ನನ್ನ ಚುಟುಕ ಹಾಗೂ ಲೇಖನಗಳು
ಗೆಳೆಯರೇ,
ನನ್ನ ಕೆಲವು ಚುಟುಕಗಳು (ಹಾಸ್ಯ ಚುಟುಕಗಳು) ಹಾಗೂ ಲೇಖನಗಳನ್ನು ಕೆಳಗಿನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ... ನಿಮ್ಮ ಆಭಿಪ್ರಾಯಕ್ಕೆ ಸದಾ ಸ್ವಾಗತ.
- Read more about ನನ್ನ ಚುಟುಕ ಹಾಗೂ ಲೇಖನಗಳು
- Log in or register to post comments
ಗೆಳೆಯರೇ,
ನನ್ನ ಕೆಲವು ಚುಟುಕಗಳು (ಹಾಸ್ಯ ಚುಟುಕಗಳು) ಹಾಗೂ ಲೇಖನಗಳನ್ನು ಕೆಳಗಿನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ... ನಿಮ್ಮ ಆಭಿಪ್ರಾಯಕ್ಕೆ ಸದಾ ಸ್ವಾಗತ.
ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: [:http://kannada-kathe.blogspot.com|kannada-kathe.blogspot.com]) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. [:http://www.sepiamutiny.com/sepia/archives/003580.html|ಕೆಲವು ಮೂಲಗಳ] ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot ಬ್ಲಾಕ್ ಮಾಡುವಂತೆ ಆಜ್ಞೆಯಿತ್ತಿದೆ ಎಂಬ ಗುಲ್ಲು ಅಂತರಜಾಲದಾದ್ಯಂತ ಇಂದು ಹಬ್ಬಿದೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೆ ಅದು ನಿಜವೇ ಆಗಿದ್ದಲ್ಲಿ, ಹಾಗೆ ಬ್ಲಾಕ್ ಮಾಡುವುದರಿಂದ ಸರಕಾರಕ್ಕೂ ಇಲ್ಲಿನ ಜನತೆಗೂ ಹಾನಿಯೇ ಹೊರತು, ಬಹುಶಃ ಏನೂ ಸಾಧಿಸಿದಂತಾಗದು (ಏಕೆಂದರೆ ಪ್ರಾಕ್ಸಿ ಬಳಸಿ, ಅಥವಾ ಇನ್ನೊಬ್ಬರ ಕಂಪ್ಯೂಟರಿಗೆ ಲಾಗಿನ್ ಆಗಿ ಬ್ಲಾಗ್ ಸ್ಪಾಟ್ ಎಂದಿನಂತೆ ವೀಕ್ಷಿಸಬಹುದು).
ಹೆಚ್ಚಿನ ವಿವರ: [:http://in.rediff.com/news/2006/jul/17blog.htm|ರೀಡಿಫ್ ಲೇಖನದಲ್ಲಿ], [:http://yro.slashdot.org/yro/06/07/17/1732209.shtml|/. ಪುಟದಲ್ಲಿ].
(ಮುಂದುವರಿದುದು)
"ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು ಸ್ಥಾಪಿತವಾದವು. ಆಗ ಶಾಲೆಗಳಲ್ಲಿ ಮಹಾರಾಷ್ಟ್ರ ಭಾಷೆಯನ್ನೇ ಕಲಿಸುತ್ತಿದ್ದರು. ಸರಕಾರಿ ಕಾಗದಪತ್ರಗಳು ಸಹಿತ ಅದೇ ಭಾಷೆಯಲ್ಲಿ ಬರೆಯಲಾಗುತ್ತಿದ್ದವು. ಆದರೆ ೧೮೬೫ರಲ್ಲಿ ವಿದ್ಯಾಖಾತೆಯವರಿಗೆ ಕರ್ನಾಟಕದ ಭಾಷೆಯು ಕನ್ನಡವೆಂದು ತಿಳಿದುಬಂದಿತಂತೆ ! ಅಂದರೆ ಕರ್ಣಾಟಕದ ಭಾಷೆ ಕನ್ನಡವೆಂದು ತಿಳಿಯಲಿಕ್ಕೆ ಆಗಿನ ಸರಕಾರಕ್ಕೆ ಒಂಬತ್ತು ವರ್ಷಗಳೇ ಹಿಡಿದವು! ೧೮೬೫ರಲ್ಲಿ ವಿದ್ಯಾಧಿಕಾರಿಗಳಾಗಿದ ರಸೆಲ್ಲರವರು ಆ ವರ್ಷದ ತಮ್ಮ ವರದಿಯಲ್ಲಿ ಹೀಗೆ ಬರೆದಿದ್ದಾರೆ ;
(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.)
ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್ ಸ್ಟೇಷನ್ನಿನವರೆವಿಗೆ ಗಾಡಿ ಸರಿಯಾಗಿಯೇ ಚಲಿಸಿತು. ಮಹಾಲಕ್ಷ್ಮಿ ಸ್ಟೇಷನ್ನಿನ ಕಡೆಗೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆಯೇ ಟ್ರೈನ್ ನಿಂತಿತು.
ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ.
ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರೆಹಿಡಿಯುವುದೂ ಸಾಗರದ ಅಲೆಗಳೊಡನೆ ಸ್ಪರ್ಧಿಸುವೂದೂ ಒಂದೇ... ಆದರೇನು! ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥೈಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ನಮ್ಮ ಆತ್ಮಶಕ್ತಿಯೆ. ಧ್ಯಾನ ಮುದ್ರೆಯಲ್ಲಿ ಆತ್ಮವು, ಸಾಗರದಾಚೆ ಏನು ಇಡೀ ಬ್ರಹ್ಮಾಂಡವನ್ನೇ ಸುತ್ತಿಬರಬಲ್ಲದೆಂಬುದು ಸಿದ್ಧಿಪಡೆದವರಿಂದ ಅನುಭವವೇದ್ಯವೇ... ಈ ವಿಚಿತ್ರ ಪ್ರಪಂಚದಲ್ಲಿ ಒಬ್ಬ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದೆಂದರೆ, ಸಾಗರತಳದಲ್ಲೋ, ಹಿಮಾಲಯದಲ್ಲೆಲ್ಲೋ ತನ್ನ ಅಂತಾರಾತ್ಮನಿಗೆ ಸರಿಯೆನಿಸುವ ಮೌಲ್ಯಗಳನ್ನು ಹೆಕ್ಕಿತೆಗೆದಂತೆಯೆ, ಇಲ್ಲ ಹುಡುಕಿ ತೆಗೆದಂತೆಯೇ ಆದೀತು!... ಇತರರ ಅಂತರಾಳದಲ್ಲೇನಿದೆ? ಎಂಬುದನ್ನು ಅರಿಯಲು ಸಾಧ್ಯವಾದರೆ ಮನುಷ್ಯ ಮನುಷ್ಯನಾಗಿಯೆ ಇರುತ್ತಿರಲಿಲ್ಲ. ಅಷ್ಟಕ್ಕೂ, ಅಂತರಂಗ ತಿಳಿಸಿಕೊಡುವ ಮಾನವೀಯತೆನ್ನು ತಿರಸ್ಕರಿಸಿ ನಡೆದುಕೊಂಡರೆ ಅವನು ದಿಕ್ಕೆಟ್ಟು ಅಲೆಯುತ್ತಾ ಪಶುವಿಗೂ ಕಡೆಯಾಗುತ್ತಾನೆ.
*****
ಬರಹ
ಬರಹದಾ ಸರಮಾಲೆ
ಬರದಲ್ಲಿ ನಡೆದಿರಲು,
ಭಾವನೆಯ ರತ್ನಗಳ
ಬರಹದಾ ಬಂಗಾರ,
ಬರವಣಿಗೆ ಸಿಂಗಾರ
ಬೆರೆಸಿ ಪೊಣಿಸುತಿರುವ
ಅಕ್ಕಸಾಲಿಗ ನಾನು.//ಪ//.
ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ.
ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು.
ಪರಾಗ
ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವೆ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೇ?
ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ
ರಂದದೊಳಡಗಿಹುದು.
ಕವನಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು. ಬಾ ಭೃಂಗವೆ, ಬಾ...
ಈ ಕವಿತೆಯನ್ನು ನುಡಿಯುತ್ತಿರುವುದು ಒಂದು ಹೂ. ತನ್ನ ಕಂಪಿನ ಮೂಲಕ ದುಂಬಿಯನ್ನು ಬಾ ಎಂದು ಕರೆಯುತ್ತಿದೆ. ದುಂಬಿ ಬಂದೆರಗಿದರೆ ಮಾತ್ರವೇ ಮತ್ತೆ ಹೊಸ ಸೃಷ್ಟಿ ಎಂದು ಹೇಳುತ್ತಿದೆ. ಕೊನೆಯ ನಾಲ್ಕು ಸಾಲುಗಳನ್ನು ನೋಡಿ. ಕವನಕೋಶ ಎಂಬ ಮಾತಿದೆ. ಅದು ಮನಸ್ಸನ್ನು ಹಿಡಿದಾಗ ಇಡೀ ಪದ್ಯವೇ ಕವಿತೆಯು ಓದುಗರನ್ನು ಕುರಿತು ನೀಡುತ್ತಿರುವ ಕರೆಯೋಲೆ ಎಂದು ಹೊಳೆಯುತ್ತದೆ. ಕವಿತೆ ಹೂವು, ಓದುಗರು ದುಂಬಿಗಳು, ಓದುಗರಿಲ್ಲದೆ ಕವಿತೆ ಸ-ಫಲವಾಗುವುದೇ ಇಲ್ಲ. ಅಥವಾ, ಓದಿದಾಗ ಮಾತ್ರ ಕವಿತೆ ಸಂಭವಿಸುತ್ತದೆ.