ಪದಪರೀಕ್ಷಕದಲ್ಲಿ ಈಗ ೪೦೦೦೦ + ೭೦,೦೦೦ ಶಬ್ದಗಳು

ಪದಪರೀಕ್ಷಕದಲ್ಲಿ ಈಗ ೪೦೦೦೦ + ೭೦,೦೦೦ ಶಬ್ದಗಳು

ನಿಮಗೆಲ್ಲ ಗೊತ್ತಿರುವಂತೆ ನಾನು ಈಗ ಕನ್ನಡಸಾಹಿತ್ಯ ಡಾಟ್ ಕಾಂ ನಲ್ಲಿರುವ ಕನ್ನಡ ಲೇಖನಗಳನ್ನು ತಿದ್ದುತ್ತಿದ್ದೇನೆ. ಜತೆಗೆ ಅಲ್ಲಿ ದೊರೆತ ಸರಿಯಾದ/ಬಳಕೆಯಲ್ಲಿರುವ ಕನ್ನಡಪದಗಳನ್ನು ಶಬ್ದಕೋಶಕ್ಕೆ ಸೇರಿಸುತ್ತಿದ್ದೇನೆ. ಸಂಪದದಲ್ಲಿ ನನ್ನ ಭಾಗವಹಿಸುವಿಕೆ ಸ್ವಲ್ಪ ಕಡಿಮೆಯಾಗಿರುವದಕ್ಕೆ ಇದು ಒಂದು ಕಾರಣ.

ನುಡಿ ಸಾಫ್ಟ್‍ವೇರು ಸುಮಾರು ೪೦,೦೦೦ ಶಬ್ದಗಳ ಸಂಗ್ರಹವನ್ನು ಕೊಡುತ್ತದೆ . ಜತೆಗೆ ನಾವು ಇನ್ನೊಂದು ಶಬ್ದಕೋಶವನ್ನು ಉಪಯೋಗಿಸುವ ಸೌಲಭ್ಯವನ್ನು ಕೊಡುತ್ತದೆ. ಈ ಎರಡನೆ ಸಂಗ್ರಹಕ್ಕೇ ಈಗ ೭೦,೦೦೦ ಶಬ್ದಗಳು ಸೇರಿರುವದು.

ಕಂಪ್ಯೂಟರ್ ಇನ್ನೂ ಸೋತಿಲ್ಲ . ನಾನೂ ಆಷ್ಟೇ ಸೋತಿಲ್ಲ, ಬೇಸತ್ತಿಲ್ಲ. (ನಾನು ಸಾಮಾನ್ಯವಾಗಿ ಆರಂಭಶೂರ . ನೋಡೋಣ :) .

ಈ ಕೆಲಸದಲ್ಲಿ ನಾನು ಎದುರಿಸಿದ/ಎದುರಿಸುತ್ತಿರುವ ಸಮಸ್ಯೆಗಳು , ಸಂದಿಗ್ಧಗಳ ಕುರಿತು ಇನ್ನೊಮ್ಮೆ ಬರೆಯುವೆ. ಸದ್ಯಕ್ಕೆ ಸ್ವಲ್ಪದಿನ ರಜೆಯ ಮೇಲಿರುವೆ . ಹಾಗಾಗಿ ಸಂಪದದಲ್ಲಿ ೧೫ ದಿನಗಳ ನಂತರ ಸಿಗೋಣ.

Rating
No votes yet