳು ಮೂಡಿಬಂದವು.

ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ ಈ ಇ-ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ. ನೀವು ಇದುವರೆಗೂ ಸಂಪದದಲ್ಲಿ ಓದಿದ, ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ:

webmaster AT sampada DOT net

ಓದುಗರಿಂದ ಹೆಚ್ಚು ಸೂಚಿಸಲ್ಪಟ್ಟ ಲೇಖನಗಳನ್ನು ಸಂಪದ ಬಳಗದ ಹಿರಿಯ ಲೇಖಕರ ಸಂಪಾದಕತ್ವದಲ್ಲಿ ಇ-ಪುಸ್ತಕಕ್ಕೆ ಸೇರಿಸಲಾಗುವುದು.

* ನಿಮ್ಮ ಮೆಚ್ಚಿನ ಪುಟಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೮ರ ಶನಿವಾರ.
* ಸದಸ್ಯರು ಎಷ್ಟು ಬೇಕಾದರೂ ಲೇಖನಗಳನ್ನು ಸೂಚಿಸಬಹುದು.
* ಸದಸ್ಯರು ತಾವೇ ಬರೆದ ಲೇಖನಗಳನ್ನು ಸೂಚಿಸಕೂಡದು.

ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !

ನಮ್ಮ 'ಸಂಪದ ಸೈಟ್' ನ ಎಲ್ಲಾ ಸದಸ್ಯರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು.

೧೯-೧೦-೨೦೦೬, ಗುರುವಾರ, ಅಭ್ಯಂಜನ

ಅಡಿಗರ ಮೋಹನ ಮುರಲಿ

ಫ್ರಿಯ ಮಿತ್ರರೇ,

ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-flute-poem.html. ಈ ಲಿಂಕ್ ಕ್ಲಿಕ್ ಯಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ

(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.

ಜಲಪಾತಕ್ಕೆ ಚಾರಣ

ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ.  ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. 

"ಮುಂಬೈ- ಪೂನಾ ಕನ್ನಡ ಸಾಹಿತ್ಯ.ಕಾಂ", ಮುಂಬೈ ನಗರದಲ್ಲಿ ವಿಧ್ಯುಕ್ತವಾಗಿ ನೆರೆವೇರಿತು !!

ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ ವಿಧ್ಯುಕ್ತವಾಗಿ ಅಕ್ಟೋಬರ್, ೧೫ ರಂದು, ಮುಂಬೈಯ 'ಕರ್ನಾಟಕ ಸಂಘ'ದ ಆವರಣದಲ್ಲಿ ಉದ್ಘಾಟನೆಯಾಯಿತು. ಪ್ರಾ. ಜಯದೇವ ಹಟ್ಟಂಗಡಿಯವರ ಹಸ್ತದಿಂದ ಶುರುವಾದ ಈ ಅಭಿಯಾನ, ಶ್ರೀ ಶೇಖರ್ ಪೂರ್ಣರವರ ಕನಸಿನ ಕೂಸನ್ನು ಮೇಲೆತ್ತಿ ನಲಿಸಿ, ಮೆರೆಸಲು, ಬೆಳೆಸಲು ಅನುವು ಮಾಡಿಕೊಟ್ಟಿದೆ. ಮೇಲಾಗಿ ಇದು ಕನ್ನಡಿಗರೆಲ್ಲರ ಆಶೋತ್ತರಗಳಿಗೆ ಹಿಡಿದಿಟ್ಟ ದರ್ಪಣವೆಂದರೆ ಅತಿಶಯೋಕ್ತಿಯಲ್ಲ !

(ಅಫ್ಜಲ್) ಗುರು ಹತ್ಯೆ ಮಹಾಪಾಪ!

(ಬೊಗಳೂರು ಓಟ್ ಬ್ಯಾಂಕ್ ಬ್ಯುರೋದಿಂದ)
ಬೊಗಳೂರು, ಅ.16- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.