ಮತ್ತೆ ಶಿವರಾತ್ರಿ… (ಭಾಗ 1)
ಶಿವರಾತ್ರಿಯ ಶಿವ - ಅಲ್ಲಾ - ಯೇಸು ನಾಮ ಸ್ಮರಣೆ.
- Read more about ಮತ್ತೆ ಶಿವರಾತ್ರಿ… (ಭಾಗ 1)
- Log in or register to post comments
ಶಿವರಾತ್ರಿಯ ಶಿವ - ಅಲ್ಲಾ - ಯೇಸು ನಾಮ ಸ್ಮರಣೆ.
ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದಾಗ ಕೇಳದೆ ಇರುವುದು ನಿನ್ನ ತಪ್ಪು.
ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು ತಿಳಿದಂತಾಗುತ್ತದೆ.
ಪದ್ದಮ್ಮನ ಮೂಗುತಿ ಎಂಬ ಕತೆಯಲ್ಲಿ ಒಂದು ಸಾವಿನ ಸಂಪೂರ್ಣ ಸಂಗತಿ ಇದೆ. ಹಾಗೆಯೇ ಅಪ್ಪಂದಿರ ದಿನಾಚರಣೆ ಎಂಬ ಕತೆಯಲ್ಲಿ ಟಿವಿ ಕಾರ್ಯಕ್ರಮವೆಂದರೆ ಹಿನ್ನೆಲೆಯಲ್ಲಿ ಒಬ್ಬ ಅಂದುಕೊಳ್ಳುವುದು ಏನೆಂದರೆ 'ಇವರೆಲ್ಲ ನನ್ನಪ್ಪ ಹಾಗೆ ಹೀಗೆ ಎಂದು ಹೋಗಳುತ್ತಿದ್ದಾರೆ. ನನಗೋ ನನ್ನಪ್ಪನು ಹೇಗೆ ಇರಬಾರದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾನೆ!'. ಈ ಕತೆಯಲ್ಲೂ ನಮಗೆ ತುಂಬಾ ಅನುಭವ ದಕ್ಕುವುದು.
ಕಳೆದ ವಾರ ನೀವು ಕಾಡು ಉತ್ತರಾಣಿಯ ಪರಿಚಯ ಮಾಡಿಕೊಂಡಿರುವಿರಿ. ಇಂದು ನಾವು ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿರುವ ಬೊಳಿಯೇಲ ಮಲೆ ಎಂಬ ಗುಡ್ಡಕ್ಕೆ ಹೋಗೋಣ. ಈ ಗುಡ್ಡದಲ್ಲಿ ನಮ್ಮ ಹಿರಿಯರ ಕಾಲದಲ್ಲಿ ಹುಲಿಗಳಿದ್ದುವಂತೆ! ಈಗ ಹುಲಿಗಳಿಲ್ಲ. ಹಾಗಾಗಿ ಕಾಡೂ ಇಲ್ಲ. ಗುಡ್ಡದ ಕೆಳಭಾಗಗಳು ಬೋಳಾಗಿವೆ. ಒಂದಿಷ್ಟು ಕುರುಚಲು ಗಿಡಗಳನ್ನು ಮಾತ್ರ ಕಾಣುವಿರಿ. ಬನ್ನಿ...
ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್ನು ಎಚ್ಚರಿಸಲು ಹಾರ್ನ್ ಹಾಕಿದೆ. ಅದರಲ್ಲಿಯೇ ಒಬ್ಬ ತಿರುಗಿ ನೋಡಿ ಬಾಯಿಗೆ ಸಿಕ್ಕಂತೆ ಮಾತನಾಡಿ "ಪಕ್ಕಕ್ಕ ಜಾಗ ಐತಲ್ ಹೋಗ್" ಎಂದ.
ಗಝಲ್ ೧
ಮನುಷ್ಯ ಭಸ್ಮ ಧರಿಸುವಾಗ ಒಂದು ವಿಷಯ ಜ್ಞಾಪಕ ಇಟ್ಟುಕೊಳ್ಳಬೇಕಂತೆ ನಾನು ಧರಿಸಿದ ಈ ಭಸ್ಮ ಚಿತಾಭಸ್ಮ ನಿನ್ನೆ ಒಬ್ಬಾತ ತೀರಿದ ಆತನ ಚಿತಾ ಬಸ್ಮ ನಾನು ಇಂದು ಧರಿಸಿದೆ ನಾನು ನಾಳೆ ಸಾಯುತ್ತೇನೆ ನನ್ನ ಚಿತಾಭಸ್ಮ ನಾಡದ್ದು ಇನ್ನೊಬ್ಬರು ಹಚ್ಚಿಕೊಳ್ಳುತ್ತಾರೆ ಜೀವಂತ ಇರುವವರೆಗೂ ಒಳ್ಳೆಯ ಕೆಲಸಗಳನ್ನು ಮಾಡು, ಮಾನವನಾಗಿ ಬದುಕು ಎಂಬ ಜ್ಞಾಪಕ ಎಚ್ಚರಿಕೆ ನಮಗೆ ಭಸ್ಮ ಧಾರಣೆ ಸಮಯದಲ್ಲಿ
ಕಳೆದ ವಾರ ‘ಸೀತಾತನಯ’ ಕಾವ್ಯನಾಮಾಂಕಿತ ಶ್ರೀಧರ್ ಖಾನೋಲ್ಕರ್ ಅವರ ಕವನವನ್ನು ಆಯ್ದು ಪ್ರಕಟ ಮಾಡಿದ್ದೆವು. ‘ದೇಶೀಯ ದುಮದುಮ್ಮೆ’ ಎನ್ನುವ ನೀಳ್ಗವಿತೆಯ ಇನ್ನಷ್ಟು ಭಾಗವನ್ನು ಈ ವಾರ ಪ್ರಕಟ ಮಾಡಲಿದ್ದೇವೆ.
ದೆವ್ವ ಮಾಡಿದ ಕೊಲೆ? ಎನ್ನುವ ವಾಮಾಚಾರ ವಿಷಯದ ಪತ್ತೇದಾರಿ ಕಾದಂಬರಿಯನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು.
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.