ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸ ವರ್ಷ, ಹೊಸ resolution ಮತ್ತು ಉಡುಗೊರೆ!

ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ. (bogaleragale.blogspot.com)

ಗೃಹಲಕ್ಷ್ಮಿಗೆ

ನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು 
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!

ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!

ಸಂಪದ ಬಳಗದ ಸಮಸ್ತ ಗೆಳೆಯರಿಗೆ ಹೊಸ ವರುಷ ಹೊಸ ಹರುಷ ತರಲಿ

...ಹೊಸ ಗೆಳ(ತಿ)ಯರು ಸಿಗಲಿ...ಎಲ್ಲವೂ ಒಳ್ಳೆಯದಾಗಲೆಂದು ಆಶಿಸುತ್ತಾ ಹೊಸ ವರುಷದ ಶುಭಾಶಯಗಳು...!
--
ವಂದನೆಗಳೊಂದಿಗೆ....
ಅರೇಹಳ್ಳಿ ರವಿ, ಕನ್ನಡಸಾಹಿತ್ಯಡಾಟ್‌ಕಾಂ

ಸುಭಾಷಿತ

ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು.
ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?
ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ!
(ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ.
ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ)

ಸುಭಾಷಿತ

ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ
ಎನಿಸಿಕೊಳ್ಳುವುದೋ, ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ.