ಯಶೋಧಾನಂದನ
ಮಾಧವನ ಜನನದಿಂದ
ಭುವನ ಬೃಂದಾವನ./೧/.
ಕೇಶವನಾಗಮನದಿಂದ
ಚಂದನಂದನವನ./೨/.
- Read more about ಯಶೋಧಾನಂದನ
- Log in or register to post comments
ಮಾಧವನ ಜನನದಿಂದ
ಭುವನ ಬೃಂದಾವನ./೧/.
ಕೇಶವನಾಗಮನದಿಂದ
ಚಂದನಂದನವನ./೨/.
೧)
ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು
ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು?
ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ
ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು
ಆರು ವೈರಿಗಳು.
ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ
೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ.
೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್‌ನಲ್ಲಿ "estop" ಎಂದರೆ ಮಾತ್ರ ಬ್ರೇಕ್ ಹಾಕುವ ಇವು ಕನ್ನಡದಲ್ಲಿ "ನಿಲ್ಲು" ಎಂದರೆ ನಿಮ್ಮನ್ನೇ ತಾತ್ಸಾರದಿಂದ ಕಾಣುವ risk ಇದೆ! ತಿನ್ನು ತಿನ್ನು ಎಂದು ಸಾವಿರ ಸರಿ ಕೂಗಿದರೂ ತಟ್ಟೆಗೆ ಬಾಯಿ ಹಾಕದ ಇವು "eat" ಅಂದ ತಕ್ಷಣ ಗಬಗಬನೆ ತಟ್ಟೆ ಖಾಲಿ ಮಾಡುತ್ತವೆ. "Stop please, eat please, pee please" ಎಂದು ಪ್ಲೀಸಬೇಕಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. 10 ವರ್ಷ ಮನೆಪಾಠ ಹೇಳಿಸಿಕೊಂಡು ಕಲಿತರೂ ಮನುಷ್ಯರಿಗೆ ಸಾಧಿಸದ ಇಂಗ್ಲಿಷ್ ಎಂಬ ಬ್ರಹ್ಮವಿದ್ಯೆ ನಾಯಿಗಳಿಗೆ ಇಷ್ಟು ಸುಲಭವಾಗಿದ್ದು ಮಾತ್ರ ಆಶ್ಚರ್ಯ.
ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.
ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು ದೂರವಿಟ್ಟಿರುವುದರ ಬಗ್ಗೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ ಅದು ಬೇಡ ಅಂತನೇ ಹೆಚ್ಚಿನವರು ನಂಬಿದ್ದಾರೆ. ಬೆಂಗಳೂರಿನ ಕೆಲವು ಜನರನ್ನು ಕಾಯುವ ಹೊಣೆ ಹೊತ್ತು ಕನ್ನಡ ತಾಯಿ ಭುವನೇಶ್ವರಿ ಕ್ರುಷವಾಗಿದ್ದಾಳೆ. ಸ್ವಾಮಿ ಕನ್ನಡ ಚಿತ್ರರಂಗವನ್ನು ಒಂದು ಮುಕ್ತ ಅಖಾಡವಾಗಿಸಿರಿ, ಇದರಿಂದ ಭಾಷೆ ಸಮ್ರುದ್ಧಿಯಾಗಿ ಬೆಳೆಯುವುದಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮವೂ ತೆಲುಗು ಮತ್ತು ತಮಿಳು ಚಿತ್ರರಂಗಗಳಂತೆ ವಿಶಾಲವಾಗುತ್ತದೆ. ದಯವಿಟ್ಟು ಕನ್ನಡವನ್ನು ನಮ್ಮದೇ ಚಿತ್ರೋದ್ಯಮದವರ ಕೈಯಿಂದ ಮುಕ್ತಗೊಳಿಸಿ, ಇಲ್ಲವಾದರೆ ಕನ್ನಡಕ್ಕೆ ಬೀಳುತ್ತಿರುವ ಹೊಡೆತಗಳು ಅವ್ಯಾಹತವಾಗಿ ಸಾಗಿರುತ್ತವೆ. ಇಂದು ಕನ್ನಡ ಚಿತ್ರರಂಗ ಬೆಳೆದಿದೆ, ಈಗಲಾದರೂ ಮುಕ್ತ ಸ್ಪರ್ದೆಗೆ ಸಿದ್ಧರಾಗಿ, ಕನ್ನಡ ನಾಡಿನಲ್ಲಿ ನಮ್ಮದಲ್ಲದ ಭಾಷೆಯಲ್ಲಿ ಚಿತ್ರ ನೋಡಬೇಕಾದ ವಿಪರ್ಯಾಸವನ್ನು ತಪ್ಪಿಸಿ. ತಮಿಳು ಮತ್ತು ತೆಲುಗು ಭಾಷೆಗಳು ತಮ್ಮ ಚಿತ್ರಗಳ ಮೂಲಕ ನಿರಂತರವಾಗಿ ಕರ್ನಾಟಕದೊಳಗೆ ನುಸುಳುತ್ತಿವೆ. ಅಪ್ಪಟ ಕನ್ನಡ ಒಳನಾಡುಗಳಲ್ಲೂ ಹೊರಗಿನ ಭಾಷೆಯ ಚಿತ್ರಗಳು ದಾಳಿ ನಡೆಸಿವೆ. ಆದರೆ ಕನ್ನಡ ಚಿತ್ರಗಳ ಮೂಲಕ ಅವರ ನಾಡಿಗೆ ವಿಚಾರಗಳು ತಲುಪುತ್ತವೆಯೇ ಹೊರತು ಭಾಷೆ ಕಿಂಚಿತ್ತೂ ಇಣುಕದು, ಅಂದ ಮೇಲೆ ಭಾಷೆಯ ಬೆಳವಣಿಗೆಯಾದರೂ ಹೇಗೆ ಸಾಧ್ಯ. ಚಿತ್ರರಂಗದವರ ಈ ಧೋರಣೆಯಿಂದ ಕನ್ನಡಕ್ಕೆ A.R.ರೆಹಮಾನ್‌ರಂತ ಅದ್ಭುತ ಪ್ರತಿಭೆಯ ಸಂಗೀತ ದೊರಕಿಲ್ಲ, ಅದೇ ತೆಲುಗು ಮತ್ತು ತಮಿಳು ರಂಗಗಳನ್ನು ನೋಡಿ, ಅವರು ಇಂಗ್ಲಿಷ್ ಚಿತ್ರಗಳನ್ನು ಮೊದಲುಗೊಂಡು ಎಲ್ಲವನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಂಡಿರುವುದಷ್ಟೇ ಅಲ್ಲದೇ ಅದರಿಂದ ಅವರ ಚಿತ್ರರಂಗ ಅದ್ಭುತ ಚಿತ್ರಗಳನ್ನು ನಿರ್ಮಿಸಲು ಅನುಕೂಲವಾಗಿದೆ. ಬೇರೆ ಭಾಷೆಯವರು,ಅವರೇ ಏಕೆ ನಮ್ಮವರೇ, ನಮ್ಮ ಚಿತ್ರಗಳನ್ನು ಅಸಡ್ಡೆ ಧೋರಣೆಯಿಂದ ನೋಡುವುದು ಇದೇ ಕಾರಣದಿಂದ. ಬೆಂಗಳೂರಿನ ಚಿದ್ರೋದ್ಯಮದವರೇಕೇ ಇಷ್ಟೊಂದು ಆತ್ಮವಿಶ್ವಾಸವಿಲ್ಲದರಾಗಿದ್ದಾರೆ. ಮುಂಚಿನಿಂದಲೂ ಡಬ್ಬಿಂಗಗೆ ಅವಕಾಶವಿದ್ದಲ್ಲಿ ಇಂದು ಕನ್ನಡ ಖಂಡಿತವಾಗಿ ಈ ಸ್ಥಿತಿಯಲ್ಲಿರುತ್ತಿರಲಿಲ್ಲ.
ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ .
ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ ಮತ್ತು ಮನಃಸಂಸ್ಕಾರ ಆಗುತ್ತದೆ. ಸಂಸ್ಕಾರದ ಪರಿಣಾಮವೇ ಸಂಸ್ಕೃತಿ. ಹೀಗಾಗಿ ಸಾಹಿತ್ಯ ಎನ್ನುವದು ಸಂಸ್ಕೃತಿಯ ಸಾಧನ. ಯಾವ ಬರವಣಿಗೆ ಸಂಸ್ಕೃತಿಯನ್ನು ಪೋಷಿಸುವದಿಲ್ಲವೋ ಅದು 'ಸಾಹಿತ್ಯ' ಎನ್ನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂಬ ಮಾನದಂಡವು ಇದರಿಂದಾಗಿ ಲಭಿಸುತ್ತದೆ. ಸಂಸ್ಕಾರ್‍ಅವೆಂದರೆ ಅಶುದ್ಧವಾದದ್ದನ್ನು ಶುದ್ಧೀಕರಿಸುವದು, ಉತ್ತಮವಲ್ಲದುದನ್ನು ಉತ್ತಮವಾಗಿ ಮಾಡುವದು , ಪರಿಷ್ಕರಿಸುವದು ಎಂದರ್ಥ . ಸುಸಂಸ್ಕೃತಿಯೇ ಸಾಹಿತ್ಯದ ಗುರಿ . ಅರ್ಥಾತ್ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುವದೇ ಸಾಹಿತ್ಯದ ಉದ್ದೇಶ .
ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ.
ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ. ರಷ್ಯಾದ ಗ್ಲೋನಾಸ್ ವ್ಯವಸ್ಥೆಯ ಉಪಗ್ರಹಗಳನ್ನು ಭಾರತದಿಂದ ಉಡಾವಣೆ ಮಾಡುವಂತೆಯೂ, ಭಾರತದಲ್ಲಿ ಸೇನೆಯವರೂ ಸಾರ್ವಜನಿಕರೂ ಆ ವ್ಯವಸ್ಥೆಯನ್ನು ಬಳಸಲಾಗುವಂತೆಯೂ ಒಪ್ಪಂದವೇರ್ಪಟ್ಟಿದೆ. ಸಾಲದ್ದಕ್ಕೆ ಯೂರೋಪಿನ ಇ.ಎಸ್.ಎ ಸಂಸ್ಥೆಯವರ ಗೆಲಿಲೆಯೋ ವ್ಯವಸ್ಥೆಯಲ್ಲೂ ಭಾರತ ಪಾಲ್ಗೊಳ್ಳುವಂತೆ ಒಪ್ಪಂದವಾಗಿದೆ. ಇಷ್ಟಿದ್ದೂ ಮತ್ತೊಂದು ವ್ಯವಸ್ಥೆ ಬೇಕೆ? ಇದರಿಂದ ಯಾವ ಹೊಸ ಪ್ರಯೋಜನವಾದೀತು? ಎಲ್ಲ ತಿಳಿದೂ ಯೋಜನೆ ತಯಾರಿಸಿದ ಇಸ್ರೋದವರ ಉದ್ದೇಶವಾದರೂ ಏನಿರಬಹುದು?
ಒಂದು ವೇಳೆ ಸರ್ಕಾರದವರು ಮಂಜೂರು ಮಾಡಿದರೆ ಹೊಸ ವ್ಯವಸ್ಥೆಗೊಂದು ಹೆಸರು ಬೇಕಲ್ಲ? ನಕ್ಷತ್ರ ಚೆನ್ನಾಗಿ ಒಪ್ಪುತ್ತೆ, ಏನಂತೀರಿ?
[ ನ್ಯಾಯವಾಗಿ ಜಿ.ಪಿ.ಎಸ್ ಅಮೇರಿಕೆಯ ವ್ಯವಸ್ಥೆಯ ಹೆಸರು ಮಾತ್ರ; ಉಳಿದವನ್ನು ಆ ಹೆಸರಿನಿಂದ ಕರೆಯಲು ಬಾರದು; ಆದರೆ "ಉಪಗ್ರಹಾಧಾರಿತ ಯಾನವ್ಯವಸ್ಥೆ" ಎನ್ನುವುದರ ಬದಲಾಗಿ ಜಿ.ಪಿ.ಎಸ್ ಎನ್ನುವುದು ಸುಲಭ. ಇದರಿಂದ ಯಾರಾದರೂ ನೊಂದಿದ್ದರೆ ದಯವಿಟ್ಟು ಕ್ಷಮಿಸಿ. ]
ವೆಂ.
ಆರು ವೈರಿಗಳು.
ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ