ಕೂವೆ ಹಲ್ವ

ಕೂವೆ ಹಲ್ವ

ಬೇಕಿರುವ ಸಾಮಗ್ರಿ

ಕೂವೆ ಪುಡಿ (ಆರಾರೂಟ್) ೧ ಕಪ್, ಸಕ್ಕರೆ ೧ ಕಪ್, ನೀರು ೧/೨ ಕಪ್, ಹಾಲು ೧ ಕಪ್, ತುಪ್ಪ ೨ ಚಮಚ, ಏಲಕ್ಕಿ ಪುಡಿ ಚಿಟಿಕೆ.

ತಯಾರಿಸುವ ವಿಧಾನ

ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ ಎರಡು ಚಮಚ ತುಪ್ಪ ಹಾಕಿ ಕದಡಿ. ಬೆಂದ ಹಲ್ವವನ್ನು ತುಪ್ಪ ಸವರಿದ ಬಟ್ಟಲಿಗೆ ಸುರುವಿ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಸವಿಯಾದ ಕೂವೆ ಹಲ್ವ ಮೆಲ್ಲಲು ರೆಡಿ.

-ಸಹನಾ ಕಾಂತಬೈಲು, ಮಡಿಕೇರಿ