ಒಂದು ಗಝಲ್
ಕವನ
ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು
ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು
ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ
ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು
ಮತ್ತು ಮುತ್ತಲು ಸುತ್ತ ಸಂಸ್ಕಾರದ ನೇಗಿಲು ಸಡಿಲಾಯಿತೆ
ಕತ್ತು ಉಳುಕಿದರೂ ಬಿಡದು ಮಾಯೆ ಹಾರುವರೇ ಇಂದು
ಬಯಸಿದ್ದೆಲ್ಲ ಸಿಗುವುದಿದ್ದರೆ ಇಷ್ಟೆಲ್ಲ ಕಷ್ಟವಿದೆಯೆ ಬದುಕಲಿ
ಹೊಸತನದ ಕನಸಿನಲಿ ಹಳೆತನವ ಹೀಗೆ ಮಾರುವರೇ ಇಂದು
ಜೀವನದ ಬಯಲಾಟ ಇನ್ನೆಷ್ಟು ದಿನವದು ನಡೆವುದೋ ಈಶಾ
ಚೆಂದದ ಬದುಕಲ್ಲಿ ಇನ್ನಾದರೂ ನಡೆಯೋಣ ಸಾರುವರೇ ಇಂದು
-ಹಾ. ಮ ಸತೀಶ ಬೆಂಗಳೂರು
ಚಿತ್ರ್
