ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಣಜದ ಗೂಬೆಯ ಕರಾಮತ್ತು !

ನಾನು ಚಿಕ್ಕವನಿದ್ದಾಗ ರಜೆಯಲ್ಲಿ ಹಳ್ಳಿಯಲ್ಲಿದ್ದ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ಪೇಟೆಯ ಮನೆಯಂತೆ ಸದ್ದುಗದ್ದಲ ಇರುತ್ತಿರಲಿಲ್ಲ. ನಮ್ಮ ಅಜ್ಜಿಯ ಮನೆ ರಸ್ತೆಯಿಂದ ಒಂದೆರಡು ಕಿಲೋಮೀಟರ್‌ ದೂರ. ಕತ್ತಲಾದ ನಂತರ ಅಲ್ಲಿಗೆ ಹೋಗಬೇಕಾದರೆ ಕೈಯಲ್ಲೊಂದು ಟಾರ್ಚ್‌ ಇರಲೇಬೇಕಾಗುತ್ತಿತ್ತು. ಇಂದು ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ.

Image

ದಾಲ್ಚಿನ್ನಿ ನೀರು ಕುಡಿದು ನಿಮ್ಮ ಬೊಜ್ಜು ಕರಗಿಸಿ !

ಬಹಳಷ್ಟು ಮಂದಿಗೆ ತಮ್ಮ ಏರಿದ ತೂಕವನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ. ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಬಲ್ಲ ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾತ್ರೆಗಳು, ಸಿರಪ್, ಜ್ಯೂಸ್, ವ್ಯಾಯಾಮ ಸಾಧನಗಳು, ಡಯಟ್ ಉಪಾಯಗಳು ಎಲ್ಲವೂ ಇದೆ. ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪರಿಣಾಮಕಾರಿ? ದುಷ್ಪರಿಣಾಮಗಳು ಇಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು?

Image

ಪೂರ್ವಜರ ನೆನಪುಗಳ ದಾಖಲಾತಿಯ ಚಾರಿತ್ರಿಕ ಮೌಲ್ಯ

“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” - ನನ್ನ ತಂದೆಯವರ ಬಗ್ಗೆ ನಾನು ಬರೆದು ಪ್ರಕಟಿಸಿದ ಪುಸ್ತಕ (2004ರಲ್ಲಿ). “ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್” - ನನ್ನ ದೊಡ್ಡಪ್ಪನವರ ಬದುಕಿನ ಸಾಧನೆಗಳ ಕುರಿತು ನಾನು ಬರೆದು, ಕಾಂತಾವರ ಕನ್ನಡ ಸಂಘ “ನಾಡಿಗೆ ನಮಸ್ಕಾರ: ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ”ಇಲ್ಲಿ ಪ್ರಕಟಿಸಿದ ಪುಸ್ತಕ (2009ರಲ್ಲಿ). ಇವು ಪ್ರತಿಯೊಬ್ಬರಿಗೂ ಮಾದರಿಯಾಗಬಲ್ಲ ಆ ಧೀಮಂತ ವ್ಯಕ್ತಿಗಳ ಆದರ್ಶ ಬದುಕಿನ ಹಾಗೂ ಮರೆಯಬಾರದ ನೆನಪುಗಳ ದಾಖಲಾತಿ ಪುಸ್ತಕಗಳು.

Image

ಶಿವನ ಆಲಯವಾದ ಮುರ್ಡೇಶ್ವರ

ಭಟ್ಕಳ ಹಾಗೂ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಕಾಣುವ ಈ ಮುರ್ಡೇಶ್ವರ, ಹೆದ್ದಾರಿಯಿಂದ ಎರಡು ಕಿ.ಮೀ. ದೂರದಲ್ಲಿದೆ. ಮುರ್ಡೇಶ್ವರಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ  ಕುತೂಹಲ ಉಂಟಾಗುವುದು ಸಹಜ. ಇಲ್ಲಿಗೆ ಬರುವ ಕೆಲವರಿಗೆ ಇದು ಪ್ರವಾಸಿ ತಾಣ ಮಾತ್ರ. ಉಪ್ಪು ನೀರಿನಾಟ, ದೋಣಿ ವಿಹಾರದಲ್ಲಿ ಅವರೆಲ್ಲ ತಲ್ಲೀನರಾಗಬಹುದು.

Image

ಸ್ಟೇಟಸ್ ಕತೆಗಳು (ಭಾಗ ೧೨೪೬) - ಅಂದುಕೊಂಡು

ಅಂದುಕೊಂಡೇ ದಿನವನ್ನು  ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ ಪಟ್ಟಿಲ್ಲ. ಅಂದುಕೊಳ್ಳುವುದು ತಪ್ಪಲ್ಲ, ಆದರೆ ಅಂದುಕೊಂಡ ಕ್ಷಣದಿಂದ ಒಂದು ಹೆಜ್ಜೆಯಾದರೂ ಎತ್ತಿಡಬೇಕು.

Image

ದೇವುಡು ಅವರ ಸಣ್ಣ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೇವುಡು ನರಸಿಂಹ ಶಾಸ್ತ್ರಿ
ಪ್ರಕಾಶಕರು
ವಸಂತ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.150/-

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.

ಸಣ್ಕತೆ- ಕಾರಣ.. ಯಾರು ?

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸುಮ್ಮನೆ ಮಲಗಿದ್ದವು !

Image

ಕೂವೆ ಹಲ್ವ

Image

ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ ಎರಡು ಚಮಚ ತುಪ್ಪ ಹಾಕಿ ಕದಡಿ. ಬೆಂದ ಹಲ್ವವನ್ನು ತುಪ್ಪ ಸವರಿದ ಬಟ್ಟಲಿಗೆ ಸುರುವಿ ಬೇಕಾದ ಆಕಾರಕ್ಕೆ ಕತ್ತರಿಸಿ.

ಬೇಕಿರುವ ಸಾಮಗ್ರಿ

ಕೂವೆ ಪುಡಿ (ಆರಾರೂಟ್) ೧ ಕಪ್, ಸಕ್ಕರೆ ೧ ಕಪ್, ನೀರು ೧/೨ ಕಪ್, ಹಾಲು ೧ ಕಪ್, ತುಪ್ಪ ೨ ಚಮಚ, ಏಲಕ್ಕಿ ಪುಡಿ ಚಿಟಿಕೆ.