ಮತದಾನ .

ಮತದಾನ .

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ ಯಾಕಂದ್ರೆ ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ನಾನು ನನ್ನ ಸ್ವೇಚ್ಛೆಯಿಂದ ಇಷ್ಟ ಬಂದವರಿಗೆ (...?) ಮತದಾನ ನೀಡಬಹುದಾಗಿತ್ತು . ಅಪ್ಪ - ಅಮ್ಮನ "permission" ಅಗತ್ಯ ಇರಲಿಲ್ಲ .

ಇನ್ನು ಕುತೂಹಲ - ಹೇಳಬೇಕು ಅಂದ್ರೆ A to Z ಕೂಡ ಗೊತ್ತಿರಲ್ಲಿಲ್ಲ ನನಗೆ ಈ "ಚುನಾವಣೆ" ಬಗ್ಗೆ . ಮತದಾನ ಮಾಡುವುದಕ್ಕೆ ಚುನಾವಣೆಯಾಗಲಿ ಅಥವಾ ಅಧಿಕಾರಕ್ಕಾಗಿ ನಡೆಯುವ "ರಾಜಕೀಯ" ವಾಗಲಿ (lobby)- ಈ ವಿಷಯಗಳ ಬಗ್ಗೆ ತಿಳಿದಿರಬೇಕೇ ? ಎಂಬುದೊಂದು ತರ್ಕ . ಈ ವಿಷಯಗಳ ಕೂಲಂಕುಷ ವಿಚಾರ ಹಾಗು ಚರ್ಚೆ ಮತದಾನದ ಮುಂಚೆ ಅಗತ್ಯ ಎಂಬುದು ಇನ್ನೊಂದು ತರ್ಕ . ದುಡ್ಡಿಗಾಗಿ , ಹೆಂಡಕ್ಕಾಗಿ , ತೊಳ್ಬಲದ ಎದುರು ಬಾಗಿ ತಮ್ಮ ಮತವನ್ನು ಚುನಾವಣೆಯಲ್ಲಿರುವ ಅತ್ಯಂತ ಅಯೋಗ್ಯರಿಗೆ ನೀಡುವ "vote bank" ಒಂದು ಕಡೆಯಾದರೆ , "ನಮ್ಮ ಜಾತಿಯವರು ಬರಲಿ" ಎನ್ನುವ ಹಾಗು "ಯಾರಿಗೋ ಮತ ಕೊಡಲು ನಾವು "queue" ನಲ್ಲಿ ನಿಲ್ಲಬೇಕಾ ?" ಎಂಬ ಜಾಯಮಾನದವರು ಇನ್ನೊಂದು ಕಡೆ . ಈ ಕಾರಣಗಳಿಂದಾಗಿಯೇ ಅಪ್ರಯೋಜಕ , ಸಮಾಜ ವ್ಯವಸ್ಥೆಯನ್ನು ಹಾಳು ಮಾಡುವಂತಹ ಹಣ ಭಕ್ಷಕರು , ಅಧಿಕಾರ ಶಾಹಿಗಳು ಎಲ್ಲಾ ಕ್ಶೇತ್ರಗಳಲ್ಲಿ ಆರಿಸಿ ಬರುತ್ತಿರುವುದು ಆಶ್ಚರ್ಯದ ಸಂಗತಿಯೇನಲ್ಲ .

ಇಂತಹವರ ಕೈಯಲ್ಲಿ ರಾಜ್ಯದ ಅಥವಾ ದೇಶದ ಅಧಿಕಾರದ ಚುಕ್ಕಾಣಿ ಕೊಟ್ಟು ಮುಂದೆ ತೊಂದರೆ ಬಂದಾಗ ಸರ್ಕಾರವನ್ನು ದೂರುವ ಜನ ಮತ್ಯಾರೂ ಅಲ್ಲ ಅವರನ್ನು ಆರಿಸಿದವರೇ ಎಂಬುದು ವಿಪರ್ಯಾಸ ! ಈ ಕಾರಣದಿಂದಾಗಿಯೇ ಚರ್ಚೆ ಅತ್ಯಾವಶ್ಯಕ.

ಸಾಮನ್ಯವಾಗಿ ಚುನಾವಣೆ ಸಮಯದಲ್ಲಿ ಮಾತ್ರ ಜ್ನಾಪಕಕ್ಕೆ ಬರುವ "votebanks" ಈ ಕೆಲವು ಮಾತುಗಳನ್ನು ಮತದಾನದ ಮುಂಚೆ ನೆನಪಿನಲ್ಲಿಡಬೇಕಾಗುತ್ತದೆ . ಸುದ್ದಿ ಮಾಧ್ಯಮದಲ್ಲಿ ನಿಮ್ಮ ಕ್ಶೇತ್ರದಲ್ಲಿ "candidates" (ಅಭ್ಯರ್ಥಿಗಳು) ಅವರುಗಳ ಬಗ್ಗೆ ನಂಬಲಾರ್ಹ ವಿಷಯಗಳನ್ನು ಸಂಗ್ರಹಿಸುವುದು . ದುಡ್ಡು , ಹೆಂಡಕ್ಕೆ , ಒಂದು ದಿನದ ಖುಷಿಗಾಗಿ ಮತವನ್ನು ಮಾರಿಕೊಳ್ಳದೆ ಹೆದರಿಕೆಗೆ ಬಗ್ಗದೆ , "ಜಾತಿ" ಹೆಸರಿಗೆ ಕುಗ್ಗದೇ ಅಭ್ಯರ್ಥಿಗಳ ಪಟ್ಟಿ ಮಾಡಬೇಕು . ಕಾನೂನು ಶಿಕ್ಷೆಗೆ ಅನುಭವಿಸಿದವರಿಗೆ , ಅರೋಪ ಎದುರಿಸುತ್ತಿರುವವರಿಗೆ , "mercy" ಅಂದರೆ ದಯೆಯಂಬ ಅಲೆಯ ಮೇಲೇರಿ ಬಂದವರಿಗೆ ಬೇಷರತ್ತಾಗಿ ಪಟ್ಟಿಯಲ್ಲಿ ಜಾಗ ಕೊಡಬಾರದು . ಈ ರೀತಿ ಪಟ್ಟಿ ತಯಾರಿಕೆ ಕಷ್ಟವಾದರೂ ಅಸಾಧ್ಯವಲ್ಲ.

ಈಗ ಈ ಪಟ್ಟಿಯಲ್ಲಿರುವ ಕಾರ್ಯತಂತ್ರಗಳು - "election manifesto" ನಮ್ಮ ಅಯ್ಕೆಯ ದಾರಿದೀಪವಾಗಬೇಕು . ನನಗೆ ತಿಳಿದ ಹಾಗೆ ೧೦೦೦೦ ಮತದಾರರಲ್ಲಿ ಒಬ್ಬ ಮಾತ್ರ ಅಭ್ಯರ್ಥಿಗಳ ಕಾರ್ಯತಂತ್ರಗಳನ್ನು ತಿಳಿದಿರುತ್ತಾರೆ . ಇದು ಬಹಳ ತಪ್ಪು . ತಾವು ಅರಿಸಿ ಬಂದರೆ ಮಾಡುವ ಕೆಲಸಗಳೇನು ಹಾಗು ಕಾರ್ಯತಂತ್ರಗಳೇನು ಎಂಬುದು ಬಾಯಿಮಾತಿನಲ್ಲಿ ಕೇಳುವ ಜನ ಇಲ್ಲೇ ತಪ್ಪು ಎಸೆಗುತ್ತಾರೆ . "ಮಹಾತ್ಮರ" ಹೆಸರನ್ನು ಬಳಸಿ ಮತಯಾಚನೆ ಬಹಳ ಹಿಂದಿನಿಂದಲೂ ನಡೆದುಬರುತ್ತಿದೆ . ಜನರು ಕುರಿಗಳ ಹಾಗೆ ಹಳ್ಳಕ್ಕೆ ಬೀಳುತ್ತಾರೆ . ಇದಕ್ಕೆ ತಡೆಯಲು ಇರುವ ಉಪಾಯ ಒಂದೇ - ಸ್ವೇಚ್ಛೆಯಿಂದ ವಿಚಾರ ಮಾಡಿ ಮತಚಲಾವಣೆ ಮಾಡುವುದು .

ತಮ್ಮ ಮತದಾನದ ಶಕ್ತಿಯನ್ನು ಜನರು ಅರಿಯಬೇಕು . ಒಂದು ಮತ ಮಾತ್ರವಾದರು ಅತ್ಯಮೂಲ್ಯ ಎಂದು ತಿಳಿಯಬೇಕು . ಚುನಾವಣೆಯಲ್ಲಿ ನಡೆಯುವ ಅವ್ಯವಹಾರ , ಅತಿಕ್ರಮಗಳ ವಿರುದ್ಧ ದನಿ ಎತ್ತಬೇಕು . ಖಂಡಿತ ಈ ಕೆಲಸಗಳು ಸಾಧ್ಯ . ಈ ಕೆಲಸಗಳು ಕಾರ್ಯಗತಗೊಂಡಲ್ಲಿ ಖಂಡಿತ ಹಳ್ಳಿಗಳಾಗಲಿ , ನಗರಗಳಾಗಲಿ ರಾಜ್ಯದ ಎಲ್ಲಾ ಕಡೆ ಪ್ರಗತಿ , ಶಾಂತಿ , ಸೌಹಾರ್ದ ನೆಲೆಸುತ್ತವೆ .

Rating
No votes yet

Comments