ಸ್ಟೇಟಸ್ ಕತೆಗಳು (ಭಾಗ ೧೨೪೬) - ಅಂದುಕೊಂಡು

ಅಂದುಕೊಂಡೇ ದಿನವನ್ನು ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ ಪಟ್ಟಿಲ್ಲ. ಅಂದುಕೊಳ್ಳುವುದು ತಪ್ಪಲ್ಲ, ಆದರೆ ಅಂದುಕೊಂಡ ಕ್ಷಣದಿಂದ ಒಂದು ಹೆಜ್ಜೆಯಾದರೂ ಎತ್ತಿಡಬೇಕು. ಕಾಲು ಎತ್ತುವುದಕ್ಕೆ ಉದಾಸಿನ ತಾಳಿ ಅಲ್ಲೇ ನಿಂತು ಮತ್ತೆ ಹೊಸ ಹೊಸ ವಿಚಾರಗಳನ್ನು ಅಂದುಕೊಳ್ಳುತ್ತಾ ಹೋಗಿ ಕೊನೆಗೊಂದು ದಿನ ನೀನು ಏನು ಇಲ್ಲವಾಗಿ ಬಿಡ್ತೀಯ. ಹಾಗಾಗಿ ಅಂದುಕೊಂಡ ಕೂಡಲೇ ಹೆಜ್ಜೆಯನ್ನು ಇಟ್ಟುಬಿಡು ಪ್ರತಿಯೊಂದು ಕೆಲಸವೂ ಕೂಡ ಹಾಗೆ ಶ್ರಮವಹಿಸಿ ದುಡಿದರೆ ಮಾತ್ರ ಫಲ ಕಣ್ಣ ಮುಂದೆ ನಿಲ್ಲುತ್ತದೆ. ಇಲ್ಲವಾದರೆ ದೂರದಲ್ಲೆಲ್ಲೋ ಹಾದು ಹೋಗುತ್ತಾನೆ ಇರುತ್ತದೆ. ನಿನ್ನ ಅವಕಾಶಗಳು ನಿನ್ನ ಬಳಿಗೆ ಬಂದು ನಿಲ್ಲುವುದಿಲ್ಲ. ನಿನಾಗಿಯೇ ಪ್ರಯತ್ನಪಟ್ಟು ಅವಕಾಶಗಳ ಬಳಿ ತಲುಪಬೇಕು. ಅಂದುಕೊಳ್ಳುವುದನ್ನು ಬಿಡು ಹೆಜ್ಜೆಯನ್ನು ಮುಂದಿಡು....ಅನಾಮಿಕ ಗುರುಗಳೊಬ್ಬರ ಮಾತು ಮತ್ತೆ ಮತ್ತೆ ನನ್ನೊಳಗೆ ಒಡಮೂಡುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ