ದೀಪಾವಳಿಗೊಂದು ಕವನ...
ಬರಹ
ಶ್ರಾವಣನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ
ಕತ್ತಲನು ಓಡಿಸುವ,
ದೀವಿಗೆಯೂ ಜೊತೆಯಿಹುದು
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ
ದಾರಿ ಬಿಡಿ ಆತನಿಗೆ,
ಮನದ ಕದವನು ತೆರೆದು
ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ.
ಎಲ್ಲರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು. ಹಬ್ಬಗಳ ರಾಜ ದೀಪಾವಳಿ, ಸಮಸ್ತರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.