ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
- Read more about ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
- 1 comment
- Log in or register to post comments
ಸಂಪದದಲ್ಲಿ ಕೆಳಗಿನಂತೆ ಸಬ್ ಡೊಮೈನ್ ಗಳಿವೆ. ಇವುಗಳನ್ನು ಉಪಯೋಗಕ್ಕೆ ತರಬೇಕಾಗಿ ಸದಸ್ಯರಲ್ಲಿ ಕೋರಿಕೆ...
ಕನ್ನಡಕ್ಕೆ ಸಂಬಂಧಿಸಿದ ಚರ್ಚೆಗಳ ಅತಿ ದೊಡ್ಡ ಮಿತಿಯೆಂದರೆ ಅದು ಕೇವಲ ‘ಭಾಷಾ ಶುದ್ದಿ’ಯ ಇಲ್ಲವೇ ಕನ್ನಡ ಸಾಹಿತ್ಯದ ಕುರಿತ ಚರ್ಚೆಯಾಗಿಬಿಡುವುದು. ಇನ್ನೂ ಸ್ವಲ್ಪ ಸ್ಪಷ್ಟವಾಗಿ ಹೇಳಬೇಕೆಂದರೆ ಕನ್ನಡ ಭಾಷೆಯ ಒಂದು ಬಗೆಯ ಬಳಕೆಗಷ್ಟೇ ಈ ಚರ್ಚೆಗಳು ಸೀಮಿತವಾಗುವುದು. ಈ ಚೌಕಟ್ಟನ್ನು ಮೀರಿದವರು ಚರ್ಚೆಯಿಂದ ಹೊರಗುಳಿಯುತ್ತಾರೆ ಇಲ್ಲವೇ ‘ಮಡಿವಂತ’ರ ತೀವ್ರ ದಾಳಿಗೆ ಗುರಿಯಾಗುತ್ತಾರೆ. ಡಿ.ಎನ್.ಶಂಕರಭಟ್ಟರ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ವಿದ್ವತ್ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತು. ಈ ಚರ್ಚೆಗಳನ್ನು ಕನ್ನಡದ ಬಳಕೆಯ ಮಟ್ಟಕ್ಕೆ ತರುವಲ್ಲಿ ಎಲ್ಲರೂ ಸೋತರು. ಕನ್ನಡ ಬಳಸುವ ಸಾಮಾನ್ಯರನ್ನು ಬಿಟ್ಟು ಬಿಡೋಣ. ಕನ್ನಡ ಸ್ನಾತಕೋತ್ತರ ತರಗತಿಗಳಲ್ಲೂ ‘ಕನ್ನಡದ್ದೇ ವ್ಯಾಕರಣ’ ಪರಿಕಲ್ಪನೆಯ ಕುರಿತ ಚರ್ಚೆಗಳು ನಡೆಯುವುದಿಲ್ಲ. ಅಂದರೆ ನಮ್ಮ ಮಟ್ಟಿಗೆ ಕನ್ನಡದ ಕುರಿತ ಚರ್ಚೆ ಎಂಬುದು ಜೀವಂತ, ಚಲನಶೀಲ ಸಂಸ್ಕೃತಿಯೊಂದರ ಕುರಿತ ಚರ್ಚೆಯಲ್ಲ. ‘ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ’ ಎಂಬ ನಾಸ್ಟಾಲ್ಜಿಯಾದಲ್ಲಿ ಮುಳುಗುವ ಚರ್ಚೆಗಳು. ಈಗ ಓ.ಎಲ್.ಎನ್. ಅವರು ಆರಂಭಿಸಿರುವ ಭಾಷಾ ಶುದ್ಧಿಗೆ ಸಂಬಂಧಿಸಿದ ಚರ್ಚೆಗೆ ಬರುತ್ತಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಭಾಷೆಯ ಕುರಿತ ಸೀಮಿತ ಗ್ರಹಿಕೆಯನ್ನು ಬಹಳ ಸ್ಪಷ್ಟವಾಗಿ ವ್ಯಕ್ತ ಪಡಿಸುತ್ತಿವೆ.

ನಾನು ೧೯೭೭ರಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಬಾಲಕರ ಕಿರಿಯರ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಗ ಈ ಘಟನೆ ನಡೆಯಿತು. ನಮ್ಮ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳಲ್ಲಿ ಬಹುತೇಕರು ಆರ್ಥಿಕವಾಗಿ ತೀರಾ ಹಿಂದುಳಿದ ಹಿನ್ನೆಲೆಯಿಂದ ಬಂದವರಾದ್ದರಿಮ್ದ ಎಷ್ಟೋ ಸಮಯ ಬಹಳಷ್ಟು ಜನರಿಗೆ ಬಟ್ಟೆಬರೆ ಚೆನ್ನಾಗಿರುತ್ತಿರಲಿಲ್ಲ. ನನ್ನ ಮನೆಗೆ ಹತ್ತಿರವೇ ಮನೆ ಇದ್ದ ಸಹಪಾಠಿಯೊಬ್ಬ ಪ್ರತಿದಿನ ಶಾಲೆಯಿಂದ ಹಿತಿರುಗುವಾಗ ನನ್ನನ್ನು ಬಹಳಷ್ಟು ಬಲವಂತ ಮಾಡಿ ಇಡೀ ಶಾಲೆಯಲ್ಲಿ ನನ್ನ ಬಳಿ ಮಾತ್ರ ಇದ್ದಂತಹ ಅಲ್ಯೂಮೀನಿಯಂ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದ. ಅವನ ಚೀಲವನ್ನು ನಾನು ಹಿಡಿದುಕೊಳ್ಳಬೇಕಾಗುತ್ತಿತ್ತು. ತಾನು ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದೇನೆ ಎನ್ನುವುದೇ ಅವನಿಗೆ ಅತ್ಯಂತ ಸಂತಸದ ವಿಷಯವಾಗಿತ್ತು!