ಶಿವರಾತ್ರಿಯ ಮಹತ್ವ ಹಾಗೂ ಶಿವತತ್ವ. (ಭಾಗ 2)

ಶಿವರಾತ್ರಿಯ ಮಹತ್ವ ಹಾಗೂ ಶಿವತತ್ವ. (ಭಾಗ 2)

ಮನುಷ್ಯ ಭಸ್ಮ ಧರಿಸುವಾಗ ಒಂದು ವಿಷಯ ಜ್ಞಾಪಕ ಇಟ್ಟುಕೊಳ್ಳಬೇಕಂತೆ ನಾನು ಧರಿಸಿದ ಈ ಭಸ್ಮ ಚಿತಾಭಸ್ಮ ನಿನ್ನೆ ಒಬ್ಬಾತ ತೀರಿದ ಆತನ ಚಿತಾ ಬಸ್ಮ ನಾನು ಇಂದು ಧರಿಸಿದೆ ನಾನು ನಾಳೆ ಸಾಯುತ್ತೇನೆ ನನ್ನ ಚಿತಾಭಸ್ಮ ನಾಡದ್ದು ಇನ್ನೊಬ್ಬರು ಹಚ್ಚಿಕೊಳ್ಳುತ್ತಾರೆ ಜೀವಂತ ಇರುವವರೆಗೂ ಒಳ್ಳೆಯ ಕೆಲಸಗಳನ್ನು ಮಾಡು, ಮಾನವನಾಗಿ ಬದುಕು ಎಂಬ ಜ್ಞಾಪಕ ಎಚ್ಚರಿಕೆ ನಮಗೆ ಭಸ್ಮ ಧಾರಣೆ ಸಮಯದಲ್ಲಿ ಬರಬೇಕಂತೆ, ಇದಕ್ಕಾಗಿ ಉಜ್ಜಯಿನಿಯಲ್ಲಿ ಇಂದಿಗೂ ಮಹಾಕಾಲನಿಗೆ ಪ್ರತಿದಿನ ಹೊಸ ಚಿತಾಭಸ್ಮ ತಂದೆ ಲೇಪನ ಮಾಡುತ್ತಾರೆ, ಇಂದಿಗೂ ಉಜ್ಜಯ್ಯನಿಯಲ್ಲಿ ಮಹಾಕಾಲ ಶಿವನಿಗೆ ಬೆಳಿಗ್ಗೆ ಮೂರು ಗಂಟೆಗೆ ಭಸ್ಮ ಆರತಿ ಆಗುತ್ತದೆ,

ಬೇಡರ ಕಣ್ಣಪ್ಪನಿಗೆ ಶಿವ ಆತನ ಭಕ್ತಿಗೆ ಮೆಚ್ಚಿ ಮೋಕ್ಷವನ್ನು ಪ್ರಸಾದಿಸಿದ ಎಂಬ ಪುರಾಣ ಕತೆ ಬರುತ್ತದೆ, ಬೇಡರ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತಿ ಶಿವಲಿಂಗಕ್ಕೆ ಅರ್ಪಿಸಿದ್ದ. ನಿಜವಾದ ಶಿವರಾತ್ರಿ ಹಬ್ಬದ ತತ್ವ ತಿಳಿದುಕೊಳ್ಳಬೇಕು, ನಾವು ನಮ್ಮ ದಿನನಿತ್ಯದ ನಮ್ಮ ಜೀವನದಲ್ಲಿ ಶಿವನಿಂದ ಪ್ರೇರಣೆ ಹೊಂದಿ ನಮ್ಮ ಜೀವನ ಸಾಗಿಸಿದಲ್ಲಿ ಶಿವರಾತ್ರಿ ಆಚರಣೆಯಿಂದ ಲಾಭವಾದಿತು.

ಶಿವ ಮನೋನಿಯಾಮಕ ಅದಕ್ಕಾಗಿ ಆತನನ್ನು ಕುರಿತು ಹರಿಯಲ್ಲಿ ಮನಸು ಕೊಡು ಶಂಭೋ ಎಂದು ಹಾಡುತ್ತಾರೆ, ಮನುಷ್ಯನ ಮನಸ್ಸು ಇಷ್ಟು ವಿಚಲಿತವಾಗಿ ಇರಲು ಕಾರಣವೇನು ಎಂದು ಶಿವ ಪರಮಾತ್ಮ ನನ್ನು ಒಮ್ಮೆ ಪಾರ್ವತಿ ದೇವಿ ಕೇಳುತ್ತಾಳಂತೆ,  ಅದಕ್ಕೆ ಶಿವ ಹೀಗೆ ಉತ್ತರ  ಹೇಳುತ್ತಾನೆ ಮನುಷ್ಯನ ಮನಸ್ಸು ಶಾಂತವಾಗಿ ಇರಬೇಕಾದರೆ ಮನುಷ್ಯ ಯಾರಿಂದಲು ಏನು ಅಪೇಕ್ಷೆ ಮಾಡಬಾರದು, ಹಾಗೂ ಯಾರನ್ನು ದ್ವೇಷ ಮಾಡಬಾರದು ಅವಾಗ ಮಾತ್ರ ಮನಸ್ಸು ಶಾಂತವಾಗುತ್ತದೆ ಎಂದು ಶಿವ ಪಾರ್ವತಿಗೆ ಹೇಳುತ್ತಾನೆ, ಇವೆರಡು ಕಷ್ಟಕರವಾದ ಕೆಲಸ ವಾದರೂ ಕ್ರಮೇಣ ಅಭ್ಯಾಸ ಮಾಡಿದಲ್ಲಿ, ಸಾಧಿಸಿದಲ್ಲಿ ಮನಸ್ಸು ತಾನಾಗಿ ಶಾಂತವಾಗುತ್ತದೆ, ನಾವು ನಮ್ಮ ಜೀವನದಲ್ಲಿ ಈ ಎರಡನ್ನು ಸಾಧಿಸಲು ಪ್ರಯತ್ನ ಮಾಡಬೇಕು ಇದೇ ಸಾಧನೆ, ಹಾಗೂ ಇದೇ ಶಿವನ ಆರಾಧನೆ ಕೂಡ,

ನೀವು ನೋಡಿ ಶಿವ ಪರಿವಾರ ಹೇಗಿರುತ್ತದೆ ಎಂದರೆ, ಶಿವ ನಂದಿಯ ಮೇಲೆ ಕೂತಿರುತ್ತಾನೆ, ಪಕ್ಕದಲ್ಲಿ ಪಾರ್ವತಿ ಸಿಂಹದ ಮೇಲೆ ಕೂತಿರುತ್ತಾಳೆ, ಒಂದು ಪಕ್ಕದಲ್ಲಿ ಗಣಪತಿ ಇಲಿಯ ಮೇಲೆ ಕೂತಿರುತ್ತಾನೆ,  ಇನ್ನೊಂದು ಪಕ್ಕದಲ್ಲಿ ಷಣ್ಮುಖ ನವಿಲಿನ ಮೇಲೆ ಕೂತಿರುತ್ತಾನೆ, ಇದು ಶಿವ ಪರಿವಾರ ನೀವು ನೋಡಿ ಶಿವನ ಕೊರಳಲ್ಲಿದ್ದ ಹಾವು ಗಣಪತಿಯ ಕೆಳಗಿದ್ದ ಇಲಿ ಇವೆರಡು ಜಾತಿ ವೈರಿಗಳು, ಶಿವನ ಕೆಳಗಿದ್ದ ನಂದಿ ಪಾರ್ವತಿ ಕೆಳಗಿದ್ದ ಸಿಂಹ ಇವೆರಡು ಕೂಡ ಜಾತಿ ವೈರಿಗಳು, ಶಿವನ ಕೊರಳಲ್ಲಿದ್ದ ಹಾವು ಷಣ್ಮುಗನ ವಾಹನವಾದ ನವಿಲು ಇವೆರಡಕ್ಕೂ ಜಾತಿ ವೈರತ್ವ, ಇಷ್ಟೆಲ್ಲಾ ವೈರತ್ವ ಇದ್ದ ಎಲ್ಲರನ್ನೂ ಶಿವ ಪರಮಾತ್ಮ ತಾನು ಮಧ್ಯದಲ್ಲಿ ಇದ್ದು ತಾನು ಶಾಂತವಾಗಿದ್ದು ಎಲ್ಲರನ್ನೂ ಶಾಂತವಾಗಿ ಕೂರಿಸಿದ್ದಾನೆ ಇದೇ ಶಿವ ಪರಿವಾರ, ನಾವು ನಮ್ಮ ಕುಟುಂಬದಲ್ಲಿ ಹೀಗೆ ಇರಲು ಪ್ರಯತ್ನಿಸಬೇಕು 

ಇದರಿಂದ ನಾವು ಪಾಠ ಕಲಿಯಬೇಕು ನಮ್ಮ ಮನೆ ಕುಟುಂಬದಲ್ಲಿ ಇದೇ ರೀತಿ ಭಿನ್ನ-ಭಿನ್ನ ವಿಚಾರದ ಹೆಂಡತಿ, ಮಗ, ಸೊಸೆ, ಅಣ್ಣ, ತಮ್ಮ, ತಂದೆ ,ತಾಯಿ ಎಲ್ಲರೂ ಇರುತ್ತಾರೆ ನಾವು ಶಾಂತವಾಗಿದ್ದು ಎಲ್ಲರನ್ನೂ ಜೊತೆಗೂಡಿಸಿಕೊಂಡು ಸಂಸಾರ ಸಾಗಿಸಬೇಕು ಇದೇ ಸಾಧನೆ, ಶಿವ ಪರಿವಾರ ವನ್ನು ನೋಡಿ ಇದನ್ನೇ ನಾವು ಕಲಿಯಬೇಕು, ಬನ್ನಿ, ನಾವೆಲ್ಲ ಶಿವ ತತ್ವವನ್ನು ಅರಿತು ಶಿವ ಕೇಶವರ ಭೇದ ಮಾಡದೆ ಯಾರನ್ನು ಸರ್ವೋತ್ತಮ ಎಂದು ಹೇಳದೆ ಶಿವರಾತ್ರಿ ಆಚರಿಸಿದಲ್ಲಿ ಕಿಂಚಿತ್ತಾದರು ಶಿವ ತತ್ವ ನಮ್ಮ ಜೀವನದಲ್ಲಿ ತರಲು ಪ್ರಯತ್ನಿಸಿದಲ್ಲಿ, ಕೇವಲ ತಾನು ತನ್ನ ಹೆಂಡರು ಮಕ್ಕಳ ಕ್ಷೇಮದ ಪ್ರಾರ್ಥನೆಯ ಬದಲಾಗಿ ನಮ್ಮ ಸಂಪೂರ್ಣ ಸಮಾಜ ,ಬಂದು ,ಬಳಗ, ಮಿತ್ರರು ಎಲ್ಲರ ಕ್ಷೇಮದ ಪ್ರಾರ್ಥನೆ ಮಾಡಿದಲ್ಲಿ ಶಿವ ಮೆಚ್ಚಿಯಾನು, ಎಲ್ಲರ ಜೊತೆ ಪ್ರೇಮದಿಂದ ವರ್ತಿಸುತ್ತಾ ಅವರ ಕಷ್ಟದಲ್ಲಿ ಸಹಾಯ ಮಾಡುತ್ತಾ ಮನುಷ್ಯರಾಗಿ ಬದುಕೋಣ, ಬೀಳದೆ ಎಳದೆ ಬಾಳೋದಾದರೆ ಹೇಳಲಿಕ್ಕೆ ಮತ್ತೇನು ಇಲ್ಲ ಎಂಬಂತೆ ನಮ್ಮ ಜೀವನ ಆಗಬೇಕು, ಇದೆ ನಿಜವಾದ ಶಿವರಾತ್ರಿ ಆಚರಣೆ ಮಾಡಿದಂತೆ ಆಗುತ್ತದೆ.

-ಅಮರ್ ದೀಕ್ಷಿತ್ ಕೃಷ್ಣ 

ಚಿತ್ರ ಕೃಪೆ: ಇಂಟರ್ನೆಟ್ ತಾಣ