ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೫೦) - ನೆಲ್ಲಿದಡಿ

ಈ ನೆಲದ ನಂಬಿಕೆಯೊಂದು ಕಾಯುತ್ತಿತ್ತು. ಈ ನೆಲಕ್ಕೆ ಕಾಲಿಟ್ಟಾಗ ಜನರೊಳಗೆ ಬಾಂಧವ್ಯ ಗಟ್ಟಿಯಾಗಿತ್ತು, ಒಬ್ಬರನ್ನೊಬ್ಬರು ಆಧರಿಸಿಕೊಂಡಿದ್ದರು, ಎಲ್ಲರೂ ಪ್ರೀತಿ ಒಂದೇ ಧ್ಯೇಯ ಮಂತ್ರವಾಗಿ ಬದುಕುತ್ತಿದ್ದರು. ಜಾತಿ ದ್ವೇಷಗಳ ಇಲ್ಲದ ಅದ್ಭುತ ಲೋಕ ಸೃಷ್ಟಿಯಾಗಿತ್ತು. ಹಾಗಾಗಿ ಈ ಸ್ಥಳದಲ್ಲಿ ಉಳಿಯಬೇಕು  ಅನ್ನೋದನ್ನ ನಿಶ್ಚಯ ಮಾಡಿಕೊಂಡು ಉಳಿಪಾಡಿ ಅನ್ನುವಂತಹ ಪ್ರದೇಶದಲ್ಲಿ ನೆಲೆಯಾಯಿತು.

Image

ಪರೀಕ್ಷಾ ಪರಿಕಲ್ಪನೆಗಳು

'ಪರೀಕ್ಷೆ' ಎಂದಾಕ್ಷಣ ಮಕ್ಕಳಲ್ಲಿ ಭಯ. ಇದು ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ ಭಯವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಓದು ಅನಿವಾರ್ಯ ಹಾಗೂ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ಬಹುತೇಕ ವಿದ್ಯಾರ್ಥಿಗಳಲ್ಲಿ ಓದುವುದೆಂದರೆ 'ನಿರುತ್ಸಾಹ.

Image

ಬಯಕೆ (ಭಾಗ 2)

ಸ್ಥಾನ ಬಂಧಿತ ಅಂದರೆ ಒಂದು ವಸ್ತು ಏಕಕಾಲದಲ್ಲಿ ಎರಡು ಕಡೆ ಇರುವುದಿಲ್ಲ. ಈಗ ಯಾರ ಹತ್ತಿರ ಒಂದು ವಸ್ತು ಇದೆ ಅಂದರೆ, ಅದೇ ವಸ್ತು ನನ್ನ ಬಳಿ ಇರುವುದಿಲ್ಲ. ಅದನ್ನು ನಾನು ಪಡೆದರೆ ಆತನಲ್ಲಿ ಅದು ಖಾಲಿಯಾಗುತ್ತದೆ. ಅಂದರೆ ನೋಡೋದಕ್ಕೆ ಎಲ್ಲರಿಗೂ ಸಿಗುತ್ತದೆ. ಪಡೆಯುವುದಕ್ಕೆ ಆಗುವುದಿಲ್ಲ. ನೋಡೋದಿಕ್ಕೆ ನನ್ನ ಕೈಯಲ್ಲೇ ಇರಬೇಕು ಅಂತ ಎಲ್ಲಿದೆ ?.

Image

ಕೃಷಿಯಲ್ಲಿ ಹಸಿರು ಮನೆಯ ಉಪಯುಕ್ತತೆ

ಕೃಷಿಯಲ್ಲಿ ಉನ್ನತ ಆಧುನಿಕ ತಂತ್ರಜ್ಞಾನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ಈ ಆಧುನಿಕ ತಂತ್ರಜ್ಞಾನ ಹವಾಮಾನದ ಮೇಲೆ ಕಡಿಮೆ ಅವಲಂಬಿತವೂ ಹಾಗೂ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಹೆಚ್ಚು ಸಹಕಾರಿಯೂ ಆಗಿರುವುದರಿಂದ ಅಧಿಕ ಮೂಲ ಬಂಡವಾಳ ಮತ್ತು ಖರ್ಚಿನಿಂದ ಕೂಡಿರುತ್ತದೆ.

Image

ಅಂತರಂಗದ ಸ್ವಗತ

ಪುಸ್ತಕದ ಲೇಖಕ/ಕವಿಯ ಹೆಸರು
ಪಾರ್ವತಿ ಜಿ ಐತಾಳ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೫

ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು.

ದಯವಿಟ್ಟು ಒಮ್ಮೆ ಯೋಚಿಸಿ ನೋಡಿ…!

ಆಲೋಚನೆಗೆ ಅತ್ಯಂತ ಅರ್ಹವಾಗಿದೆ. ಭಾರತದಲ್ಲಿ ರಕ್ತ ಸಂಬಂಧಿಗಳ ನಡುವಿನ ಸಿವಿಲ್ ದಾವೆಗಳನ್ನು ತಮ್ಮೊಳಗೇ ಬಗೆಹರಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಕಳಕಳಿಯ ಮನವಿ.

Image

ಬ್ರೆಡ್ ಬರ್ಫಿ

Image

ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ಒಂದು ಸ್ಟೀಲ್ ತಾಟಿಗೆ ಉಳಿದ ತುಪ್ಪ ಸವರಿ ತಯಾರಿಸಿದ ಮಿಶ್ರಣವನ್ನು ಸುರಿದು ಚೆನ್ನಾಗಿ ಸೆಟ್ ಮಾಡಿರಿ. ತಣಿದ ಬಳಿಕ ಫ್ರಿಡ್ಜ್ ನಲ್ಲಿಡಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹುಡಿ ೨ ಕಪ್, ಹಾಲು ೧ ಕಪ್, ಸಕ್ಕರೆ ೧ ಕಪ್, ಕಾಯಿತುರಿ ೨ ಕಪ್, ಗೇರುಬೀಜದ ತುಂಡುಗಳು ಅರ್ಧ ಕಪ್, ತುಪ್ಪ ೪ ಚಮಚ.

ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳು

“ನಮ್ಮ ಜೀವಮಾನದಲ್ಲಿ ವಜ್ರದ ಉಂಗುರ ಧರಿಸಲು ಸಾಧ್ಯವಿಲ್ಲ” ಎಂದು ಭಾವಿಸಿದವರಲ್ಲಿ ಹಲವರು ಈಗ ವಜ್ರದುಂಗುರ ಧರಿಸಲು ಸಾಧ್ಯವಿದೆ. ಯಾಕೆಂದರೆ, 2020ರಿಂದೀಚೆಗೆ ಭಾರತದಲ್ಲಿ  ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಪೂರೈಕೆ ಹೆಚ್ಚುತ್ತಿದೆ ಮತ್ತು ಅವುಗಳ ಬೆಲೆ ಇಳಿಯುತ್ತಿದೆ.

ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಇದರ ಇತ್ತೀಚೆಗಿನ ವರದಿಯ ಅನುಸಾರ ಭಾರತದಲ್ಲಿ 2023ರಲ್ಲಿ ವಜ್ರದ ಬೆಲೆ ಒಂದು ಕ್ಯಾರೆಟಿಗೆ ರೂ.60,000ದಿಂದ ರೂ. 20,000ಕ್ಕೆ ಇಳಿದಿದೆ. ಇದಕ್ಕೆ ಕಾರಣ ಭಾರತದಲ್ಲಿ ಅವುಗಳ ಅತಿ-ಉತ್ಪಾದನೆ ಮತ್ತು ವಿದೇಶಗಳಿಂದ ಅವುಗಳ ಅತಿ-ಪೂರೈಕೆ.

Image

ಸ್ಟೇಟಸ್ ಕತೆಗಳು (ಭಾಗ ೧೨೪೯) - ಪರಿಚಯ

ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಎಲ್ಲಿಗೆ ತಲುಪಬೇಕು ಅಂತಂದ್ರೆ ನಿನ್ನ ಪರಿಚಯ ಮಾಡಿಕೊಡದೆ ನೀನು ಪರಿಚಯವಾಗಬೇಕು. ಅದು ನಿನ್ನ ನಿಜವಾದ ಸಾಧನೆ.

Image