ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?

ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು.

ಯುಎಸ್‌ಬಿ ಬಗ್ಗೆ ನನ್ನ ಲೇಖನ

ಫೆಬ್ರವರಿ ೫ರ ಉಷಾಕಿರಣ ಪತ್ರಿಕೆಯಲ್ಲಿ ಯುಎಸ್‌ಬಿ ಸಾಧನಗಳ ಬಗ್ಗೆ ನಾನು ಬರೆದ ಲೇಖನ ಪ್ರಕಟವಾಗಿತ್ತು. ಅದನ್ನು ಈಗ ನಾನು [http://vishvakannada.com/node/189|ವಿಶ್ವಕನ್ನಡದಲ್ಲಿ] ಪ್ರಕಟಿಸಿದ್ದೇನೆ. ದಯವಿಟ್ಟು ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಲ್ಲೇ ಬರೆಯಬಹುದು, ನನಗೆ ಇ-ಮೈಲ್ ಮಾಡಬಹುದು ಅಥವಾ ವಿಶ್ವಕನ್ನಡದಲ್ಲೂ ನಿಮ್ಮ ಅಭಿಪ್ರಾಯ ಬರೆಯಬಹುದು.

ನೆಲದ ಮರೆಯ ನಿದಾನ-1

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್‌ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು ಇಷ್ಟಪಟ್ಟಿದ್ದರು. ಈಗಲೂ ನಾನೊಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದೇನೆ. ಎಲ್ಲರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.

ಕೈಗೆಟಕುತಿದೆ ರೈಲು

ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ
ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ.

ಒಂದು ಸಣ್ಣ ತಿದ್ದುಪಡಿ!

ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು ..

ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:

ಚಾಲುಕುಡಿ ಟ್ರೇನು

*********************************************************************
೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ ಸಿನಿಮಾ ಪತ್ರಕರ್ತರ ತಂಡ ಭೇಟಿ ಕೊಟ್ಟಿತ್ತು. ಹಾಗೆ ಚಾಲುಕುಡಿಗೆ ಹೋದ ಪತ್ರಕರ್ತರಲ್ಲಿ ನಾನೂ ಒಬ್ಬ. ಚಾಲುಕುಡಿಗೆ ಹೋಗಿದ್ದು ಬಸ್ಸಿನಲ್ಲಿ. ಮರಳಿ ಬೆಂಗಳೂರಿಗೆ ಬಂದಿದ್ದು ಟ್ರೇನಿನಲ್ಲಿ. ಸಂಜೆಯ ಹೊತ್ತು ಟ್ರೇನಿನಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ನೋಡಿದ್ದನ್ನು, ಅನುಭವಿಸಿದ್ದನ್ನು ಮತ್ತು ಕಲ್ಪಿಸಿಕೊಂಡಿದ್ದನ್ನು ಸೇರಿಸಿಕೊಂಡು ಬರೆದದ್ದು ಇದು. ನನ್ನ ಮಟ್ಟಿಗೆ ಇದೊಂದು ಸತ್ಯ ಕತೆ.

ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು

ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ;

ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'

ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .