ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ‘ವಾಸುವೇಟ್ಟಾ’ಗೆ ನುಡಿನಮನ...

ನಾನು ಪ್ರೀತಿಯಿಂದ 'ವಾಸುವೇಟ್ಟಾ' ಎಂದು ಕರೆಯುತ್ತಿದ್ದ ಪ್ರಿಯ ಲೇಖಕ, ಮಲೆಯಾಳ ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ. ಮನಸ್ಸು ಭಾರವಾಗಿದೆ. ವಯಸ್ಸು ಆಗಿದ್ದರೂ ನಮಗೆ ಹತ್ತಿರವಾದವರು ಎಷ್ಟು ಕಾಲ ನಮ್ಮ ಜತೆಗಿದ್ದರೂ ಅದು ಕಡಿಮೆಯೇ ಅನ್ನಿಸುವುದು ಸಹಜ.

Image

ಬಿಡುಗಡೆಯ ಹಾಡುಗಳು (ಭಾಗ ೧೪) - ಜಿ. ನಾರಾಯಣ

ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು. ೧೯೨೩ ಸೆಪ್ಟೆಂಬರ್ ೨ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

Image

ಆಂತರಿಕ ಭದ್ರತೆಗೆ ಮಾರಕ

ಖಲಿಸ್ತಾನಿ ಭಯೋತ್ಪಾದಕರು ದೇಶದ ಆಂತರಿಕ ಭದ್ರತೆಗೆ ಹೊಸ ಸವಾಲಾಗಿ ಪರಿಣಮಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪಂಜಾಬಿನ ಗುರುದಾಸಪುರ್ ದಲ್ಲಿ ಪೋಲೀಸರ ಮೇಲೆಯೇ ಗ್ರೆನೇಡ್ ಎಸೆದ ಪ್ರಕರಣದಲ್ಲಿ ಈ ಉಗ್ರರ ಎನ್ ಕೌಂಟರ್ ನಡೆದಿದೆ.

Image

ಮರೆತರೋ, ನಿರ್ಲಕ್ಷಿಸಿದರೋ, ಮಾರಿಕೊಂಡರೋ, ವಿವೇಚನೆಯನ್ನು...

ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರನೇ ದಿನ. ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಸಂಸ್ಕೃತಿಯ ಅತ್ಯಂತ ಮಹತ್ವದ ನುಡಿ ಹಬ್ಬ.

Image

ಸ್ಟೇಟಸ್ ಕತೆಗಳು (ಭಾಗ ೧೧೮೨) - ಉಡುಗೊರೆ

ಎಲ್ಲರ ಮುಖದಲ್ಲಿ ಕಾಯುವಿಕೆಯ ನೆರಳು ಕಾಣುತ್ತಿತ್ತು. ಕೆಲವರಲ್ಲಿ ಅದು ಸಂಭ್ರಮದಿಂದ ಸರಿದು ಮಾಯವಾದರೆ, ಕೆಲವರಿಗೆ ನಿರಾಶೆಯ ಮೋಡ ಕವಿದು ಕಾಯುವಿಕೆ ಬೇಸರಿಸಿಕೊಳ್ಳುತ್ತಾ ಹೋಯಿತು. ಪುಟ್ಟ ಕಾರ್ಯಕ್ರಮದ ಆಯೋಜನೆ ಗುರುತಿಲ್ಲದ ವ್ಯಕ್ತಿಯಿಂದ ಉಡುಗೊರೆಯೊಂದು ದಾಟ ಬೇಕಾಗಿತ್ತು. ಕೆಲವರು ಯೋಚಿಸಿ ಉಡುಗೊರೆ ಪಡೆದುಕೊಳ್ಳುವವನ ಮನಸ್ಸಿಗೆ ಇಷ್ಟವಾಗುವ ತರಹದ ಪಟ್ಟಿಗಳನ್ನ ತಯಾರು ಮಾಡಿ ಉಡುಗೊರೆಗಳನ್ನ ನೀಡಿದರು.

Image

ನಿಷ್ಪಾಪಿ ಸಸ್ಯಗಳು (ಭಾಗ ೮೦) - ಸರೊಳಿ ಗಿಡ

ನಿಮ್ಮ ಮನೆಯಲ್ಲಿ ದನ ಕರುಗಳು ಇದ್ದರೆ ಅವುಗಳನ್ನು ಗುಡ್ಡದ ತಪ್ಪಲಿಗೆ ಅಥವಾ ಹುಲ್ಲಿನ ಗದ್ದೆಗಳಿಗೆ ಕೊಂಡೊಯ್ದು ಮೇಯಿಸುವ ಅವಕಾಶ ನಿಮಗೆ ಸಿಕ್ಕರೆ ಯಾವತ್ತೂ ಕಳೆದುಕೊಳ್ಳದಿರಿ. ಏಕೆಂದರೆ ಅವುಗಳು ತನ್ಮಯತೆಯಿಂದ ಮೇಯುವುದನ್ನು ಕಾಣುವುದೇ ಒಂದು ಸೊಗಸು!.

Image

ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ

"ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ” - ಅರಿಸ್ಟಾಟಲ್. " ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ " ವಚನ ಸಂಸ್ಕೃತಿ. ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ.

Image

ಹಾಗಲಕಾಯಿ ಗೊಜ್ಜು

Image

ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ದಪ್ಪವಿರಬೇಕು. ಇದಕ್ಕೆ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಈಗ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ.

ಬೇಕಿರುವ ಸಾಮಗ್ರಿ

ಹಾಗಲಕಾಯಿ ೧, ಹುಣಸೆಹಣ್ಣು ದೊಡ್ಡ ನೆಲ್ಲಿಕಾಯಿ ಗಾತ್ರ, ಹಸಿಮೆಣಸು ೨, ಅಚ್ಚ ಖಾರದ ಪುಡಿ ೧/೨ ಚಮಚ, ಬೆಲ್ಲ ೧/೨ ಅಚ್ಚು, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು ೧, ಸಾಸಿವೆ ೧ ಚಮಚ, ಎಣ್ಣೆ ೧ ಚಮಚ, ಬೆಳ್ಳುಳ್ಳಿ ೩ ಎಸಳು, ಕರಿಬೇವಿನ ಸೊಪ್ಪು.