ಹಾಗಲಕಾಯಿ ಗೊಜ್ಜು
ಬೇಕಿರುವ ಸಾಮಗ್ರಿ
ಹಾಗಲಕಾಯಿ ೧, ಹುಣಸೆಹಣ್ಣು ದೊಡ್ಡ ನೆಲ್ಲಿಕಾಯಿ ಗಾತ್ರ, ಹಸಿಮೆಣಸು ೨, ಅಚ್ಚ ಖಾರದ ಪುಡಿ ೧/೨ ಚಮಚ, ಬೆಲ್ಲ ೧/೨ ಅಚ್ಚು, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು ೧, ಸಾಸಿವೆ ೧ ಚಮಚ, ಎಣ್ಣೆ ೧ ಚಮಚ, ಬೆಳ್ಳುಳ್ಳಿ ೩ ಎಸಳು, ಕರಿಬೇವಿನ ಸೊಪ್ಪು.
ತಯಾರಿಸುವ ವಿಧಾನ
ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ದಪ್ಪವಿರಬೇಕು. ಇದಕ್ಕೆ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಈಗ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ.
- ಸಹನಾ ಕಾಂತಬೈಲು, ಮಡಿಕೇರಿ