ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೃಗ್ಗೋಚರ ಬೆಳಕು

ಮೊನ್ನೆ ವಿದ್ಯುತ್ಕಾಂತೀಯ ವಿಕಿರಣದ ಕೊನೆಯ ಮತ್ತು ದುರ್ಬಲ ಸದಸ್ಯನಾದ ರೇಡಿಯೋ ಅಲೆಗಳನ್ನು ಮುಗಿಸುತ್ತಾ ಒಂದು ಪ್ರಶ್ನೆ ಕೇಳಿದ್ದೆ. ಇನ್ನು ಯಾರಾದರೂ ಬಿಟ್ಟು ಹೋಗಿದ್ದಾರೆಯೇ ಎಂದು. ನಮ್ಮ ನಡುವೆ ಗುಂಪಿನಲ್ಲಿ ಸಂವಹನಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಬಹುಶ ಕೆಲವರನ್ನುಳಿದು ಅನೇಕರು ಉತ್ತರಿಸಿಲ್ಲ. ಹೌದು ನಾನು ನಮ್ಮ ಚರ್ಚೆಯ ವಿಷಯವನ್ನು ಬಿಟ್ಟು ಉಳಿದೆಲ್ಲ ಪೂರಕ ಅಂಶಗಳ ಬಗ್ಗೆ ಚರ್ಚಿಸಿದೆವು.

Image

ಪಪ್ಪಾಯಿ ಹಣ್ಣಿನ ರೋಗಗಳು ಮತ್ತು ಹತೋಟಿ ಕ್ರಮಗಳು (ಭಾಗ ೧)

ಪಪ್ಪಾಯಿ ಅಥವಾ ಪಪಾಯ ಉಷ್ಣವಲಯದ ಶೀಘ್ರ ಫಲ ಕೊಡುವ ಪ್ರಮುಖ ಹಣ್ಣಿನ ಬೆಳೆ. ಈ ಹಣ್ಣು ದೇಹ ಪೋಷಣೆಗೆ ಬೇಕಾದ " ಎ" ಮತ್ತು "ಸಿ" ಜೀವಸತ್ವಗಳಿಂದ ಸಂಪದ್ಬರಿತವಾಗಿದೆ. ತಾಜಾ ಹಣ್ಣಿಗಾಗಿ ಹಾಗೂ ಕಾಯಿಗಳಿಂದ ಪಡೆದ “ಪೆಪೈನ” ಪುಡಿಗಾಗಿ ಇದಕ್ಕೆ ಅಪಾರ ಆರ್ಥಿಕ ಮಹತ್ವ ದೊರಕಿದೆ.

Image

ಭಾರತ ಸಂವಿಧಾನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪಿ.ಅನಂತಕೃಷ್ಣ ಭಟ್
ಪ್ರಕಾಶಕರು
ಡಾ. ಪಿ.ಅನಂತ ಕೃಷ್ಣ ಭಟ್, ದ್ವಾರಕ, ಕೊಡಿಯಾಲ್ ಬೈಲ್, ಮಂಗಳೂರು.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಸ್ವಾತಂತ್ರ್ಯೋತ್ತರ ಅಮೃತ ವರ್ಷದ ಸಂದರ್ಭದಲ್ಲಿ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪಿ.ಅನಂತಕೃಷ್ಣ ಭಟ್ ಇವರು ಬರೆದ ‘ಭಾರತ ಸಂವಿಧಾನ’ -ಒಂದು ಸುಂದರ ಪಕ್ಷಿ ನೋಟ ಸಂವಿಧಾನದ ಕುರಿತಾದ ಕುತೂಹಲಕರವಾದ ಮಾಹಿತಿ ನೀಡುತ್ತದೆ. ವಿಶ್ವದ ಸುದೀರ್ಘ ಸಂವಿಧಾನ ಎಂಬ ಹೆಗ್ಗಳಿಕೆಯ ರಾಜ್ಯಾಂಗ ಘಟನೆ ನಮ್ಮದು.

ಅಸಹ್ಯ ಮಟ್ಟ ತಲುಪಿದ ಕರ್ನಾಟಕ ರಾಜಕೀಯ ಪಕ್ಷಗಳ ಭಿನ್ನಮತ

ಭಾಷೆ ಎಂಬ ಭಾವ ಕಡಲಿಗೆ ಮತ್ತು ರಾಜಕೀಯ ಎಂಬ  ಸೇವಾ ಮನೋಭಾವದ ಪಾವಿತ್ರ್ಯಕ್ಕೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ತಮ್ಮ ನಾಲಿಗೆಯ ಮೂಲಕ ಮತ್ತು ತಮ್ಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು, ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ  ಕೆಲವು ರಾಜಕೀಯ ನಾಯಕರು, ಅವರ

Image

ಸ್ಟೇಟಸ್ ಕತೆಗಳು (ಭಾಗ ೧೨೪೨) - ಗಂಟು

ಅಮ್ಮನಿಗೆ ಪ್ರತಿಸಲವೂ ಹೇಳ್ತಾ ಇದ್ದೆ, ಸುಮ್ಮನೆ ಸಿಕ್ಕಿದನ್ನೆಲ್ಲ ಗಂಟು ಕಟ್ಟಿ ಅದ್ಯಾಕೆ ಅಟ್ಟದ ಮೇಲೆ ಇಡ್ತಿಯಾ ಅದರಿಂದ ಏನು ಉಪಯೋಗ ಇಲ್ಲ ಅದನ್ನು ಬಿಸಾಡಿ ಬಿಟ್ರೆ ಮನೆ ಸ್ವಚ್ಛವಾಗಿರುತ್ತೆ ಅಂತ. ಅಮ್ಮ ನನ್ನನ್ನು ನೋಡಿ ನಕ್ಕು ಮತ್ತೆ ಕೆಲಸವನ್ನು ಮುಂದುವರಿಸಿದರು. ಕಾಲಗಳು ತುಂಬಾ ದಾಟಿ ಬಂದು ಒಂದಷ್ಟು ಹೊಸ ನೀರು ಹೊಟ್ಟೆಗೂ ಇಳಿದು ದೇಹವನ್ನು ಸವರಿಕೊಂಡು ಹೋಯಿತು.

Image

ದೀವಿ ಹಲಸಿನ ವಡೆ

Image

೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ.

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅಕ್ಕಿ ೧/೨ ಕೆ.ಜಿ., ದೀವಿ ಹಲಸಿನ ಹೋಳು ೩ ಕಪ್, ಜೀರಿಗೆ ೧ ಚಮಚ, ಕುಂಟೆ ಮೆಣಸು ೪-೫, ಉಪ್ಪು ರುಚಿಗೆ, ಕರಿಯಲು ಎಣ್ಣೆ

ಶ್ರೀಮಂತ ಬಡವರು

ಇಂದು ನಾವು ಶ್ರೀಮಂತ ಬಡವರು ಎಂದರೆ ಯಾರು...? ಎಂದು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿ ಗ್ರೀಕ್ ದೇಶದ ಅಥೆನ್ಸ್ ಪಟ್ಟಣದಲ್ಲಿದ್ದ. ಆತ ಸಾಕ್ರೆಟಿಸ್ ನ ಬಳಿ ಹೋಗಿ ಕೇಳುತ್ತಾನೆ. "ಶ್ರೀಮಂತ ಎಂದರೆ ಯಾರು ?." ಎಂದು. ಆಗ ಬಹಳ ಸುಂದರವಾಗಿ ಸಾಕ್ರೆಟಿಸ್ ಹೇಳುತ್ತಾನೆ, "ಶ್ರೀಮಂತನಾಗಬೇಕಾದರೆ ಮನಸ್ಸು ತೃಪ್ತವಾಗಿರಬೇಕು, ತೃಪ್ತಿ ಇಲ್ಲದ ಸಂಪತ್ತು ಬಡತನದ ಲಕ್ಷಣ". ಜಗತ್ತಿನಲ್ಲಿ ನಾವು ನೋಡ್ತಾ ಇದ್ದೀವಿ.

Image

ಸಿಹಿ - ಹುಳಿ ಚಟ್ನಿ

Image

ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಬಡೆಸೋಂಪು ಸೇರಿಸಿ ಸಿಡಿಸಿ ಕುದಿಯುತ್ತಿರುವ ಚಟ್ನಿಗೆ ಸೇರಿಸಿ. ಮಿಶ್ರಣವನ್ನು ಜರಡಿಯಲ್ಲಿ ಸೋಸಿ.

ಬೇಕಿರುವ ಸಾಮಗ್ರಿ

ಬೆಲ್ಲ ೧ ಕಪ್, ಹುಣಸೇ ಹುಳಿ ೧ ಕಪ್, ಖರ್ಜೂರ ೧ ಕಪ್, ನೀರು ೧೦-೧೨ ಕಪ್, ದೊಡ್ದ ಏಲಕ್ಕಿ (ಕಪ್ಪು ಏಲಕ್ಕಿ) ೪, ಶುಂಠಿ ಹುಡಿ ೨ ಚಮಚ, ಮೆಣಸಿನ ಹುಡಿ ಒಂದೂವರೆ ಚಮಚ, ಓಂ ಕಾಳು ೧ ಚಮಚ, ಬಿರಿಯಾನಿ ಎಲೆ ಅಥವಾ ಮಸಾಲಾ ಎಲೆ ೨, ಎಣ್ಣೆ ೨ ಚಮಚ, ಬಡೆಸೋಂಪು ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.