ಸ್ಟೇಟಸ್ ಕತೆಗಳು (ಭಾಗ ೧೨೩೯) - ಭೂಮಿ

ಸ್ಟೇಟಸ್ ಕತೆಗಳು (ಭಾಗ ೧೨೩೯) - ಭೂಮಿ

ಆರೋಗ್ಯ ಕೆಡುತ್ತಿದೆ. ಯಾರಾದರೂ ಮದ್ದು ನೀಡುವವರಿದ್ದೀರಾ? ಇದು ಕೆಲವು ದಿನಗಳಿಂದ ಆರಂಭವಾದ ಕಾಯಿಲೆಯಲ್ಲ. ಹಲವು ಸಮಯದ ಹಿಂದಿನಿಂದ ನನ್ನ ದೇಹದ ಒಳಗೆ ವಿಷಗಳನ್ನು ಹಾಕಿ ಹಾಕಿ ಇಂದಿಗೆ ನಾನು ಬದುಕುವುದಕ್ಕೆ ಸಾಧ್ಯವಿಲ್ಲದ ಕೊನೆಯ ಸ್ಥಿತಿಗೆ ಬಂದು ತಲುಪಿಸಿಬಿಟ್ಟಿದ್ದಾರೆ. ನನ್ನ ಜೊತೆಗೆ ನಿಂತಿರುವ ಇನ್ನೂ ಕೆಲವರ ಆರೋಗ್ಯವು ಹದಗೆಡುತ್ತಿದೆ. ಇದರಿಂದ ನಾನು ಕೊನೆಯ ಉಸಿರು ಎಳೆಯಬಹುದು. ಆದರೆ ನನ್ನನ್ನು ನಂಬಿಕೊಂಡಿರುವ ದೊಡ್ಡ ಪರಿವಾರ ಅನಾಥವಾಗುತ್ತದೆ, ಉಸಿರು ಕಟ್ಟಿ ಸಾಯುತ್ತದೆ. ಇದು ಬದಲಾಗಬೇಕಾದರೆ ನಾನು ಆರೋಗ್ಯವನ್ನು ಮತ್ತೆ ಧರಿಸಿ ನಿಲ್ಲಬೇಕು. ನನ್ನ ಆರೋಗ್ಯವನ್ನು ಧರಿಸುವುದು ನನ್ನ ಕೈಯಲ್ಲಿಲ್ಲ. ನನ್ನನ್ನು ನಂಬಿರುವವರಿದ್ದಾರಲ್ಲ ಅವರು ನನ್ನ ಆರೋಗ್ಯವನ್ನು ಉಳಿಸುವ ಕೆಲಸ ಮಾಡಬೇಕು. ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ ನನ್ನ ಆರೋಗ್ಯವನ್ನು ಉಳಿಸುವುದರ ಕಡೆಗೆ ಒಂದಷ್ಟು ಗಮನ ನೀಡಿ. ನೀವು ಓಡುವ ವೇಗಕ್ಕೆ ನಾನು ಕಾಣದೆ ಹೋಗಬಹುದು ಆದರೆ ನನ್ನ ಆರೋಗ್ಯ ಹದಗೆಟ್ಟರೆ ಮುಂದೊಂದು ದಿನ ನೀವು ಕಾಣೆಯಾಗಬಹುದು ಎಚ್ಚರವಿರಲಿ. ಭೂಮಿ ಎಚ್ಚರಿಕೆ ಸಂದೇಶವನ್ನು ನನ್ನೊಳಗೆ ಆ ಕ್ಷಣ  ದಾಟಿಸಿದಂತೆ ಅನಿಸಿತು. ಅದಕ್ಕಾಗಿ ಈ ಕ್ಷಣದಲ್ಲಿ ನಿಮಗೂ ದಾಟಿಸಿಬಿಟ್ಟೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ