ಆಲೂರು ವೆಂಕಟರಾಯರು - ೧೨೬ನೇ ಜನ್ಮ ದಿನ
ವಿಜಯ ಕರ್ನಾಟಕದ ದಿನ ವಿಶೇಷ ಗಮನಿಸುತ್ತಿದ್ದಾಗ ಮೇಲಿನ ವಿಚಾರ ಅರಿವಿಗೆ ಬಂತು. ೧೮೮೦ರಲ್ಲಿ ಈ ದಿನ ವಿಜಾಪುರದಲ್ಲಿ 'ಕರ್ನಾಟಕ ಕುಲಪುರೋಹಿತ' ಆಲೂರು ವೆಂಕಟರಾಯರ ಜನನವಾಗಿತ್ತು.
ಅಂತರ್ಜಾಲದಲ್ಲಿ ಅವರ ಚಿತ್ರ ಸಿಕ್ಕೀತೆ ಎಂದು ತಡಕಾಡಿದಾಗ ಈ ಲಿಂಕ್ ಸಿಕ್ಕಿತು.
ಮರಾಠಿ, ಉರ್ದು, ಅಂಗ್ರೇಜಿಗಳ ಹೊಡೆತಕ್ಕೆ ಉತ್ತರ ಕರ್ನಾಟಕದಲ್ಲಿ ಕನ್ನಡ ತತ್ತರಿಸಿಹೋಗಿದ್ದ ಕಾಲಕ್ಕೆ ಕನ್ನಡಪರ ಚಿಂತನದ ಜ್ಯೋತಿ ಹಚ್ಚಿ ತನ್ಮೂಲಕ ಕರ್ನಾಟಕದ ಏಕೀಕರಣಕ್ಕೆ ಕಾರಣೀಭೂತರಾದವರಲ್ಲಿ ಅಗ್ರಗಣ್ಯರು. 'ಕರ್ನಾಟಕ ಗತ ವೈಭವ' ದಂತಹ ಕೃತಿಗಳನ್ನು ಕೊಟ್ಟು, ವಿಸ್ಮೃತಿಗೆ ಸರಿದಿದ್ದ ಕನ್ನಡದ ಪರಂಪರೆಯ ನೆನಪುಮಾಡಿಕೊಟ್ಟವರು. ಕನ್ನಡಿಗರೆಲ್ಲರೂ ತಂಪುಹೊತ್ತಿನಲ್ಲಿ ನೆನೆಯಬೇಕಾದಂತಹ ಮಹನೀಯರು.
Rating