ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೪೦) - ಬೈಗುಳ

ಇವತ್ತು ಅಪ್ಪನ ಸ್ವರ ತುಂಬಾ ಜೋರಾಗಿತ್ತು.ಆ ಬೆಕ್ಕು‌ನನ್ನ ಕೈಗೆ  ಸಿಗಬೇಕು. ಇರೋದಿಷ್ಟುದ್ದ. ಅದಕ್ಕೆ ಮರ ಹತ್ತೋಕೆ ಬರೋದಿಲ್ಲ ಅಂತ ಗೊತ್ತಿದ್ರೂ ಕೂಡ ಮರವನ್ನ ಕಷ್ಟಪಟ್ಟು ಹತ್ತಿದೆ. ಆಮೇಲೆ ಅದಾಗದೇ ಇಳಿಬೇಕು ತಾನೆ. ಅದು ಬಿಟ್ಟು ಮರದ ಮೇಲೆ ಕುಳಿತುಕೊಂಡು ಊರಲ್ಲಿ ಹೋಗೋ ಬರೋರ್ನೆಲ್ಲ ಕರೀತಾ ಕುಳಿತರೆ ನಾನು ಮಾಡುವುದೇನನ್ನ .

Image

ಮಹಾ ಕುಂಭಮೇಳ

ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು 
ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು 
ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು   
ಮಂಥನ ಕಾಲದ ಅಮರತ್ವದ ಅಮೃತ ಹನಿಗಳು 

ಮಹಾ ಕುಂಭಮೇಳ ಇದು ಮಹಾ ಪರ್ವಕಾಲ 
ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ 
ಗಂಗಾ ಯಮುನಾ ಸರಸ್ವತಿ ಪುಣ್ಯ ನದಿಗಳಲ್ಲಿ 
ಮುಳುಗಿ ಏಳುತ್ತಾ ಪುಣ್ಯಸ್ನಾನ ಸಂಗಮದಲ್ಲಿ 

ಜನ್ಮಶುದ್ಧಿ ಆತ್ಮಶುದ್ಧಿಗಾಗಿ ಈ ಭೂಲೋಕದಲ್ಲಿ
ಕರುಣಿಸಿದ ದೇವರು ಅವಕಾಶ ಮಾನವನಿಗಿಲ್ಲಿ 
ಸಾಧು ಸಂತರು ತಪೋಶ್ರೇಷ್ಠರ ದರ್ಶನ ಭಾಗ್ಯದಲ್ಲಿ
ತೊಳೆಯುತ ಎಲ್ಲ ಪಾಪಗಳ ಜನ್ಮವು ಪಾವನವಿಲ್ಲಿ     

ನಮ್ಮೂರಿನ ಕಾಡುಕೋಳಿ - ಚಿಟ್ಟು ಕೋಳಿ

ಪ್ರತಿದಿನ ಸಂಜೆ ಒಂದಿಷ್ಟು ದೂರ ನಡೆಯೋದು ಅಂದರೆ ವಾಕಿಂಗ್‌ ಮಾಡೋದು ನನ್ನ ಬಹಳ ಇಷ್ಟದ ಕೆಲಸ. ಮನೆಯಿಂದ ಒಂದೆರಡು ಕೆಲೋಮೀಟರ್‌ ದೂರ ನಡೆದು ನಂತರ ಅದೇದಾರಿಯಲ್ಲಿ ಅಥವಾ ಬೇರೆದಾರಿಯಾಗಿ ಮನೆಗೆ ಹಿಂದೆ ಬರುವುದು ನನ್ನ ರೂಢಿ. ನಮ್ಮ ಮನೆಯಿಂದ ಮುಖ್ಯ ರಸ್ತೆಗೆ ಬರುವಷ್ಟು ದೂರ ಗೇರಿನ ಮರಗಳು ಇರುವ ತೋಟ ಇದೆ. ಜೊತೆಗೆ ಸ್ವಲ್ಪ ಮರಗಳು ಕೂಡಾ ಇವೆ. ಅಂಕುಡೊಂಕು ದಾರಿ ಮುಗಿಸಿ.

Image

ರುದ್ರರಮಣೀಯ ಜಲಪಾತಗಳ ತವರೂರು - ಶಿವನ ಸಮುದ್ರ

ಹೆಬ್ಬಂಡೆಗಳನ್ನು ಬಳಸಿ, ಮರಗಳನ್ನು ಆಲಂಗಿಸಿಕೊಂಡು ಕಾವೇರಿ ರಭಸದಿಂದ ಇಳಿಯುತ್ತಿದ್ದಾಳೆ ಶಿವನಸಮುದ್ರದಲ್ಲಿ. ಕಾವೇರಿ ಮತ್ತು ಅವಳ ಸೋದರಿಯರು ಒಡಲನ್ನು ವರುಣ ಭರ್ತಿ ಮಾಡಿದ್ದಾನೆ.

Image

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 3)

1925ರಲ್ಲಿ ’ವಸಂತ’ ಪತ್ರಿಕೆಯಲ್ಲಿ ಪ್ರಕಟಗೊಂಡ, ಕ್ರೌನ್‌ ಚತುರ್ಥ ಆಕಾರದ 49 ಪುಟಗಳ ಕಾರಂತರ ಸಾಮಾಜಿಕ ಕಾದಂಬರಿಯೇ ’ನಿರ್ಭಾಗ್ಯ ಜನ್ಮ’ದ ಬಗ್ಗೆ ಪ್ರಸ್ತಾಪಿಸುವ ಮಾಲಿನಿ ಮಲ್ಯ ಅವರು 1925ರಲ್ಲಿ ಪ್ರಕಟವಾದ `ಭೂತ’ವೂ ಪತ್ತೇದಾರಿ ಕಾದಂಬರಿಯೇ.

Image

ಸಾಧಕರ 8 ವಿಶೇಷ ಗುಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸುಂದರ್ ಬಾಬು
ಪ್ರಕಾಶಕರು
ಸಾವಣ್ಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ : ೨೦೨೫

“ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಕೃತಿಯ ಲೇಖಕರಾದ ರಾಮಸ್ವಾಮಿ ಹುಲಕೋಡು.

ಸನಾತನ ಮತ್ತು ವಚನ ಸಂಸ್ಕೃತಿ

ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೩೯) - ಭೂಮಿ

ಆರೋಗ್ಯ ಕೆಡುತ್ತಿದೆ. ಯಾರಾದರೂ ಮದ್ದು ನೀಡುವವರಿದ್ದೀರಾ? ಇದು ಕೆಲವು ದಿನಗಳಿಂದ ಆರಂಭವಾದ ಕಾಯಿಲೆಯಲ್ಲ. ಹಲವು ಸಮಯದ ಹಿಂದಿನಿಂದ ನನ್ನ ದೇಹದ ಒಳಗೆ ವಿಷಗಳನ್ನು ಹಾಕಿ ಹಾಕಿ ಇಂದಿಗೆ ನಾನು ಬದುಕುವುದಕ್ಕೆ ಸಾಧ್ಯವಿಲ್ಲದ ಕೊನೆಯ ಸ್ಥಿತಿಗೆ ಬಂದು ತಲುಪಿಸಿಬಿಟ್ಟಿದ್ದಾರೆ. ನನ್ನ ಜೊತೆಗೆ ನಿಂತಿರುವ ಇನ್ನೂ ಕೆಲವರ ಆರೋಗ್ಯವು ಹದಗೆಡುತ್ತಿದೆ.

Image