ಮನೋರಮಾದಲ್ಲಿ ಕನ್ನಡದ ಸ್ಥಾನ

ಮನೋರಮಾದಲ್ಲಿ ಕನ್ನಡದ ಸ್ಥಾನ

ಬರಹ

ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ. ವರುಷಕ್ಕೊಮೆ ಪ್ರಕಟವಾಗುವಈ ಪುಸ್ತಕದಲ್ಲಿ ಭಾಷಾಅರಿವಿನ ವಿಭಾಗದಲ್ಲಿ, ಇಸ್ವಿ ೨೦೦೦ಕ್ಕಿಂತ ಮುಂಚಿನ ಸಂಚಿಕೆಗಳಲ್ಲಿ, ಕನ್ನಡಿಗರ ಸಂಖ್ಯೆ ಸುಮಾರು ೪೫ ಮಿಲಿಯನ್, ಹಾಗು ಕರ್ನಾಟಕದ ಜನಸಂಖ್ಯೆ ೫೦ ಮಿಲಿಯನ್. ಅದೇ ೨೦೦೦ ದ ನಂತರದ ಪ್ರಕಟಣೆಗಳಲ್ಲಿ(೨೦೦೦ ಡಾ.ರಾಜ್ ಅಪಹರಣದ ವರುಷ) ಕನ್ನಡಿಗರ ಸಂಖ್ಯೆ ಇದರ ಪ್ರಕಾರ ಕೇವಲ ೩೫ ಮಿಲಿಯನ್. ಹಾಗು ರಾಜ್ಯದ ಜನಸಂಖ್ಯೆ ೫೫ ಮಿಲಿಯನ್. ಜಗತ್ತಿನ ಜನಸಂಖ್ಯೆ ನಿರಂತರ ಏರುಗತಿಯಲ್ಲಿರುವಾಗ ಕನ್ನಡಿಗರ ಸಂಖ್ಯೆ ಹೇಗೆ ತಟ್ಟನೆ ೧೦ ಮಿಲಿಯ ಇಳಿಯಿತು? ಇದು ಕರ್ನಾಟಕದಲ್ಲಿ ಕನ್ನಡಿಗರನ್ನು ಮೂಲೆಗುಂಪು ಮಾಡುವ ಬೌದ್ಧಿಕ ಮಟ್ಟದ ಹುನ್ನಾರವಲ್ಲದೆ ಮತ್ತೇನು? ಇದು ಕನ್ನಡಿಗರ ಆತ್ಮವಿಶ್ವಾಸಕ್ಕೆ ಭಂಗ ತರುವ ಮತ್ತು ಕರ್ನಾಟಕವನ್ನು ಪರಕೀಯರಿಗೆ ಪ್ರಶಸ್ತಗೊಳಿಸುವ ಹುನ್ನಾರ. ಇಷ್ಟೇ ಅಲ್ಲಅ, ಕೇಂದ್ರದ ಸಿ.ಬಿ.ಎಸ್.ಸಿ ಪುಸ್ತಕಗಳಲ್ಲಿ ಕನ್ನಡದ ಹೆಮ್ಮೆಯ ಪ್ರತೀಕ ಚಾಲುಕ್ಯ ಸಾಮ್ರಾಜ್ಯದ ಬಗ್ಗೆ ಕಿಂಚಿತ್ತೂ ಕೊಟ್ಟಿಲ್ಲ. ಅವುಗಳಲ್ಲಿರುವುದು ಉತ್ತರ ಭಾರತೀಯ ಸಾಮ್ರಾಜ್ಯಗಳ ವಿಚಾರಗಳು ಮತ್ತು ತಮಿಳರ ಚೋಳ(ಹಾವು?),ಪಲ್ಲವರ ಬಗೆಗೆ ಮಾತ್ರ. ಉನ್ನತ ಬೌದ್ಧಿಕ ಮಟ್ಟದಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಕರ್ನಾಟಕದ ಪಠ್ಯಕ್ರಮವನ್ನು ಉನ್ನತ ಮಟ್ಟಕ್ಕೇರಿಸಬೇಕಿದೆ ಕೂಡ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet