ಮತ್ತೊಂದಿಷ್ಟು ತರಲೆ ಕವನಗಳು
ಆತ್ಮಹತ್ಯೆ ಮಾಡಿಕೊಳ್ಳೋಣ
ನಾನು: ಗೆಳೆಯ! ಈ ಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸಿದೆ
ಯಾವುದು ಲೇಸು? ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಳ್ಳಲೆ?
ಟಿಕ್-೨೦ ಕುಡಿದು ತಿಗಣೆಯಂತೆ ಒದ್ದಾಡಿ ಸತ್ತುಹೋಗಲೆ?
ಸ್ಲೀಪಿಂಗ್ ಪಿಲ್ಲುಗಳ ಸೇವಿಸಿ ನಿದ್ರೆಯಲ್ಲಿ ಶಾಶ್ವತ ಪವಡಿಸಲೆ?
ಯುಟಿಲಿಟಿ ಬ್ಯುಲ್ಡಿಂಗಿನಿಂ ಜಂಪಿಸಿ ಕ್ಷಣದಲೇ ಉಸಿರನು ಬಿಡಲೆ?
ಟ್ರೈನಿಗೆ ತಲೆ ನೀಡಿ ಚಟ್ನಿಯಾಗಿ ಕಾಗೆಗಳ ಹೊಟ್ಟೆ ತುಂಬಿಸಲೆ?
ಗೆಳೆಯ: ಇದ್ಯಾವುದು ಬೇಡ ಮಿತ್ರ! ಅಪ್ಪಿತಪ್ಪಿ ಬದುಕುಳಿಯಬಹುದು
ಟೈಂ ಟೆಸ್ಟೆಡ್ ವಿಧಾನವ ಉಸುರುವೆ! ಈಗಲೇ ಮದುವೆಯಾಗು!!
-------------
ನತದೃಷ್ಟ
ನಾನು ಬದುಕಲ್ಲಿ ಬಯಸಿದ ಎಲ್ಲವೆಲ್ಲ ವಸ್ತುಗಳು
ಕಾನೂನು ವಿರುದ್ಧವಾಗಿವೆ, ದುಬಾರಿಯಾಗಿವೆ
ಇಲ್ಲವೇ ಮತ್ತೊಬ್ಬರನ್ನು ಮದುವೆಯಾಗಿಬಿಟ್ಟಿವೆ!
------------
ಮಾರ್ಗದರ್ಶನ ಬೇಕಿದೆ
ಸೋಮಾರಿತನ ನಮ್ಮೆಲ್ಲರ ಶತ್ರು ಎಂದರು ಚಾಚಾಜಿ
ನಿಮ್ಮ ಶತ್ರುಗಳನ್ನು ಪ್ರೀತಿಸಿ ಎಂದರು ಗಾಂಧೀಜಿ
ಗೆಳೆಯ! ಏನು ಮಾಡಲಿ? ಯಾರ ಮಾತ ಕೇಳಲಿ?
------------
ಸತ್ಯ
೧೦% ರಷ್ಟು ರಸ್ತೆ ಅಪಘಾತಗಳು ಕುಡುಕರಿಂದ ಆಗುತ್ತವೆಯಂತೆ
ಅಂದರೆ ೯೦%ರಷ್ಟು ಕುಡಿಯದವರಿಂದ ಆಗುತ್ತವೆಯೆಂದಾಯಿತು!
ಇದು ದಿಟವಾಗಿದ್ದಲ್ಲಿ, ಬಾ ಗೆಳೆಯ ಈಗಲೇ ಕ್ವಾರ್ಟರನ್ನೇರಿಸುವ!!
------------
ಕ್ರೌರ್ಯ
ಮಡದಿಯ ಬತ್ತೀಸ ರಾಗ ದಿನ ದಿನ ಕೇಳಿ ಕೇಳಿ ಕಿವುಡಾದ
ಪತಿ ಪುರುಷೋತ್ತಮ ಎಸೆದನು ತನ್ನವಳ ಮೊಸಳೆಯ ಬಾಯಿಗೆ!
ಈಗ ಎದುರಿಸುತ್ತಿದ್ದಾನೆ ಪ್ರಾಣಿ ದಯಾಸಂಘದ ಮೊಕದ್ದಮ್ಮೆ
ಫಾರ್ ಬೀಯಿಂಗ್ ವೆರಿ ವೆರಿ ಕ್ರುಯೆಲ್ ಟು ದಿ ಮೊಸಳೆಗೆ!!
-ನಾಸೋ
Comments
ಉ: ಮತ್ತೊಂದಿಷ್ಟು ತರಲೆ ಕವನಗಳು
In reply to ಉ: ಮತ್ತೊಂದಿಷ್ಟು ತರಲೆ ಕವನಗಳು by Indushree
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
In reply to ಉ: ಮತ್ತೊಂದಿಷ್ಟು ತರಲೆ ಕವನಗಳು by naasomeswara
ಉ: ಮತ್ತೊಂದಿಷ್ಟು ತರಲೆ ಕವನಗಳು
In reply to ಉ: ಮತ್ತೊಂದಿಷ್ಟು ತರಲೆ ಕವನಗಳು by naasomeswara
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
In reply to ಉ: ಮತ್ತೊಂದಿಷ್ಟು ತರಲೆ ಕವನಗಳು by raghava
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು
In reply to ಉ: ಮತ್ತೊಂದಿಷ್ಟು ತರಲೆ ಕವನಗಳು by drmadhu
ಉ: ಮತ್ತೊಂದಿಷ್ಟು ತರಲೆ ಕವನಗಳು
ಉ: ಮತ್ತೊಂದಿಷ್ಟು ತರಲೆ ಕವನಗಳು