ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾ ಕಂಡ ಹೋಲಿ

ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?

ರಂಗಸ್ಥಳ

ನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ ನೋಡಿದಾಗಲೇ ಅದನ್ನು ಗೌರವದಿಂದ ಕಾಣಲು ಸಾಧ್ಯ. ಬಹುಶಃ ಇದು ನಿಸರ್ಗದ ಭೀಕರತೆಯ ಮುಖವನ್ನು ಬದಿಗಿಟ್ಟು, ಅದರ ಸೌಂದರ್ಯವನ್ನು ಹೊಗಳುವ,ಗೌರವಿಸುವ ಪ್ರಯತ್ನ. ಹೀಗೆ ನೋಡಿದಾಗಲೇ ನಿಸರ್ಗವನ್ನು ಕಾಪಾಡಬೇಕೆಂಬ ಮನಸ್ಸಾಗುವುದು.

ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!

ನಿನ್ನೆ ಸಿಎನ್ಎನ್-ಐಬಿಎನ್‌ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದು ಎಂದರು.ಆಮೇಲೆ ಸಂತ ಶಿಶುನಾಳ ಶರೀಫರ ಬಗ್ಗೆ ಶಿವಮೊಗ್ಗ ಸುಬ್ಬಣ್ಣ ಮಾತನಾಡಿದರು.ಹಿನ್ನಲೆಯಲ್ಲಿ ಸುಬ್ಬಣ್ಣನವರ

ಸಂಸ್ಕೃತದಿಂದ ಇನ್ನಷ್ಟು ಒಳ್ಳೆಯ ಸುಭಾಷಿತಗಳು (೪೦-೪೨)

೪೦. ಪೂರ್ಣವಾಗಿ ಸಜ್ಜನರ ದಾರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದರೆ ಸಾಧ್ಯವಿದ್ದಷ್ಟಾದರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಿಂದ ದೂರ ಸರಿಯಬಾರದು.

ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'

ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'

ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂದಿತು. ಅಲ್ಲಿ 'ಮನಸುಖರಾಯನ ಮನಸು' ಪುಸ್ತಕದಿಂದ ಎಂದು ಹೇಳಿದ್ದರಿಂದ ಧಾರವಾಡದ ಪುಸ್ತಕದ ಅಂಗಡಿಗಳಿಗೆ ಹೋದಾಗಲೆಲ್ಲ ಆ ಪುಸ್ತಕವನ್ನು ಕೇಳುತ್ತಿದ್ದೆ. ಅದು ಇರುತ್ತಿರಲಿಲ್ಲ ; ಅವರ ಬೇರೆ ಪುಸ್ತಕಗಳನ್ನು ತೋರಿಸುತ್ತಿದ್ದರು . ಅದೂ ಒಳ್ಳೆಯದೇ ಆಯಿತು . ಹೀಗಾಗಿ ನನಗೆ 'ತಲೆಗೊಂದು ತರತರ' , ' ರುಚಿಹುಳಿಯೊಗರು' ಮತ್ತು 'ಹಳ್ಳ ಬಂತು ಹಳ್ಳ' ಸಿಕ್ಕವು . ಮನಸುಖರಾಯನ ಮನಸು ಕೂಡ ಇತ್ತೀಚೆ ಬೆಂಗಳೂರಿಗೆ ಹೋದಾಗ ಅನಿರಿಕ್ಷಿತವಾಗಿ ಸಪ್ನಾ ಮಳಿಗೆಯಲ್ಲಿ ಸಿಕ್ಕಿತು ( ಬಹುಶ: ಎರಡೇ ಪ್ರತಿ ಉಳಿದಿದ್ದವು) .

ಆಯ್ದ ಸಂಸ್ಕೃತ ಸುಭಾಷಿತಗಳು. (೩೭-೩೯)

೩೭. ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-

ಆಯ್ದ ಗಾದೆಮಾತುಗಳು : (೧೧-೨೦)

ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ್ಲಿ ಕೊಡುತ್ತಿದ್ದೇನೆ.