ಮೂರು ದಿನ .

ಮೂರು ದಿನ .

ಜೀವನವಿರುವುದು ಮೂರು ದಿನ ;
ಆಗುವುದೊಂದು ಜನ್ಮದಿನ -
ಆಗುವುದೊಂದು ಮರಣ ದಿನ .
ಕಳೆಯುವುದೆಂತು ಉಳಿದೊಂದು ದಿನ ?

ಆ ಸುದಿನವ ನೀ ದುಡ್ಡಿನಂತೆ ವಿನಿಯೋಗಿಸು ;
ವಿದ್ಯೆ - ಕೆಲಸಕಾಗಿ ಅರ್ಧ ದಿನವ ನೀ ಉರಿಸು ,
ಸಂಸಾರ ಚೌಕಟ್ಟಿನೊಳಗೆ ಉಳಿದರ್ಧ ದಿನವ ಸಹಿಸು ,
ಸಾಯುವಾಗ ಮಾತ್ರ ದೇವರಿಗೆ ನಮಿಸು , ಅವಗೆ ಧ್ಯಾನಿಸು .

ಇದ್ದಾಗ ಬದುಕಿಗೆ ಗುರಿ ಇರಲಿಲ್ಲ ,
ಪರರಿಗೆ ಸಹಾಯವ ಎಂದೂ ನೀಡಲಿಲ್ಲ ;
ಪ್ರಾಣಿಗಿಂತ ಕೀಳುಮಟ್ಟಕ್ಕೆ ನೀನು ಸಾಗಿದೆ ,
ಬೆಲೆಯು ಕಟ್ಟಲಾಗದ ಸಮಯ ಹಾಳುಮಾಡಿದೆ .

ಆದ್ದರಿಂದ ಹೇಳುವುದು ತಮ್ಮ - ಬಡ ಬಗ್ಗರೆಲ್ಲರೂ ಕುಟುಂಬ ನಮ್ಮ .
ಸಹಾಯ ಅವರಿಗೆ ಸದಾ ಮಾಡುವೆ ,
ಪುಣ್ಯಗಳಿಂದ ನೀ ಕೂಡುವೆ .

ಜಿವನವಿರುವುದು ಮೂರು ದಿನ ;
ಆಗಲಿ ದಿನವೂ ಜನ್ಮದಿನ .

Rating
No votes yet