ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್

[:http://fedora.redhat.com/|ಫೆಡೋರಾ ೬] ನೇ ಅವೃತ್ತಿಯಲ್ಲಿ ಹೊಸತೊಂದು ಕನ್ನಡ ಯೂನಿಕೋಡ್ ಫಾಂಟ್ ಬಿಡುಗಡೆ ಮಾಡಿದ್ದಾರೆ. ಫಾಂಟ್ ಹೆಸರು ಲೋಹಿತ್ ಕನ್ನಡ. ಇತ್ತೀಚೆಗೆ ನನ್ನ ಸ್ನೇಹಿತನಿಂದ ಈ ವಿಷಯ ತಿಳಿಯಿತು. ಆದರೆ ಉಳಿದೆಲ್ಲ ಫಾಂಟುಗಳಂತೆ ಈ ಫಾಂಟ್ ಕೂಡ ಸಂಪೂರ್ಣಗೊಂಡಿಲ್ಲ. ಸುಮಾರು ತಪ್ಪುಗಳಿವೆ.

ಗಣಕಗಳಲ್ಲಿ ಕನ್ನಡ : ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಮುಂದುವರೆದ ಬೆಂಬಲ

ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.

ಸಂಪದದ ಜನಪ್ರಿಯ ಪುಟಗಳು...

ಇಲ್ಲಿಯವರೆಗೂ ಹೆಚ್ಚು ಓದಲ್ಪಟ್ಟ ಸಂಪದದ ಪುಟಗಳ ಪಟ್ಟಿಯನ್ನು ಸದಸ್ಯರು [:http://sampada.net/popular|ಇಲ್ಲಿ ವೀಕ್ಷಿಸಬಹುದು]. ಪ್ರತಿ ದಿನದ ಜನಪ್ರಿಯ ಲೇಖನಗಳೊಂದಿಗೆ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಓದಲ್ಪಟ್ಟ ಪುಟಗಳ ಪಟ್ಟಿಯೂ ಲಭ್ಯ.

ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್

ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "[:http://sampada.net/node/add/event|Add content to Sampada -> event]" ಕ್ಲಿಕ್ ಮಾಡಿ (ಲಾಗಿನ್ ಅವಶ್ಯಕ).

ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ

'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!

ರಾಶಿ ರಾಶಿ ಭವಿಷ್ಯ

ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ! (bogaleragale.blogspot.com)