ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತದ ಬಡವರ ಮೇಲೆ ಹೊಸ ಔಷಧಗಳ ಪ್ರಯೋಗ

[:http://wired.com/|ಅಮೇರಿಕದ ವೈರ್ಡ್ ಮ್ಯಾಗಜೀನ್] ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ಖರ್ಚು ಕಡಿಮೆಯಾಗುವುದರಿಂದ ಈಗ "clinical trials" ಭಾರತಕ್ಕೆ ಔಟ್ ಸೌರ್ಸ್ ಆಗುತ್ತಿದೆಯಂತೆ. ಭಾರತದಲ್ಲಿ ಅವರಿಗೆ ಕಡಿಮೆ ಖರ್ಚಿಗೆ ಔಷಧವನ್ನು ಬಳಸುವ "ರೋಗಿಗಳು" ಸಿಗುತ್ತಾರಲ್ಲದೆ, ಇಲ್ಲಿನ ಸರಕಾರ ಅಮೇರಿಕ ಅಥವಾ ಯೂರೋಪ್ ದೇಶಗಳಂತೆ ಪ್ರಯೋಗಗಳ ನಿರ್ದಿಷ್ಟಮಾನ ಗೊತ್ತುಪಡಿಸಿ ಶಿಸ್ತು ರೂಪಿಸಿಲ್ಲದಿರುವುದರಿಂದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಲ್ಲಿ ಸುಗ್ಗಿಯಂತೆ!

ಸುಭಾಷಿತ

ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾ

ಸುಭಾಷಿತ

ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬ

ಸುಭಾಷಿತ

ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ

ಈ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ನಂಬಿದ್ದೇನೆ. ಇಲ್ಲಿ ನಾನು ಮಂಡಿಸುತ್ತಿರುವ ವಾದ ಇದು-ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬುದು ನಮ್ಮ ಮನಸ್ಸು, ಮನೋಧರ್ಮ ಮತ್ತು ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ ಸಂಗತಿಯೇ ಹೊರತು ಭಾಷೆಗೆ ಸಂಬಂಧಿಸಿದ ಸಂಗತಿಯಲ್ಲವೇ ಅಲ್ಲ, ವಿರುದ್ಧಾರ್ಥ ಮತ್ತು ಸಮಾನಾರ್ಥ ಪದಗಳು ಎಂದು ಚಿಕ್ಕಂದಿನಲ್ಲೇ ಮಕ್ಕಳಿಗೆ ಕಲಿಸುವ ಮೂಲಕ ಅವರ ಮನಸ್ಸನ್ನು ಕುಬ್ಜ ಮತ್ತು ಪರಿಮಿತಗೊಳಿಸುತ್ತಿದ್ದೇವೆ. ಭಾಷೆಗೂ ತಾತ್ವಿಕತೆಗೂ ಇರುವ ಸಂಬಂಧವನ್ನು ಗಂಭೀರವಾಗಿ ಚಿಂತಿಸದಿದ್ದರೆ ನಮ್ಮ ತಲೆಮಾರಿನ ಮತ್ತು ಹಿರಿಯ ತಲೆಮಾರಿನ ಜನ ಮಾಡಿದ ತಪ್ಪುಗಳನ್ನೇ ಮುಂದಿನ ಮಕ್ಕಳೂ ಮಾಡಿಯಾರು! ವ್ಯಾಕರಣವೆಂಬುದು ಭಾಷೆಯೊಂದರ ಲಕ್ಷಣಗಳನ್ನು ಖಚಿತವಾಗಿ ವಿವರಿಸುವ ಶಾಸ್ತ್ರ.

ಕೊನೆಗೂ (ಲಿನಕ್ಸಿನ) Firefox 1.5ನಲ್ಲಿ ಕನ್ನಡ ಬಂತು ನೋಡ್ರೀಪ್ಪ!

Upgrade to Firefox 1.5!

ಮೊನ್ನೆ ಮೊನ್ನೆ ಹೊಸ ಫೈರ್ ಫಾಕ್ಸ್ ಹೊರಬಂದದ್ದೇ ತಡ, ಹೊಸತಾದ ಯರ್ರಾಭಿರ್ರೀ ಫಾಸ್ಟ್ ಇರೋ ಫೈರ್ ಫಾಕ್ಸ್ ನೋಡಿ ಒಂದೆಡೆ ಖುಷಿಯಾದ್ರೆ, ಪ್ಯಾಂಗೋ ಎನೇಬಲ್ ಈ ಸಲಾನೂ ಮಾಡ್ಲಿಲ್ವಲ್ಲ ಅನ್ನೋ ಬೇಜಾರು ಇನ್ನೊಂದೆಡೆ. ಪ್ಯಾಂಗೋ ಎನೇಬಲ್ ಮಾಡಿದ ಫೈರ್ ಫಾಕ್ಸ್ ಮಾತ್ರ ಕನ್ನಡವನ್ನ ಸರಿಯಾಗಿ ತೋರಿಸತ್ತೆ! ಮಾಮೂಲಿನಂತೆ  ಉಬುಂಟು, ಫೆಡೋರಾ, ಮ್ಯಾಂಡ್ರಿವ ಇವುಗಳೊಡನೆ ಬರುವ ಫೈರ್ ಫಾಕ್ಸಿನಲ್ಲಿ ಪ್ಯಾಂಗೋ ಎನೇಬಲ್ ಆಗಿಯೇ ಬರತ್ತೆ... ಆದರೆ ಅವುಗಳನ್ನ ನೋಡಿಕೊಳ್ಳೋರು ತಮ್ಮ ತಮ್ಮ ವಿತರಣೆಗಳಲ್ಲಿ ಹೊಸ ಫೈರ್ ಫಾಕ್ಸ್ ಹಾಕುವವರೆಗೂ ಕಾಯಬೇಕಲ್ಲ! ಒಳ್ಳೆಯ ತ್ರಿಶಂಖು ಸ್ಥಿತಿಯಾಗಿ ಹೋಗಿತ್ತು. ಸರಿ, ಮಾಮೂಲಿನಂತೆ ತೆಲುಗು l10n ತಂಡದ ಸ್ನೇಹಿತನೊಬ್ಬ ಎಂದಿನಂತೆ ಫೈರ್ ಫಾಕ್ಸ್ ನ ಹೊಸ ಆವೃತ್ತಿಯನ್ನ ಪ್ಯಾಂಗೋ ಜೊತೆಗೆ ಕಂಪೈಲ್ ಮಾಡಿ ಎಲ್ಲರಿಗೂ ಕೊಡುತ್ತಾನೆಂದು ಕಾದು ಕುಳಿತೆ. ಅದೂ ಆಗಲೇ ಇಲ್ಲ... ಅವ ತನ್ನ ಊರಿಗೆ ಹೋಗಿ ಕುಳಿತುಬಿಟ್ಟಿದ್ದ.