ಬಿಡುಗಡೆಯ ಹಾಡುಗಳು (ಭಾಗ ೨೩) - ಸೀತಾತನಯ

ಕಳೆದ ವಾರ ‘ಸೀತಾತನಯ’ ಕಾವ್ಯನಾಮಾಂಕಿತ ಶ್ರೀಧರ್ ಖಾನೋಲ್ಕರ್ ಅವರ ಕವನವನ್ನು ಆಯ್ದು ಪ್ರಕಟ ಮಾಡಿದ್ದೆವು. ‘ದೇಶೀಯ ದುಮದುಮ್ಮೆ’ ಎನ್ನುವ ನೀಳ್ಗವಿತೆಯ ಇನ್ನಷ್ಟು ಭಾಗವನ್ನು ಈ ವಾರ ಪ್ರಕಟ ಮಾಡಲಿದ್ದೇವೆ.
ಆಂಗ್ಲರ ರಾಜ್ಯಭಾರ
ದಾಸ್ಯಪಾಶವು ಬಂದು ಕೊರಳನು ಬಿಗಿದಿತು ನಾಡೆಲ್ಲ ದುಃಖದಿ ಮರುಗುವಂತೆ ।
ಅಮಾ । ವಾಸ್ಯೆಯು ಜಗವನು ಮುತ್ತುವಂತೆ । ಯಮದಾಸ್ಯವು ಜನರನ್ನು
ನುಂಗುವಂತೆ । ಹಾಸ್ಯದ ಮಾತಲ್ಲ ರೈತರ ದಾಸ್ಯವು ಯಮರಾಜನಾಸ್ಯದ ತಲೆಯು
ಮೇಲಾಯ್ತು ॥
ಕೂಳಿಲ್ಲದಂತಹ ರೈತರ ಗೋಳನ್ನು ಬಣ್ಣಿಸಬೇಕ್ಯಾರು ಜಗದೊಳಗೇ । ವಿಷ ।
ಚೇಳಿನ ತಾಪವ ಮನದೊಳಗೇ । ನೀವು । ತಿಳಿದುಕೊಳ್ಳಿರಿ ಮಾತು ಒಡ
ಲೊಳಗೇ । ಜೋಳವಿಲ್ಲದ ಬಡ ರೈತರ ಧನವನು ಹೀರುವ ಸರಕಾರ ಸರಕಾರ
ವಲ್ಲಾ ॥
ಗವರ್ನರ ಜನರಲ್ಲನೆಂಬುವ ದಾಸಗೆ ಎರಡೂವರಿಲಕ್ಷ ರೂಪಾಯ್ಗಳೂ । ಎಂಟು ।
ಗವರ್ನರ ಜನರೀಗೆ ಲಕ್ಷಗಳೂ । ಅವರ । ನೂರಾರು । ದಾಸರ ಕೋಟಿಗಳೂ ।
ಎಷ್ಟೆಂದು ಹೇಳಲಿ ಕಷ್ಟದಿ ಹೇಳುವೆ ಕರಡಿಯ ನುಣುಪಾದ ಕೂದಲ
ದಷ್ಟು ॥
ಎರಡೆರಡು ಸಾವಿರ ಕಲೆಕ್ಟರ ಜನರಿಗೆ ತಿಂಗಳದೊಳಗಿಷ್ಟು ಬರಿದಾಯಿತು ॥
ನಮ್ಮ । ಕರಿಗಾಲದೊಳು ಪ್ಲೇಗ್ ತಲೆಯೆತ್ತಿತು । ನಾಡ । ಗಾರರು ತೊಳಲುವ
ಕಾಲ ಬಂತು । ಪರದೇಶದಿಂ ಬಂದ ಪರಕೀಯ ಜನರಿಗೆ ಸೂರಿಯಾಯಿತು
ನಮ್ಮ ದ್ರವ್ಯದ ಸುಗ್ಗಿ ॥
ಭಾರತ ದೇಶವ ಪರತಂತ್ರ ಕೆಸರೊಳು ಹಾಕಿ ತುಳಿಯುವಂಥ ಬಿಳಿಯರಿಗೆ ।
ನಮ್ಮ । ನೂರಾರು ಸೋಲ್ಜರ ಗೆಳೆಯರಿಗೆ । ಮತ್ತೆ । ಕರಿಯಾಳುಗಳ ಕೋಟಿ
ಜನಗಳಿಗೆ । ಕರುಣದ ಸರಕಾರ ಒಡಲೊಡೆಯುವ ಹಾಗೆ ಸುರಿದಿತು ರೈತರ
ರಕ್ತದ ಧನವಾ ॥
ಕಷ್ಟವ ಮಾಡುತ ಹೊಟ್ಟೆಯ ಹೊರೆಯುವ ಆಂಗ್ಲ ದೇಶದ ಕೀಳು । ಜನ
ಗಳನು ನೀತಿ ಭ್ರಷ್ಟರಾಗಿರುವಂಥ ಮನುಜರನು ಅತೀ । ದುಷ್ಟತನದ
ಹಾಳು ಮನುಜರನು । ಕಷ್ಟದಿ ಬಾಳುವ ಧರ್ಮವ ದೇಶದಿ ತಡೆಯಲ್ಲದಲೆ
ತಂದು ತುಂಬುತ್ತಲಿಹರೈ ॥
ಬಡವರ ಕಡೆಗೊಮ್ಮೆ ನೋಡಿರಿಯೆಂದರೆ ಕಾಲೊಳು ಬೇಡಿಯ ಜಡಿಯುವರು ।
ಕಪ್ಪು । ಕಡಲಿನ ನೀರನು ಕುಡಿಸುವರು । ತಮ್ಮ । ಬಡಿವಾರ ನಾಡೊಳು ನಡಿ
ಸುವರು । ಪೊಡವಿಯೊಳಗೆ ಯಶಬಡೆದಂಥ ಬಡವರ ಒಡಲಿಗೆ ಕರುಣದಿ
ಬಡೆವರು ಕೇರು ॥