ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ತೌರಿನ ಬೆಲೆ...! 

ಸಿದ್ದರಾಮಯ್ಯ

ವೈಮಾನಿಕ ಹಾರಾಟ-

ಮೈಸೂರಿಗೆ 

ಇಪ್ಪತ್ತು ಬಾರಿ ಪಯಣ;

ಬೊಕ್ಕಸಕ್ಕೆಇಪ್ಪತ್ತೈದು 

ಕೋಟಿ ವೆಚ್ಚಾ....

 

ನಾನೂ ನೀನೂ

ಹೀಗೆ ಇಷ್ಟು ವೆಚ್ಚದಲಿ-

ಆಕಾಶದಲ್ಲಿ

ಹಾರಾಡಲಾದೀತೇ ತಮ್ಮಾ...?

ಮುಖ್ಯಮಂತ್ರಿ ತೌರಿನ ಪ್ರೀತಿಗೆ

ಬೆಲೆ ಕಟ್ಟಲಾದೀತೇನೋ ಹುಚ್ಚಾ...!

***

ರಾಜಕೀಯ ದೊಂಬರಾಟ 

ರಾಜ್ಯವೇ

ಅಕ್ಕಿ ಖರೀದಿಸುತ್ತಿಲ್ಲ-ಕೇಂದ್ರ;

ಕೇಂದ್ರವೇ

ಅಕ್ಕಿ ಕೊಡುತ್ತಿಲ್ಲ-ರಾಜ್ಯ

ಕೇಂದ್ರ-ರಾಜ್ಯಗಳದು

ರಾಜಕೀಯ ದೊಂಬರಾಟ...

 

ಗಂಡ-ಹೆಂಡಿರ

ಜಗಳದಲಿ 

ಕೂಸಿನ ಬಡಿದಾಟ;

ಕೇಂದ್ರ-ರಾಜ್ಯಗಳ

ತಿಕ್ಕಾಟದಲಿ-

ಬಡವರ ಹಸಿವಿನ ಕುಸಿದಾಟ!

***

ಕಿಲಾಡಿ ದೇವ 

ಪುತ್ರನಿಗೆ

ಗಂಡು ಮಗು

ಬೇಕೆಂದ ನಟ

ಚಿರಂಜೀವಿ-

ಕಿಲಾಡಿ ಆ ದೇವ 

ಒಂದು ಕೊರತೆಯಿಟ್ಟ....

 

ಅಯ್ಯೋ- 

ದೇವರು ಕೋಟಿ ಕೋಟಿ

ಮತ್ತೆಲ್ಲವನೂ ಕೊಟ್ಟ;

ಒಂದು ಪುಟ್ಟ 

ಗಂಡುಮಗುವನು

ಕೊಡದೆ ಸಂಕಟವಿಟ್ಟ!

***

ಚೆಲುವಿನ ಭಾಷೆ ಎಮ್ಮೀ ಕನ್ನಡ 

ನೋಟಿನಲಿರುವ

ಅಧಿಕೃತ ಹದಿನೈದು

ಭಾರತೀಯ

ಭಾಷೆಗಳಲಿ-

ಮಧುರ ಕನ್ನಡವೇ

ಅತಿ ಸುಂದರ...

 

ಹಾವಿನೊಳು ಹರಿವ

ಕಾವೇರಿ ತುಂಗೆಯರೊಲು

ಬಳುಕಿ ನಡೆವ

ಸುಂದರ ಬರವಣಿಗೆಯ

ಅಕ್ಷರ ಮಾಲೆಯೇ-

ನಮ್ಮ ಕನ್ನಡೋಗರ!

***

ಬೆಟ್ಟದಲ್ಲಿ ಕ್ಯಾಬಿನೆಟ್ 

ರಾಜ್ಯ ಸಚಿವ

ಸಂಪುಟ

ಸಭೆ-

ಮಹದೇಶ್ವರ

ಬೆಟ್ಟದಲ್ಲಿ

ಕ್ಯಾಬಿನೆಟ್...

 

ಎತ್ತರ 

ಪ್ರದೇಶದಲ್ಲಿಯಾದರೂ

ರಾಜಕಾರಣಿಗಳ

ಪ್ರಜಾಹಿತಬುದ್ಧಿ-

ಚಿಗುರಬಹುದೇನೋ

ಬಹುಪರಾಕ್!

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್