ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕಿಂದು ಬೇಕಾಗಿರುವುದು...

'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ!

ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್ಸಿನಲ್ಲಿದ್ದದ್ದನ್ನೇ endorse ಮಾಡುವ ಹಾಗೆ [:http://deccanherald.com/deccanherald/dec52005/panorama1734232005124.asp|ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಮೂಡಿಬಂದ ಲೇಖನದಲ್ಲಿ ಲೇಖಕರೊಬ್ಬರು ಬರೆದದ್ದು].

ಇಂದು ಕನ್ನಡಕ್ಕೆ "ಹೋರಾಟ" ಬೇಕಾಗಿದೆ ಎಂದು ಹೇಳುವವರು 'ರಾಜಕೀಯ' ಪ್ರೇರಿತರೆ... ಅಥವಾ ಕನ್ನಡವನ್ನು ಮೂಲವಾಗಿಸಿಟ್ಟುಕೊಂಡು ಒಂದಲ್ಲ ಒಂದು ರೀತಿಯ ಸ್ವಾರ್ಥವನ್ನು ಬಯಸುವವರು ಎಂದು ಹೇಳಿದರೆ ತಪ್ಪಾಗದು. ಕನ್ನಡ ಬಳಸದ, ಕನ್ನಡ ಪುಸ್ತಕಗಳನ್ನೋದದ, ಕನ್ನಡ ಪತ್ರಿಕೆಗಳನ್ನೋದದ ಹಲವರು 'ಕನ್ನಡಿಗರು' ಹೋರಾಟ ನಡೆಸಲು ಮಾತ್ರ 'ನಾ ಮುಂದು ತಾ ಮುಂದು' ಅನ್ನುತ್ತಾ ಇರೋದು ವಿಡಂಬನೆಯಲ್ವೆ?

ಆಧುನಿಕ ಸಂತೆ ಸಿಂಗಪುರ

ಮೂರು ದಿನ, ಕೇವಲ ಮೂರೇ ಮೂರು ದಿನ ಒಂದು ಊರು, ಊರಲ್ಲ, ಉರೇ ದೇಶವಾಗಿರುವ ಊರು ನೋಡಿ ಬಂದು ಅದರ ಬಗ್ಗೆ ಬರೆಯುವುದು ಉದ್ಧಟತನ. ನಿಜ. ಆದರೆ ಆ ಮೂರು ದಿನಗಳ ಹಿಂದೆ ನನ್ನ ಐವತ್ತೆರಡು ವರ್ಷಗಳಿವೆ. ಆ ವರ್ಷಗಳು ತಿದ್ದಿ ರೂಪಿಸಿರುವ ಮನಸ್ಸು ಇದೆ. ಆದ್ದರಿಂದಲೇ ಸಿಂಗಪುರ ಎಂಬ ನಗರ ರಾಷ್ಟ್ರ ನನ್ನಲ್ಲಿ ಪ್ರೇರಿಸಿದ ಸಂಗತಿಗಳನ್ನು , ನೀವೂ ನನ್ನಂಥವರೇ ಎಂದು ನಂಬಿ, ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ನೆನಪು

ಮನದ ಕೊಳದಲ್ಲಿ,ತಿಳಿನೀರ ಶಾಂತತೆಯಿಂದ
ನೆನಪಿನ ತಾವರೆಯೊಂದರಳಿ ಪದ್ಯವಾಯಿತಂದು
ಚೆಲ್ಲಿತು ಆನಂದದ ಕಂಪನ್ನು ಕೊಳದಲ್ಲೆಲ್ಲಾ

ಕನ್ನಡದ ಕೊಲೆ

ನಾನು ದಿನ ಮನೆಯಿಂದ ಬರುವಾಗ ಕೃಷ್ಣರಾಜಪುರದ ತೂಗು ಸೇತುವೆಯ ಮೇಲೆ ಬರುತ್ತೇನೆ. ಅಲ್ಲಿರುವ ಫಲಕಗಳಲ್ಲಿ ಕರ್ನಾಟಕದ ಬಗ್ಗೆ ವಿವರಗಳನ್ನು ಕೊಟ್ಟಿದ್ದಾರೆ.

ಎಸ್ಸೆಮ್ಮೆಸ್ಸಿಗೆ ದಾರಿ ಬಿಡು....(ಲಘು ಬರಹ)

ದಾರಿ ಬಿಡು, ದಾರಿ ಬಿಡು...
ಬೆಳ್ಳಂ ಬೆಳಿಗ್ಗೆ ದಾರಿ ಬಿಡು
ಎಸ್ಸೆಂಸ್ಸಿಗೆ ದಾರಿ ಬಿಡು
ಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡು
ಹೊಸದಕ್ಕೆ ನೀ ದಾರಿ ಬಿಡು
ಮನಸ್ಸಲ್ಲೊಂದಿಷ್ಟು ನಕ್ಕು ಬಿಡು

ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲು ಕುಂಯ್‌ಗುಟ್ಟತೊಡಗುತ್ತದೆ. ಹಾಸಿಗೆಯಿಂದೇಳುತ್ತಾ ಕಣ್ಣೊರೆಸಿಕೊಂಡು ಬಾಯಾಕಳಿಸುತ್ತಾ ಮೊಬೈಲು ಗುಂಡಿ ಒತ್ತಲು ರೆಡಿ. ಅಲ್ಲಿ ನೋಡಿದರೆ ಹತ್ತಿಪ್ಪತ್ತು ಗುಡ್ ಮಾರ್ನಿಂಗ್ ಮೆಸ್ಸೇಜುಗಳು.. ಅದಕ್ಕೊಂದು `ಕೋಟ್' ಅಟ್ಯಾಚ್ ಆಗಿರುತ್ತದೆ. ಕೆಲವೊಂದು ಗಂಭೀರವಾಗಿದ್ದರೆ ಕೆಲವೊಂದು ಕಚಗುಳಿಯಿಡುತ್ತವೆ. ಒಂದೊಂದನ್ನೇ ಓದುತ್ತಾ ಕೆಲವು ರಿಪೀಟ್ ಆಗಿರುವುದನ್ನು ಡಿಲೀಟ್ ಮಾಡುತ್ತಾ ಮುಂದಿನದನ್ನು ಓದುವುದರಲ್ಲಿ ಮಗ್ನ.. ಡಿಲೀಟ್ ಮಾಡಿದಷ್ಟೂ ಇನ್ನೂ ತುಂಬುವ ಬುತ್ತಿ ಈ ಇನ್‌ಬಾಕ್ಸ್.

"ಜಾರ್ಜ್ ಬುಷ್
ಅಬ್ದುಲ್ ಕಲಾಮ್
ಅಮಿತಾಬ್ ಬಚ್ಚನ್
ಸಚಿನ್ ತೆಂಡೂಲ್ಕರ್ ಹಾಗೂ ನಾನು.....
ಈ ಎಲ್ಲಾ ವಿ. ಐ. ಪಿ ಗಳಿಂದ ನಿನಗೆ ಗುಡ್ ಮಾರ್ನಿಂಗು..."

ಧೂಮಪಾನದಲ್ಲಿ ಸಂಪ್ರದಾಯ?

ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ ಅಲಿಖಿತ ಕಟ್ಟಳೆಗಳ ಬಗ್ಗೆ ಆಸಕ್ತಿ ಉಂಟಾಯಿತು. ಇವು ಸಹ ಒಂದು ಬಗೆಯ ಮೂಢನಂಬಿಕೆಗಳೇ ಅನ್ನಿ. ಹಾಗೇ ಹುಡುಕುತ್ತಾ ಹೋದಂತೆ ಇವುಗಳ ಹಿಂದಿನ ಕಾರಣಗಳೂ ತಿಳಿದವು. ಅವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಪುಸ್ತಕಗಳು

ಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ.

ಪರಿವರ್ತನೆ

ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ. ನನ್ನಂತಹ ಹವ್ಯಾಸಿ ಓದುಗನಿಗೆ ಇದು ಅರ್ಥವಾಗುವುದಿಲ್ಲವೇನೋ.ಅಂತೆಯೇ ಕೆಲವರಿಗೆ ಬದುಕಿನ ದಿನನಿತ್ಯದ ಘಟನೆ ಎಷ್ಟೇ ಸಣ್ಣದಿರಲಿ ,ಮನಸ್ಸಿನಲ್ಲೇ ನಿಂತುಬಿಟ್ಟು, ಅದನ್ನು ಯಾರಿಗಾದರೂ ವಿವರಿಸಿದ ನಂತರವೇ ಆ ವಿಚಾರ ಚಿಂತನಾಲಹರಿಯಲ್ಲಿ ಹಿಂದೆ ಸರಿಯತ್ತದೆ.

'ಸಂಪದ' ಇಂದು ಸ್ವಲ್ಪ ಹೊತ್ತು ಲಭ್ಯವಿರುವುದಿಲ್ಲ...

ಡೇಟಬೇಸ್ maintenance ಗಾಗಿ ಒಂದಷ್ಟು ಕೆಲಸ ನಡೆಯುತ್ತಿರುವುದರಿಂದ ಇವತ್ತು ಮಧ್ಯಾಹ್ನ (ಭಾರತದ ಸಮಯದಂತೆ) ಸ್ವಲ್ಪ ಹೊತ್ತು (೧೦ರಿಂದ ೩೦ ನಿಮಿಷ) 'ಸಂಪದ' ಲಭ್ಯವಿರುವುದಿಲ್ಲ.