ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾತಿನ ಹುರಿಗಾಳು, ಬೇಕಾದಷ್ಟು ಬಳಸಿ

ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್ಟು ಹುರಿಗಾಳು ಸಪ್ಲೈ ಮಾಡುತ್ತೇನೆ.

ಪತಂಜಲಿಯ ಯೋಗ ಅಂತಿಮ ಭಾಗ

ಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ.

ಹೆಚ್ ಆರ್ ಚಂದ್ರಶೇಖರರ ಕನ್ನಡ ಪುಟ

ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು [:http://www.missouri.edu/~physchan/kannada/kannada.html|ಸಂಗ್ರಹಗಳು ಓದಲು ಸಿಗುವುದು].

ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ

ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ [:http://bangla.name/citi/bhg/bhg-2-kan.htm|ಇಲ್ಲಿ ಓದಬಹುದು].

ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!

ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)

ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು.

ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ

ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎಂದ.

ಶ್ರೀನಿವಾಸ ಉಡುಪರ ಮಕ್ಕಳ ಕವನಗಳು

ಇಂದು ಏನೋ ಹುಡುಕುತ್ತಿರಲು [:http://www.makkalakavanagalu.esmartweb.com/index.html|ಈ ಪುಟ] ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ.

ಸುವಿಚಾರ

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು.

ವಿಚಿತ್ರವಾದರೂ ನಿಜ

ಇದೊಂದು ವಿಚಿತ್ರವಾದರೂ ಸತ್ಯವಾದ ಸಂಗತಿ. ನನ್ನ ಅನುಭವ.
ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರ್‍ಏಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ್ಗೆಯ ೮.೧೫ಕ್ಕೆ. ಸಾಮಾನ್ಯವಾಗಿ ನಾನು ೮.೧೦ಕ್ಕೆ ಅಲ್ಲಿಯ ಕ್ಯೂನಲ್ಲಿ ನಿಲ್ಲುವೆ. ನಾನು ಹೋಗಿ ನಿಲ್ಲುವ ವೇಳೆಗೆ ಸರಿಯಾಗಿ ಒಂದು ನಾಯಿ ಎಲ್ಲಿಂದಲೋ ಬಂದು ನನ್ನ ಮುಂದೆ ಮಲಗಿಕೊಳ್ಳುವುದು. ನಾನು ಇಲ್ಲಿಯವರೆವಿಗೂ ಇದನ್ನು ಗಮನಿಸಿರಲಿಲ್ಲ.